Cricket : ಭಾರತ–ಬಾಂಗ್ಲಾದೇಶ ವೈಟ್‌ಬಾಲ್ ಸರಣಿ 2026: ಬಿಸಿಬಿಸಿ ಪ್ರಕಟಣೆ

ಕ್ರೀಡೆ : ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ 2026ರ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯಲ್ಲಿ ಭಾರತ ಪುರುಷರ ವೈಟ್‌ಬಾಲ್ ಪ್ರವಾಸವನ್ನು ಸೇರಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ಈ ಪ್ರವಾಸದ ಅಂಗವಾಗಿ ಭಾರತ ತಂಡವು ಮೂರು ಏಕದಿನ ಹಾಗೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ ಎಂದು ವರದಿಯಾಗಿದೆ.

ODI ಪಂದ್ಯಗಳು: ಸೆಪ್ಟೆಂಬರ್ 1, 3 ಮತ್ತು 6, T20 ಪಂದ್ಯಗಳು: ಸೆಪ್ಟೆಂಬರ್ 9, 12 ಮತ್ತು 13 ಹಾಗೂ ಭಾರತೀಯ ತಂಡವು ಆಗಸ್ಟ್ 28ರಂದು ಬಾಂಗ್ಲಾದೇಶಕ್ಕೆ ಆಗಮಿಸಲಿದೆ. ಈ ಸರಣಿಯಿಂದಾಗಿ 2026ರಲ್ಲಿ ಬಾಂಗ್ಲಾದೇಶದಲ್ಲಿ ಸಂಪೂರ್ಣ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್ ನಡೆಯಲಿದ್ದು, ದೇಶದಾದ್ಯಂತದ ಅಭಿಮಾನಿಗಳಿಗೆ ಉನ್ನತ ಮಟ್ಟದ ಕ್ರಿಕೆಟ್ ನೇರವಾಗಿ ನೋಡುವ ಅವಕಾಶ ದೊರೆಯಲಿದೆ ಎಂದು ತಿಳಿಸಲಾಗಿದೆ. ಪಂದ್ಯಗಳ ಸ್ಥಳಗಳನ್ನು ನಂತರ ಘೋಷಿಸಲಾಗುತ್ತದೆ ಎಂದು ವರದಿಯಾಗಿದೆ.

Advertisement

ಮೂಲತಃ ಈ ಭಾರತ ಪ್ರವಾಸವು ಆಗಸ್ಟ್ 2025ರಲ್ಲಿ ನಡೆಯಬೇಕಾಗಿತ್ತು. ಆದರೆ ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ, ಎರಡೂ ಕ್ರಿಕೆಟ್ ಮಂಡಳಿಗಳ ಪರಸ್ಪರ ಒಪ್ಪಂದದ ಮೇರೆಗೆ ಈ ಸರಣಿಯನ್ನು ಸೆಪ್ಟೆಂಬರ್ 2026ಕ್ಕೆ ಮುಂದೂಡಲಾಗಿತ್ತು.
ಈ ಕುರಿತು ಕಳೆದ ವರ್ಷ ಜುಲೈನಲ್ಲಿ ಬಿಸಿಸಿಐ ಪ್ರಕಟಣೆ ನೀಡಿದ್ದು, “ಎರಡೂ ತಂಡಗಳ ಅಂತರರಾಷ್ಟ್ರೀಯ ಬದ್ಧತೆಗಳು ಮತ್ತು ವೇಳಾಪಟ್ಟಿ ಅನುಕೂಲತೆಯನ್ನು ಪರಿಗಣಿಸಿ ಸರಣಿಯನ್ನು ಮುಂದೂಡಲಾಗಿದೆ” ಎಂದು ತಿಳಿಸಿತ್ತು. ಇದೀಗ ಬಾಂಗ್ಲಾದೇಶದಲ್ಲಿ ಸ್ಥಿರ ಸರ್ಕಾರ ಇಲ್ಲದ ಹಿನ್ನೆಲೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಪ್ರವಾಸಕ್ಕೆ ಒಪ್ಪಿಗೆ ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Advertisement
News Source : Times Now

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು