ಲೋಸಾನ್ : ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಕಳೆದ ಒಂದು ವರ್ಷದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದರೂ, ಲೋಸಾನ್ ಡೈಮಂಡ್ ಲೀಗ್ ಕೂಟದಲ್ಲಿ ಕೇವಲ 9 ಸೆಂಟಿಮೀಟರ್ ಅಂತರದಿಂದ ಮೊದಲ ಸ್ಥಾನವನ್ನು ಕೈತಪ್ಪಿಸಿಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶ್ರೀಲಂಕಾದ ಉದಯೋನ್ಮುಖ ತಾರೆ ರಮೇಶ್ ಪತಿರಾಗೆ (Rumesh Pathirage) ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
28 ವರ್ಷದ ನೀರಜ್ ಚೋಪ್ರಾ ತಮ್ಮ ಎರಡನೇ ಯತ್ನದಲ್ಲಿ 88.05 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಸಕ್ತ ಸಾಲಿನ ಅತ್ಯುತ್ತಮ ಪ್ರದರ್ಶನ (Season’s Best) ನೋಂದಾಯಿಸಿದರು. ಜೂನ್ 2025ರ ಪ್ಯಾರಿಸ್ ಡೈಮಂಡ್ ಲೀಗ್ (88.16 ಮೀ) ನಂತರ ನೀರಜ್ ಅವರ ಅತ್ಯುತ್ತಮ ಎಸೆತ ಇದಾಗಿದೆ.
ಇದನ್ನೂ ಓದಿ: ಮೊಬೈಲ್ ಫೋನ್ ವಿಚಾರಕ್ಕೆ ಕುಟುಂಬದಲ್ಲಿ ಗಲಾಟೆ: ಪ್ರಪಾತಕ್ಕೆ ಜಿಗಿದು ಒಂದೇ ಕುಟುಂಬದ ಮೂವರ ದಾರುಣ ಸಾವು
23 ವರ್ಷದ ಶ್ರೀಲಂಕಾದ ರಮೇಶ್ ಪತಿರಾಗೆ ತಮ್ಮ ಮೂರನೇ ಯತ್ನದಲ್ಲಿ 88.14 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಅವರಿಗಿಂತ ಕೇವಲ 9 ಸೆಂ.ಮೀ ಮುನ್ನಡೆ ಸಾಧಿಸಿ ಅಗ್ರಸ್ಥಾನ ಗಿಟ್ಟಿಸಿಕೊಂಡರು. ಗ್ರೆನೆಡಾದ ಆಂಡರ್ಸನ್ ಪೀಟರ್ಸ್ ತಮ್ಮ ಅಂತಿಮ (6ನೇ) ಯತ್ನದಲ್ಲಿ 86.69 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.
ಒಂಬತ್ತು ಮಂದಿ ದಿಗ್ಗಜ ಅಥ್ಲೀಟ್‌ಗಳು ಭಾಗವಹಿಸಿದ್ದ ಈ ತೀವ್ರ ಪೈಪೋಟಿಯ ಕೂಟದಲ್ಲಿ ನೀರಜ್ ಮತ್ತೊಮ್ಮೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

