ಇಂದಿನ ದಿನ ಭವಿಷ್ಯ; ಯಾರಿಗೆ ಒಲಿಯಲಿದೆ ಅದೃಷ್ಟ? ಯಾರಿಗೆ ಕಾಯ್ತಿದೆ ಹೆಜ್ಜೆಗೆ ಸವಾಲು? ದ್ವಾದಶ ರಾಶಿಗಳ ಫಲ ಇಲ್ಲಿದೆ!

ಬೆಂಗಳೂರು: ಇಂದಿನ ಪಂಚಾಂಗದ ಪ್ರಕಾರ ಇಂದು ಸಿದ್ಧ ಯೋಗ ಹಾಗೂ ನಿಜ ಜೇಷ್ಠ ದ್ವಾದಶಿಯ ಶುಭ ದಿನವಾಗಿದೆ. ಶುಕ್ರವಾರದ ಈ ದಿನ ಲಕ್ಷ್ಮಿ ದೇವಿಯ ಆರಾಧನೆಗೆ ಅತ್ಯಂತ ಶ್ರೇಷ್ಠವಾಗಿದ್ದು, ಗ್ರಹಗಳ ಗೋಚಾರ ಫಲದ ಪ್ರಕಾರ ಕೆಲವು ರಾಶಿಗಳಿಗೆ ಧನಲಾಭ ಹಾಗೂ ಅದೃಷ್ಟ ಒಲಿದರೆ, ಮತ್ತೆ ಕೆಲವು ರಾಶಿಗಳವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

ಮೇಷ (Aries): ವ್ಯಾಪಾರ ವ್ಯವಹಾರದಲ್ಲಿ ಇಂದು ಕೊಂಚ ಹಿನ್ನಡೆ ಕಂಡುಬರಬಹುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಕಾಳಜಿ ವಹಿಸಿ. ಆಧ್ಯಾತ್ಮಿಕ ಮತ್ತು ದೈವಿಕ ಕಾರ್ಯಗಳಿಗಾಗಿ ಹಣ ವ್ಯಯವಾಗಲಿದೆ.

Advertisement

ವೃಷಭ (Taurus): ಇಂದು ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ. ಮಂಗಳನ ಶುಭ ಸಂಚಾರದಿಂದ ಕೆಲಸದ ಅಡೆತಡೆಗಳು ದೂರವಾಗಲಿವೆ. ಆದರೆ ಆರ್ಥಿಕವಾಗಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಸಾಲ ನೀಡುವುದನ್ನು ತಪ್ಪಿಸಿ.

ಮಿಥುನ (Gemini): ಉದ್ಯೋಗದಲ್ಲಿ ಇಂದು ಕೆಲಸದ ಒತ್ತಡ ಹೆಚ್ಚಾಗಬಹುದು. ಕೋರ್ಟ್ ಕಚೇರಿ ವಿಚಾರಗಳಿಂದ ಮಾನಸಿಕ ಸಂಕಟ ಎದುರಾಗಲಿದೆ. ಅಧಿಕಾರಿಗಳಿಂದ ಸಮಾಧಾನಕರ ಮಾತುಗಳು ಕೇಳಿಬರಲಿವೆ, ತಾಳ್ಮೆಯಿಂದಿರಿ.

ಕಟಕ (Cancer): ಆರ್ಥಿಕವಾಗಿ ಇಂದು ನಿಮಗೆ ಅತ್ಯಂತ ಅನುಕೂಲಕರ ದಿನ. ಸಂಗಾತಿಯ ಕಡೆಯಿಂದ ಯೋಗ ಫಲಗಳು ಹಾಗೂ ಆಸ್ತಿ ಲಾಭವಾಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವಿರಿ.

ಸಿಂಹ (Leo): ಕೃಷಿಕರು ಹಾಗೂ ಜಮೀನು ವ್ಯವಹಾರಸ್ಥರಿಗೆ ಇಂದು ಲಾಭದಾಯಕ ದಿನ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದ್ದರೂ, ಶತ್ರುಗಳ ಕಾಟದ ಬಗ್ಗೆ ಕೊಂಚ ಜಾಗರೂಕರಾಗಿರುವುದು ಒಳಿತು.

