ಅಂಬೇಡ್ಕರ್ ಅವರನ್ನು ವ್ಯಕ್ತಿ ಎನ್ನುವುದಕ್ಕಿಂತ ಶಕ್ತಿ  ಎಂದರೆ ತಪ್ಪಾಗಲಾರದು : ವಿಜಯಲಕ್ಷ್ಮಿ

ಮೂಡೂಬಿದಿರೆ : ಡಾ. ಬಿ ಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಎಸ್ ಸಿ, ಎಸ್ ಟಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಬೇಡ್ಕರ್ ಅವರನ್ನು ವ್ಯಕ್ತಿ ಎನ್ನುವುದಕ್ಕಿಂತ ಶಕ್ತಿ ಎಂದರೆ ತಪ್ಪಾಗಲಾರದು.ಅವರು ಸಾಮಾಜಿಕ ಸುಧಾರಕರು, ಸಮಾಜದ ಚಿಂತಕರು ಸಮಾಜದ ಜನರನ್ನು ಎತ್ತಿ ಹಿಡಿಯುವಂತ ಶಕ್ತಿಯಾಗಿ ಕೆಲಸ ಮಾಡಿದರು. ಬಾಲ್ಯದಿಂದ ಹಿಡಿದು ಉನ್ನತ ಶಿಕ್ಷಣದವರೆಗು ಈ ಸಮಾಜವು ಗುರುತಿಸದೆ ಅವಮಾನಿಸುತ್ತ ಬಂದಿತು.

ಸಮಾಜದಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಅಂಬೇಡ್ಕರ್ ಅವರು ಅವಮಾನಕ್ಕೆ ಒಳಗಾದರು. ಅವಮಾನವನ್ನೇ ಶಕ್ತಿಯನ್ನಾಗಿ ರೂಪಿಸಿಕೊಂಡರು. ಶಿಕ್ಷಣ ಎಂಬುವ ಅಸ್ತ್ರವನ್ನು ಇಟ್ಟುಕೊಂಡು ದೇಶ ವಿದೇಶಗಳಿಗೆ ತೆರಳಿ ಉನ್ನತ ಶಿಕ್ಷಣವನ್ನು ಪಡೆದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ಅವರು ಶಿಕ್ಷಣದ ತಜ್ಞರಾಗಿ ನಮ್ಮ ಸಂವಿಧಾನವನ್ನು ಕಟ್ಟಿ ಕೊಟ್ಟಂತಹ ನಾಯಕರು . ರಾಷ್ಟ್ರವನ್ನು ಹೇಗೆ ಕಟ್ಟಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

Advertisement

ಇದನ್ನೂ ಓದಿ ಉನ್ನತ ಶಿಕ್ಷಣಕ್ಕೆ ಬಲ; 2,000 ಬೋಧಕ ಸಿಬ್ಬಂದಿ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಅಸ್ತು!

ಯಾರು ಕತ್ತಲೆಯನ್ನು ಹರಿಯುವದಕ್ಕೆ ಸಾಧ್ಯವಿಲ್ಲ ಅವರು ಬೆಳಕನ್ನು ಹುಡುಕುವ ಪ್ರಯತ್ನ ಮಾಡೋದಿಲ್ಲ, ಬೆಳಕನ್ನು ಹುಡುಕುವುದಿಲ್ಲ ಎಲ್ಲವು ನಮಗೆ ಸುಖಕರವಾಗಿದೆ , ಸಂತೋಷಕರವಾಗಿದೆ , ಎಂದರೆ ದುಃಖದ ಹರಿವು ನಮಗೆ ಇರುವುದಿಲ್ಲ ಕತ್ತಲೆಯಲ್ಲಿ ಇದ್ದಾಗ ಬೆಳಕು ಎಂದರೆ ಏನು ಆ ಬೆಳಕನ್ನು ನಾವು ಹೇಗೆ ಪಡೆಯಬೇಕು ಎಂಬುವ ಚಿಂತನೆಯನ್ನು ಅಂಬೇಡ್ಕರ್ ಅವರು ಮಾಡಿದ್ದರು. ಜಾತಿ ಲಿಂಗ ತಾರತಮ್ಯ ಅಸ್ಪೃಶ್ಯತೆ ಅಲ್ಲದೆ ಮಹಿಳೆಯರ ಉದ್ದಾರಕ್ಕಾಗಿಯು ಶ್ರಮಿಸಿದಂತ ಡಾ. ಅಂಬೇಡ್ಕರ್ ಅವರನ್ನು ನಾವು ಸಂವಿಧಾನದ ಶಿಲ್ಪಿ ಎಂದು ಗೌರವಿಸುತ್ತೇವೆ ಎಂದರು

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಿಲಯ ಪಾಲಕಿ ಭಾಗ್ಯವತಿ ಅವರು ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ಅವರು ಕೊಡುಗೆ ಏನಂದರೆ ಅಸ್ಪೃಶ್ಯತೆ ಸಮಾನತೆಗಾಗಿ ಹೋರಾಡಿ ನಮಗೆ ಸಂವಿಧಾನದಲ್ಲಿ ಸಮಾನತೆ ಹಕ್ಕು, ಸ್ವತಂತ್ರ ಹಕ್ಕುಗಳಂತ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ನೀವು ಉತ್ತಮ ಶಿಕ್ಷಣವನ್ನು ಪಡೆಯಿರಿ ನೀವು ನಿಮ್ಮ ಭವಿಷ್ಯವನ್ನು ಬದಲಾವಣೆಗೆ ಮಾಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರ್ ಪ್ರಾರ್ಥನೆಯನ್ನು ಹಾಡಿದರು.ನಾಗರಾಜ್ ಸ್ವಾಗತಿಸಿ .ಸಂತೋಷ ಬನಸೋಡೆ ನಿರೂಪಿಸಿ . ಮಂಜುನಾಥ್. ಎಚ್ ವಂದಿಸಿದರು

Advertisement

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು