ದಿನ ಭವಿಷ್ಯ ಮೇ 16: ಇಂದು ಶನಿ ಜಯಂತಿ ಹಾಗೂ ತ್ರಿಗ್ರಹಿ ಯೋಗದ ವಿಶೇಷ ದಿನ; ನಿಮ್ಮ ರಾಶಿಯ ಆರ್ಥಿಕ ಭವಿಷ್ಯ ಹೇಗಿದೆ?

march-16-daily-horoscope-kannada-astrology-prediction

ಬೆಂಗಳೂರು: ಇಂದು ಮೇ 16, ಶನಿ ದೇವರಿಗೆ ಮುಡಿಪಾದ ಶನಿವಾರ ಹಾಗೂ ಶನಿ ಜಯಂತಿಯ ವಿಶೇಷ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಸೂರ್ಯ ಮತ್ತು ಚಂದ್ರರಿಬ್ಬರೂ ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಅಲ್ಲಿ ಬುಧ ಗ್ರಹ ಇರುವುದರಿಂದ ಈ ಮೂರು ಗ್ರಹಗಳ ಮಿಲನದಿಂದ ಅತ್ಯಂತ ಅಪರೂಬದ ‘ತ್ರಿಗ್ರಹಿ ಯೋಗ’ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ 12 ರಾಶಿಗಳ ಇಂದಿನ ವೃತ್ತಿ ಮತ್ತು ಆರ್ಥಿಕ ಜಾತಕ ಹೀಗಿದೆ.

ಮೇಷ ರಾಶಿ: ಲಗ್ನದಲ್ಲಿ ಮಂಗಳನ ಸಂಚಾರದಿಂದ ಧೈರ್ಯ ಹೆಚ್ಚಾಗಲಿದೆ. ಆರ್ಥಿಕವಾಗಿ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಂಡು ಎಂದಿಗಿಂತಲೂ ಹೆಚ್ಚು ಲಾಭ ಮತ್ತು ಸಂಗಾತಿಯಿಂದ ಪೂರ್ಣ ಬೆಂಬಲ ಸಿಗಲಿದೆ.

ವೃಷಭ ರಾಶಿ: ಇಂದು ನಿಮಗೆ ಅತ್ಯಂತ ಪ್ರಮುಖ ದಿನ. ನಿಮ್ಮ ಯೋಜನೆಗಳ ಮೇಲೆ ಗಮನ ಹರಿಸುವುದರಿಂದ ಯಶಸ್ಸು ಸಿಗಲಿದೆ. ಮನೆಯ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳಲಿವೆ, ಆದರೆ ಉದ್ಯೋಗದಲ್ಲಿ ಸ್ವಲ್ಪ ಒತ್ತಡ ಇರಬಹುದು.

ಮಿಥುನ ರಾಶಿ: ಇಂದು ಯಾರನ್ನೂ ಅತಿಯಾಗಿ ನಂಬಬೇಡಿ, ನಿಕಟ ವ್ಯಕ್ತಿಗಳಿಂದಲೇ ಮೋಸ ಹೋಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗಬಹುದು, ಆಸ್ತಿ ಜಗಳಗಳು ನಿಮ್ಮ ಪರವಾಗಿ ಬಗೆಹರಿಯಲಿವೆ.

ಕಟಕ ರಾಶಿ: ಆರೋಗ್ಯ ಸಮಸ್ಯೆಗಳಿಂದ ಸ್ವಲ್ಪ ಪರಿಹಾರ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳನ್ನು ಇತರರು ಟೀಕಿಸಬಹುದು, ತಾಳ್ಮೆಯಿಂದ ಇರಿ. ಹಣಕಾಸಿನ ಚಿಂತೆಗಳು ಸ್ವಲ್ಪ ಕಾಡಬಹುದು.

ಸಿಂಹ ರಾಶಿ: ಇಂದು ನಿಮಗೆ ಅತ್ಯಂತ ಯಶಸ್ವಿ ದಿನವಾಗಿದೆ. ನಿಮ್ಮ ಆಲೋಚನೆಗಳು ಮತ್ತು ಹೊಸ ಯೋಜನೆಗಳು ಉತ್ತಮ ಆದಾಯ ಮತ್ತು ಲಾಭವನ್ನು ತಂದುಕೊಡಲಿವೆ.

ಕನ್ಯಾ ರಾಶಿ: ಆಕಸ್ಮಿಕ ಧನಾಗಮನದ ಯೋಗವಿದೆ. ಆದರೆ ನಿಮ್ಮ ಮಾತಿನಿಂದಾಗಿ ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ಜಾಗ್ರತೆ ವಹಿಸಿ.

ತುಲಾ ರಾಶಿ: ನಿಮ್ಮ ಮಾತು ಮತ್ತು ನಡವಳಿಕೆಗೆ ಕಚೇರಿಯಲ್ಲಿ ಮೆಚ್ಚುಗೆ ಸಿಗಲಿದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದ್ದು, ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ವೃಶ್ಚಿಕ ರಾಶಿ: ವೃತ್ತಿ ಜೀವನಕ್ಕೆ ಇಂದು ಒಳ್ಳೆಯ ದಿನ. ಕಠಿಣ ಪರಿಶ್ರಮದಿಂದಾಗಿ ಮಾನಸಿಕ ಆಯಾಸವಾಗಬಹುದು. ಸಂಗಾತಿಯೊಂದಿಗೆ ಪ್ರೀತಿ ಮತ್ತು ಬಾಂಧವ್ಯ ಬಲಗೊಳ್ಳಲಿದೆ.

ಧನು ರಾಶಿ: ಹಳೆಯ ಸಾಲಗಳನ್ನು ತೀರಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ಮಿಶ್ರ ಫಲಿತಾಂಶಗಳಿದ್ದರೂ ತಾಳ್ಮೆಯಿಂದ ಕೆಲಸ ನಿರ್ವಹಿಸಿದರೆ ಉತ್ತಮ ಲಾಭ ಪಡೆಯಬಹುದು.

ಮಕರ ರಾಶಿ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು. ಉದ್ಯೋಗದಲ್ಲಿ ಹಿರಿಯರ ಸಹಾಯವನ್ನು ನಿರೀಕ್ಷಿಸಬಹುದು. ಜೂಜು ಅಥವಾ ಮೋಜಿನ ವಿಷಯಗಳಿಂದ ದೂರವಿರಿ.

ಕುಂಭ ರಾಶಿ: ಹೊಸ ಆವಿಷ್ಕಾರಗಳು ಅಥವಾ ಉದ್ಯಮದಲ್ಲಿ ಹೂಡಿಕೆ ಮಾಡಲು ಇಂದು ಉತ್ತಮ ದಿನ. ಸಣ್ಣ ಹೂಡಿಕೆಗಳಿಂದಲೂ ಉತ್ತಮ ಲಾಭ ಗಳಿಸುವಿರಿ.

ಮೀನ ರಾಶಿ: ನಿಂತುಹೋಗಿದ್ದ ಯೋಜನೆಗಳು ಪುನರಾರಂಭಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಕೆಲಸದ ಅವಕಾಶಗಳು ಒದಗಿ ಬರಲಿವೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು