ಆಕಾಶದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಕಾಕ್ಪಿಟ್ನಲ್ಲಿ ನಡೆದ ಭೀಕರ ಕೊಲೆ ಯತ್ನ ಹಾಗೂ ಹೈಡ್ರಾಮಾವನ್ನು ಸಾಹಸದಿಂದ ಮೆಟ್ಟಿ ನಿಂತು 170ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಹಾಗೂ ಫ್ಲೈದುಬೈ (flydubai) ಸಿಬ್ಬಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸರ್ಕಾರ ಅತ್ಯುನ್ನತ ರಾಷ್ಟ್ರೀಯ ಗೌರವವನ್ನು ನೀಡಿ ಸನ್ಮಾನಿಸಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪರವಾಗಿ ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅವರು ಕ್ಯಾಪ್ಟನ್ ಮಚ್ಚಾರ್ ಹಾಗೂ ಸಿಬ್ಬಂದಿಗೆ ‘ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II’ ಪದಕವನ್ನು ಪ್ರದಾನ ಮಾಡಿ ಅವರ ಶೌರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನೂ ಓದಿ: ದುಬೈನ ಆಸ್ಪತ್ರೆಗೆ ತೆರಳಿ ಭಾರತದ ವೀರ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ತಬ್ಬಿಕೊಂಡು ಶ್ಲಾಘಿಸಿದ ದುಬೈ ಯುವರಾಜ
ಇತ್ತೀಚೆಗೆ ಬ್ರಿಟನ್ ರಾಜಕಾರಣಿ ಟಾಮಿ ರಾಬಿನ್ಸನ್ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರ ತಲೆಯ ಹಿಂಭಾಗದಲ್ಲಿರುವ ಭಾರಿ ಹೊಲಿಗೆಗಳ ಕಲೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಎಲ್ಲಾ ನಾಯಕರೂ ಸೂಪರ್ಮ್ಯಾನ್ ಕೋಟ್ ಧರಿಸುವುದಿಲ್ಲ, ಕೆಲವರು ಯುದ್ಧದ ಗಾಯದ ಗುರುತುಗಳನ್ನು ಹೊಂದಿರುತ್ತಾರೆ” ಎಂದು ಜಗತ್ತು ಈ ಭಾರತೀಯ ವೀರ ಪೈಲಟ್ಗೆ ಸಲಾಂ ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

