ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಅರ್ಹ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ರೇಷನ್ ಕಾರ್ಡ್ ಸೌಲಭ್ಯವು ದುರುಪಯೋಗವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮ ಮಕ್ಕಳನ್ನು ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಕಳುಹಿಸುವ ಪೋಷಕರ ಬಿಪಿಎಲ್ ಕಾರ್ಡ್‌ಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ ಯುವಕರೊಬ್ಬರು ಉಪಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೊಸಗರದ ಯುವಕರೊಬ್ಬರು ಈ ಪತ್ರವನ್ನು ಬರೆದಿದ್ದು, ಸಾರ್ವಜನಿಕ ವಲಯದಲ್ಲಿ ಹಾಗೂ ಪೋಷಕರಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಶ್ರೀಮಂತರಿಗೆ BPL ಸೌಲಭ್ಯ?: ನಗರ ಪ್ರದೇಶಗಳಲ್ಲಿ 2-3 ಮನೆಗಳನ್ನು ಬಾಡಿಗೆಗೆ ನೀಡಿರುವವರು ಹಾಗೂ ರೇಷನ್ ಅಂಗಡಿಗಳ ಮುಂದೆ ದುಬಾರಿ ಕಾರು, ಬೈಕ್‌ಗಳಲ್ಲಿ ಬಂದು ರೇಷನ್ ಪಡೆಯುತ್ತಿರುವವರ ಸರಣಿ ಆರೋಪಗಳ ನಡುವೆಯೇ ಈ ಪತ್ರ ಹೊರಬಿದ್ದಿದೆ.
“ಲಕ್ಷಾಂತರ ರೂಪಾಯಿ ಡೊನೇಷನ್ ಹಾಗೂ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪೋಷಕರು ಬಡತನ ರೇಖೆಗಿಂತ ಕೆಳಗಿರಲು ಹೇಗೆ ಸಾಧ್ಯ?” ಎಂದು ಪತ್ರದಲ್ಲಿ ನೇರವಾಗಿ ಪ್ರಶ್ನಿಸಲಾಗಿದೆ. ರಾಜ್ಯದಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿವೆ. ಅನೇಕ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ರ್ಯಾಂಕ್ ಗಳಿಸಿ, ಉನ್ನತ ಹುದ್ದೆಗೇರಿದ್ದಾರೆ. ಹಾಗಿರುವಾಗ ಬಿಪಿಎಲ್ ಪಡೆದು ಖಾಸಗಿ ಶಾಲೆಗೆ ಕಳುಹಿಸುವುದು ಸರ್ಕಾರದ ಸೌಲಭ್ಯದ ದುರುಪಯೋಗ ಎಂದು ಯುವಕ ವಾದಿಸಿದ್ದಾರೆ.
ಇದೇ ಪತ್ರದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಹಾಗೂ ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದೂ ಮನವಿ ಮಾಡಲಾಗಿದೆ. ಆಕ್ಷೇ”ಅನೇಕ ಬಡ ಪೋಷಕರು ತಾವು ಕಷ್ಟಪಟ್ಟರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂಬ ಆಸೆಯಿಂದ ಹೊಟ್ಟೆ-ಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸಿರುತ್ತಾರೆ. ಖಾಸಗಿ ಶಾಲೆಗೆ ಕಳುಹಿಸಿದ ತಕ್ಷಣವೇ ಅವರನ್ನು ಶ್ರೀಮಂತರು ಎಂದು ಪರಿಗಣಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ನ್ಯಾಯವಲ್ಲ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: “ಕುಮಾರಸ್ವಾಮಿ ನಿಂದಿಸಲು ಸಮಯವಿದೆ, ಕ್ಷೇತ್ರಕ್ಕೆ ಸಮಯವಿಲ್ಲ”: ಜೆಡಿಎಸ್ ಆರೋಪಗಳೇನು?
“ನಿಜವಾದ ಬಡವರಿಗೆ ರೇಷನ್ ಸಿಗದೆ ಅನರ್ಹರು ಸೌಲಭ್ಯ ಪಡೆಯುತ್ತಿದ್ದಾರೆ. ಈ ರೀತಿ ಕಟ್ಟುನಿಟ್ಟಿನ ಮಾನದಂಡ ತಂದರೆ ಮಾತ್ರ ಸೌಲಭ್ಯಗಳು ನೈಜ ಅರ್ಹರಿಗೆ ತಲುಪಲು ಸಾಧ್ಯ” ಎಂದು ಮತ್ತೊಂದೆಡೆ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅನರ್ಹ ಬಿಪಿಎಲ್ ಕಾರ್ಡ್‌ಗಳ ಏರ್‌ಸರ್ಜಿ ನಡೆಸಲು ಮುಂದಾಗಿರುವ ಬೆನ್ನಲ್ಲೇ ಈ ನೂತನ ಪತ್ರವು ಶಿಕ್ಷಣ ಮತ್ತು ಆಹಾರ ಇಲಾಖೆಯ ವಲಯದಲ್ಲೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

