Breaking News

Mahindra ಹೊಸ ದಾಖಲೆ: ಜುಲೈನಲ್ಲಿ 1.03 ಲಕ್ಷಕ್ಕೂ ಅಧಿಕ ವಾಹನ ಮಾರಾಟ, 26% ಬೆಳವಣಿಗೆ

Mahindra July 2026 Sales

ದೇಶದ ಪ್ರಮುಖ ವಾಹನ ತಯಾರಕ ಮಹೀಂದ್ರಾ & ಮಹೀಂದ್ರಾ (Mahindra & Mahindra) 2026ರ ಜುಲೈ ತಿಂಗಳಲ್ಲಿ ಮತ್ತೊಮ್ಮೆ ಭರ್ಜರಿ ಮಾರಾಟ ಸಾಧನೆ ದಾಖಲಿಸಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 60,048 ಪ್ಯಾಸೆಂಜರ್ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 49,871 ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 20 ವಾರ್ಷಿಕ ಬೆಳವಣಿಗೆ ದಾಖಲಿಸಿದೆ.

ಕಂಪನಿಯ ಮಾಹಿತಿ ಪ್ರಕಾರ, ರಫ್ತು ಸೇರಿದಂತೆ ಒಟ್ಟು 60,887 ಪ್ಯಾಸೆಂಜರ್ ವಾಹನಗಳು ಮಾರಾಟವಾಗಿವೆ. ಇದೇ ವೇಳೆ ವಾಣಿಜ್ಯ ವಾಹನಗಳ ಉತ್ತಮ ಬೇಡಿಕೆಯೂ ಒಟ್ಟಾರೆ ಮಾರಾಟಕ್ಕೆ ಬಲ ನೀಡಿದ್ದು, ಜುಲೈ ತಿಂಗಳಲ್ಲಿ ಒಟ್ಟು 1,03,860 ವಾಹನಗಳು ಮಾರಾಟವಾಗಿವೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 26 ಹೆಚ್ಚಳವಾಗಿದೆ. ಮಹೀಂದ್ರಾದ ಎಸ್‌ಯುವಿ (SUV) ಮಾದರಿಗಳಿಗೆ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ನಿರಂತರ ಬೇಡಿಕೆ ಮುಂದುವರಿದಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: E20 ಇಂಧನ: ದೇಶದಲ್ಲಿ ಸಂಪೂರ್ಣ ಹೊಂದಾಣಿಕೆಯಾಗುವ ವಾಹನಗಳ ಶೇಕಡಾವಾರು ಮೌಲ್ಯಮಾಪನ ಮಾಡಿಲ್ಲ: ಸಂಸತ್ತಿಗೆ ಕೇಂದ್ರದ ಮಾಹಿತಿ

2026-27ನೇ ಹಣಕಾಸು ವರ್ಷದ ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿ ಮಹೀಂದ್ರಾ 2,34,793 ಪ್ಯಾಸೆಂಜರ್ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 2,01,938 ವಾಹನಗಳ ಮಾರಾಟಕ್ಕೆ ಹೋಲಿಸಿದರೆ 16 ಶೇಕಡಾ ಏರಿಕೆ ಕಂಡಿದೆ. ಕಂಪನಿಯ ಆಟೋಮೋಟಿವ್ ವಿಭಾಗದ ಸಿಇಒ ನಲಿನಿಕಾಂತ್ ಗೊಲ್ಲಗುಂಟ ಅವರು, “ಜುಲೈನಲ್ಲಿ 60,048 ಎಸ್‌ಯುವಿಗಳು ಹಾಗೂ ಒಟ್ಟು 1,03,860 ವಾಹನಗಳನ್ನು ಮಾರಾಟ ಮಾಡಿದ್ದೇವೆ. ಇದು ನಮ್ಮ ಉತ್ಪನ್ನಗಳ ಮೇಲಿನ ಗ್ರಾಹಕರ ವಿಶ್ವಾಸ ಹಾಗೂ ನಿರಂತರ ಬೇಡಿಕೆಯನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *