Breaking News

ಕರ್ನಾಟಕದಲ್ಲಿ 1.07 ಕೋಟಿ ಮತದಾರರು ಪಟ್ಟಿಯಿಂದ ಹೊರಬೀಳುವ ಭೀತಿ: ಚುನಾವಣಾ ಆಯೋಗಕ್ಕೆ ಡಿ.ಕೆ. ಶಿವಕುಮಾರ್ ಪತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಭಾರಿ ಸಂಖ್ಯೆಯ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲ್ಪಡುವ (Deletion) ಭೀತಿ ಎದುರಾಗಿದೆ. ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಆಕ್ಷೇಪಣೆ ಸಲ್ಲಿಸಲು ನೀಡಲಾಗಿರುವ ಕಾಲಾವಕಾಶವನ್ನು ವಿಸ್ತರಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ನಗರ ಒಂದರಲ್ಲೇ 46.88 ಲಕ್ಷ ಮತದಾರರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1.07 ಕೋಟಿಗೂ ಹೆಚ್ಚು ಮತದಾರರನ್ನು ASDDO (ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತರಾದವರು, ನಕಲಿ ಹಾಗೂ ಇತರರು) ಪಟ್ಟಿಯಲ್ಲಿ ಗುರುತಿಸಿ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆಗಸ್ಟ್ 25, 2026ರ ತಮ್ಮ ಪತ್ರದಲ್ಲಿ ಡಿಕೆಶಿ ಉಲ್ಲೇಖಿಸಿದ್ದಾರೆ.

ಕರಡು ಪಟ್ಟಿಯಲ್ಲಿ ಹೆಸರಿಲ್ಲದ ನೈಜ ಮತದಾರರು ತಮ್ಮ ಸ್ಥಿತಿಗತಿಯನ್ನು ಪರಿಶೀಲಿಸಿ ‘ಫಾರ್ಮ್ 6’ (Form 6) ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಚುನಾವಣಾ ಆಯೋಗವು (ECI) ಅಧಿಸೂಚನೆ ಮೂಲಕ ವಿಸ್ತರಿಸಬೇಕು. ನೋಟಿಸ್ ಜಾರಿಗೊಳಿಸಲು ಹಾಗೂ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿಗದಿಪಡಿಸಿರುವ 45 ದಿನಗಳ ಅವಧಿ ಮತ್ತು ನೋಟಿಸ್‌ಗಳಿಗೆ ಉತ್ತರಿಸಲು ನೀಡಲಾಗಿರುವ ಒಂದು ವಾರದ ಕಾಲಾವಕಾಶ ತೀರಾ ಅಪೂರ್ಣ ಹಾಗೂ ಅಸಮರ್ಪಕವಾಗಿದೆ.

ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಈ ಅಲ್ಪ ಕಾಲಾವಕಾಶವು ಉದ್ಯೋಗಿಗಳು, ವಲಸೆ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ಕಷ್ಟಕರವಾಗಲಿದೆ. ಅವರು ದಾಖಲೆಗಳನ್ನು ಒದಗಿಸಲು ಅಥವಾ ಪ್ರಯಾಣಿಸಲು ಹೆಚ್ಚಿನ ಸಮಯ ಬೇಕಾಗುವುದರಿಂದ ಕನಿಷ್ಠ ಅಗತ್ಯ ಕಾಲಾವಕಾಶವನ್ನು ನೀಡಲೇಬೇಕು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *