ಮೇಷ (Aries): ಇಂದು ನಿಮಗೆ ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಮಂಗಳವಾರವಾದ್ದರಿಂದ ಆಂಜನೇಯನ ಸ್ಮರಣೆ ಶುಭ ತರಲಿದೆ.
ವೃಷಭ (Taurus): ನಿಮ್ಮ ರಾಶಿಯಲ್ಲಿ ಚಂದ್ರನ ಸಂಚಾರವಿರುವುದರಿಂದ ಮಾನಸಿಕ ನೆಮ್ಮದಿ ಇರಲಿದೆ. ಹೊಸ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ.

ಮಿಥುನ (Gemini): ಹೂಡಿಕೆ ಮಾಡುವ ಮುನ್ನ ಅನುಭವೀ ವ್ಯಕ್ತಿಗಳ ಸಲಹೆ ಪಡೆಯಿರಿ. ದೂರದ ಪ್ರಯಾಣದಿಂದ ಆಯಾಸವಾಗಬಹುದು. ವಿದಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
ಕರ್ಕಾಟಕ (Cancer): ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಬರಬೇಕಾಗಿದ್ದ ಹಳೆಯ ಬಾಕಿ ಹಣ ಇಂದು ಕೈ ಸೇರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಸಿಂಹ (Leo): ವೃತ್ತಿಜೀವನದಲ್ಲಿ ಬದಲಾವಣೆ ಕಂಡುಬರಲಿದೆ. ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಕೋಪವನ್ನು ನಿಯಂತ್ರಿಸುವುದು ಅಗತ್ಯ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು.
ಕನ್ಯಾ (Virgo): ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವ್ಯಾಪಾರದಲ್ಲಿ ಲಾಭದಾಯಕ ದಿನವಿದು. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ.

ತುಲಾ (Libra): ಅತಿಯಾದ ಆತ್ಮವಿಶ್ವಾಸ ಅಪಾಯಕ್ಕೆ ಕಾರಣವಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಹಳದಿ ಬಣ್ಣ ಇಂದು ನಿಮಗೆ ಅದೃಷ್ಟ ತರಲಿದೆ.
ವೃಶ್ಚಿಕ (Scorpio): ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಲಕ್ಷಣಗಳಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಆಂಜನೇಯನ ದರ್ಶನ ಮಾಡಿ.
ಧನುಸ್ಸು (Sagittarius): ಶತ್ರುಗಳ ಕಾಟ ಕಡಿಮೆಯಾಗಲಿದೆ. ಕಾನೂನು ವಿಷಯಗಳಲ್ಲಿ ನಿಮಗೆ ಜಯ ಸಿಗಲಿದೆ. ಆಹಾರದ ಬಗ್ಗೆ ಕಾಳಜಿ ಇರಲಿ. ಸಾಲ ನೀಡುವ ಮುನ್ನ ಆಲೋಚಿಸಿ.
ಮಕರ (Capricorn): ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.
ಕುಂಭ (Aquarius): ಭೂಮಿ ಅಥವಾ ಮನೆ ಖರೀದಿಯ ಯೋಗವಿದೆ. ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ನೆರೆಹೊರೆಯವರೊಂದಿಗೆ ಅನಗತ್ಯ ವಾಗ್ವಾದ ಬೇಡ. ಮನಸ್ಸಿಗೆ ಶಾಂತಿ ದೊರೆಯಲಿದೆ.
ಮೀನ (Pisces): ನಿಮ್ಮ ಧೈರ್ಯ ಮತ್ತು ಸಾಹಸ ಇಂದು ಮೆಚ್ಚುಗೆ ಪಡೆಯಲಿದೆ. ಸಣ್ಣ ಪ್ರವಾಸ ಮಾಡುವ ಸಾಧ್ಯತೆ ಇದೆ. ಸೋದರರಿಂದ ಬೆಂಬಲ ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ವಾರ್ತೆ ಲಭಿಸಲಿದೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

