ಕ್ರಾನ್ಸ್: ಪ್ರತಿ ವರ್ಷದಂತೆ ಈ ಬಾರಿಯೂ ಜಾಗತಿಕ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ‘ಕಾನ್ಸ್ ಚಲನಚಿತ್ರೋತ್ಸವ 2026’ ರ ವೇದಿಕೆಯಲ್ಲಿ ಬಾಲಿವುಡ್ ಅಪ್ರತಿಮ ಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಎಂದಿನ ರಾಜಗಾಂಭೀರ್ಯದೊಂದಿಗೆ ಧೂಳೆಬ್ಬಿಸಿದ್ದಾರೆ. ಮೇ 12 ರಿಂದ ಆರಂಭವಾಗಿರುವ ಈ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಳ್ಳದಿದ್ದಾಗ, ಈ ಬಾರಿ ಅವರು ಭಾಗವಹಿಸುತ್ತಿಲ್ಲವೇ ಎಂಬ ಆತಂಕ ಮತ್ತು ವದಂತಿಗಳು ಅಭಿಮಾನಿಗಳಲ್ಲಿ ಎದ್ದಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿ, ತಮ್ಮ ಮಗಳು ಆರಾಧ್ಯಾ ಬಚ್ಚನ್ ಜೊತೆ ಫ್ರಾನ್ಸ್‌ಗೆ ಹಾರಿದ್ದ ‘ಕ್ವೀನ್ ಆಫ್ ಕಾನ್ಸ್’ ಐಶ್ವರ್ಯಾ, ರೆಡ್ ಕಾರ್ಪೆಟ್ ಮೇಲೆ ಜಾದೂ ಮಾಡಿದ್ದಾರೆ.
ಈ ಬಾರಿ ಐಶ್ವರ್ಯಾ ರೈ ಅವರು ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ವಿಶಿಷ್ಟವಾದ ‘ಲುಮಿನಾರಾ’ (Luminara) ಹೆಸರಿನ ಸ್ಕಲ್ಪ್ಟೆಡ್ ಬ್ಲೂ ಗೌನ್‌ನಲ್ಲಿ (Sculpted Blue Gown) ದೇವತೆಯಂತೆ ಕಾಣಿಸಿಕೊಂಡಿದ್ದಾರೆ. ಮರ್ಮೈಡ್ ಫಿನಿಶ್ (ಜಲಕನ್ಯೆಯ ರೂಪದ ಶೈಲಿ) ಹೊಂದಿದ್ದ ಈ ನೀಲಿ ಬಣ್ಣದ ಅದ್ಭುತ ಉಡುಪಿನೊಂದಿಗೆ ಅವರು ಮಿನುಗುವ ದುಪಟ್ಟಾವನ್ನು ಧರಿಸಿದ್ದರು. ಡಿಸೈನರ್ ಪ್ರಕಾರ, ಈ ಉಡುಪನ್ನು ಕೇವಲ ಬಟ್ಟೆಯಾಗಿ ಅಲ್ಲದೆ, ಐಶ್ವರ್ಯಾ ಅವರ ಸುತ್ತಲಿನ ಒಂದು ಶಕ್ತಿಯ ಕ್ಷೇತ್ರ ಮತ್ತು ಬೆಳಕಿನ ಚಲನೆಯ ತತ್ವದ (Light in Motion) ಆಧಾರದ ಮೇಲೆ ಅತ್ಯಂತ ಸೂಕ್ಷ್ಮ ಕೈಚಳಕದಿಂದ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿನಿಮಾ ಸ್ಟೈಲ್ ಕಳ್ಳತನ: ಮನೆಯಿಂದ ಎಸ್ಕೇಪ್ ಆಗುವಾಗ ಗೇಟ್ ಸರಳಿನಲ್ಲಿ ಸಿಲುಕಿಕೊಂಡ ಕಳ್ಳ!
ಇಲ್ಲಿದೆ ನೋಡಿ ವಿಡಿಯೋ:
View this post on Instagram
ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಐಶ್ವರ್ಯಾ ಅವರು ಸುರುಳಿಯಾಕಾರದ ಕೇಶವಿನ್ಯಾಸ (Loose Curls), ಗುಲಾಬಿ ವರ್ಣದ ಮೇಕಪ್ ಹಾಗೂ ಡೈಮಂಡ್ ಮತ್ತು ನೀಲಿ ಹರಳುಗಳಿರುವ ಆಭರಣಗಳನ್ನು ಧರಿಸಿದ್ದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿ ನೆರೆದಿದ್ದ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಸಾಂಪ್ರದಾಯಿಕ ‘ನಮಸ್ತೆ’ ಮೂಲಕ ಶುಭಕೋರಿದ ಐಶ್ವರ್ಯಾ, ಫ್ಲೈಯಿಂಗ್ ಕಿಸ್ ಹಾಗೂ ಫಿಂಗರ್ ಹಾರ್ಟ್ಸ್ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದರು. ಇದೇ ವೇಳೆ ತಮ್ಮ ಆಪ್ತ ಗೆಳತಿ ಹಾಗೂ ಲೋರಿಯಲ್ (L’Oreal) ಜಾಗತಿಕ ರಾಯಭಾರಿ ಇವಾ ಲೊಂಗೊರಿಯಾ ಅವರೊಂದಿಗೆ ಪೋಸ್ ನೀಡಿ, ಮೋನಿಕಾ ಬೆಲ್ಲುಸಿ ನಟನೆಯ ‘ದಿ ಬರ್ತ್‌ಡೇ ಪಾರ್ಟಿ’ ಚಿತ್ರದ ಪ್ರೀಮಿಯರ್ ಪ್ರದರ್ಶನದಲ್ಲಿ ಭಾಗಿಯಾದರು.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


