Breaking News

ಫೆಬ್ರವರಿ 1 ಭಾರತ ಬಂದ್! ಕಾರಣ ಗೊತ್ತಾ?

ನವದೆಹಲಿ: ದೇಶದಾದ್ಯಂತ ಯುಜಿಸಿ ನಿಯಮಗಳು ಭಾರೀ ಘರ್ಷಣೆಗೆ ಕಾರಣವಾಗಿದೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದರೂ, ಅವುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಇದಲ್ಲದೇ ಇದರಿಂದ ಕೆರಳಿದ ಕೆಲ ಸಂಘಟನೆಗಳು ಭಾರತ್‌ ಬಂದ್‌ ಘೋಷಣೆ ಮಾಡಿವೆ. ಮೇಲ್ಜಾತಿಗಳೆಂದು ಕರೆಯಲ್ಪಡುವ ಸಮುದಾಯದವರು ಈ ಯುಜಿಸಿ ನಿಯಮಗಳು ತಮ್ಮನ್ನು ಅಪರಾಧಿಗಳಂತೆ ಚಿತ್ರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ,

Read More

Viral Story : ಕರ್ನಾಟಕದ ಬಾಲಕನ ಇಂಗ್ಲಿಷ್ ಕಾಮೆಂಟ್ರಿಗೆ ನೆಟ್ಟಿಗರು ಫಿದಾ

ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ ಪಕ್ಕದಲ್ಲೇ ಕುಳಿತು ನೀಡಿದ ಕಾಮೆಂಟ್ರಿಯಿಂದ ಕರ್ನಾಟಕದ ಬಾಲಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾನೆ. ಜಸ್ವಿತ್ ಕಣ್ಣಡ್ಕ ಎಂಬ ಬಾಲಕನ ಆತ್ಮವಿಶ್ವಾಸಭರಿತ ಹಾಗೂ ಸ್ಪಷ್ಟ ಇಂಗ್ಲಿಷ್ ಕಾಮೆಂಟ್ರಿ ಇದೀಗ ವೈರಲ್ ಆಗಿದೆ.

Read More

ಸಂಪಾಜೆಯಲ್ಲಿ ಭೀಕರ ಅಪಘಾತ: ಆಟೋ ಚಾಲಕ ಸಾವು; ವಿಡಿಯೋ ಇಲ್ಲಿದೆ

ಸಂಪಾಜೆ: ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ಸಂಭವಿಸಿದೆ. 

Read More