ಕನ್ಯಾ (Virgo): ಇಂದಿನ ದಿನ ನಿಮಗೆ ಶುಭ ತರಲಿದೆ. ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು ಸಿಗಲಿದ್ದು, ಶುಭ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಸ್ನೇಹಿತರು ಮತ್ತು ಆಪ್ತರಿಂದ ಉತ್ತಮ ಸಹಕಾರ ದೊರೆಯಲಿದೆ.

ತುಲಾ (Libra): ಸಾಲಬಾಧೆ ಹಾಗೂ ಆರ್ಥಿಕ ಮುಗ್ಗಟ್ಟು ಇವತ್ತು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗುವ ಸಾಧ್ಯತೆ ಇರುವುದರಿಂದ ಆಹಾರ ಸೇವನೆಯಲ್ಲಿ ನಿಯಂತ್ರಣವಿರಲಿ.

ವೃಶ್ಚಿಕ (Scorpio): ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣದ ಕುರಿತು ಚಿಂತೆ ಕಾಡಬಹುದು. ಭಾವನಾತ್ಮಕ ವಿಷಯಗಳಿಂದ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ಅನಾವಶ್ಯಕ ಹಣ ವ್ಯಯವಾಗದಂತೆ ಎಚ್ಚರಿಕೆ ವಹಿಸಿ.

ಧನುಸ್ಸು (Sagittarius): ಸ್ವಯಂಕೃತ ತಪ್ಪುಗಳಿಂದ ಇಂದು ಹೊಸ ಸಮಸ್ಯೆಗಳನ್ನು ತಂದುಕೊಳ್ಳಬೇಡಿ. ಸೋಮಾರಿತನ ಹೆಚ್ಚಾಗಿ ಕೆಲಸಗಳು ಮುಂದೂಡಲ್ಪಡಬಹುದು. ನಿದ್ರಾಭಂಗ ಹಾಗೂ ಆರೋಗ್ಯದ ಕಡೆ ಗಮನವಿರಲಿ.

ಮಕರ (Capricorn): ಸ್ವಂತ ಕೆಲಸ ಕಾರ್ಯಗಳಲ್ಲಿ ಆರಂಭದಲ್ಲಿ ಹಿನ್ನಡೆಯಾದರೂ, ದಿನದ ಅಂತ್ಯಕ್ಕೆ ಸಂಗಾತಿಯ ಬೆಂಬಲದಿಂದ ಕೆಲಸಗಳು ಪೂರ್ಣಗೊಳ್ಳಲಿವೆ. ವಾಹನ ಹಾಗೂ ಗೃಹ ಬಳಕೆಯ ವಸ್ತುಗಳಿಗೆ ಅಧಿಕ ಖರ್ಚಾಗಲಿದೆ.

ಕುಂಭ (Aquarius): ಇಂದು ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಆರ್ಥಿಕವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ವ್ಯಾಪಾರದಲ್ಲಿ ನಷ್ಟದ ಭೀತಿ ಇದೆ. ಕುಟುಂಬಸ್ಥರ ವಿರೋಧ ಕಟ್ಟಿಕೊಳ್ಳಬೇಡಿ.

ಮೀನ (Pisces): ವ್ಯಾಪಾರ ವ್ಯವಹಾರದಲ್ಲಿ ಭಾರಿ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಪ್ರಿಯ ಜನರ ಭೇಟಿಯಿಂದ ಮನಸ್ಸು ಹರ್ಷಗೊಳ್ಳಲಿದೆ. ಆಲಸ್ಯತನವನ್ನು ಬದಿಗಿಟ್ಟು ಮುನ್ನುಗ್ಗಿದರೆ ಅದೃಷ್ಟ ನಿಮ್ಮದಾಗಲಿದೆ.

Leave a Reply

Your email address will not be published. Required fields are marked *