ದೆಹಲಿ: ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ವೇಳೆಯಲ್ಲಿ ಭಾರತೀಯ ‘ಲೋಯಿಟರಿಂಗ್ ಮುನಿಷನ್’ (Loitering Munition – ಕಾದು ಕುಳಿತು ದಾಳಿ ಮಾಡುವ ಡ್ರೋನ್) ಪಾಕಿಸ್ತಾನದ ಕಿರಣಾ ಹಿಲ್ಸ್ (Kirana Hills) ಪ್ರದೇಶಕ್ಕೆ ಅಪ್ಪಳಿಸಿತ್ತು. ಆದರೆ, ಆ ಪ್ರದೇಶವನ್ನು ಲಕ್ಷ್ಯವಾಗಿಟ್ಟುಕೊಂಡು ದಾಳಿ ನಡೆಸುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ (General Anil Chauhan) ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಸೇನಾ ಕಾರ್ಯಾಚರಣೆಯ ಕುರಿತು ಇದುವರೆಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸರ್ಗೋಧಾ ಮತ್ತು ಅದರಿಂದ ಸುಮಾರು 10 ಕಿ.ಮೀ ಉತ್ತರದಲ್ಲಿರುವ ಕಿರಣಾ ಹಿಲ್ಸ್ ವ್ಯಾಪ್ತಿಯಲ್ಲಿ ಶತ್ರುಪಡೆಗಳ ರೇಡಾರ್ ವ್ಯವಸ್ಥೆಯನ್ನು ಪತ್ತೆಹಚ್ಚಲು ಭಾರತೀಯ ಪಡೆಗಳು ಹಲವಾರು ಲೋಯಿಟರಿಂಗ್ ಮುನಿಷನ್ಗಳನ್ನು ನಿಯೋಜಿಸಿದ್ದವು.
ಈ ಡ್ರೋನ್ಗಳು ಸುಮಾರು 2 ಗಂಟೆಗಳ ಕಾಲ ಗಾಳಿಯಲ್ಲೇ ಹಾರಾಡುತ್ತಾ (Loiter) ಗುರಿಯನ್ನು ಹುಡುಕುವ ಸಾಮರ್ಥ್ಯ ಹೊಂದಿರುತ್ತವೆ. ನಿಗದಿತ ಸಮಯದೊಳಗೆ ಸೂಕ್ತ ಗುರಿ ಸಿಗದಿದ್ದಾಗ, ಇಂಧನ ತೀರಿ ತಾನಾಗಿಯೇ ಯಾವುದಾದರೂ ಸ್ಥಳಕ್ಕೆ ಬಿದ್ದು ಸ್ಫೋಟಗೊಳ್ಳುತ್ತವೆ.
ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ
ಕಿರಣಾ ಹಿಲ್ಸ್ನಲ್ಲಿ ಬಿದ್ದ ಡ್ರೋನ್ ಕೂಡ ಯಾವುದೇ ಗುರಿ ಸಿಗದೆ ಇಂಧನ ಖಾಲಿಯಾಗಿ ಅಪ್ಪಳಿಸಿರಬಹುದು. ಇದು ಇಸ್ರೇಲ್ ವಿನ್ಯಾಸದ ‘ಹ್ಯಾರೋಪ್’ (Harop) ಡ್ರೋನ್ ಆಗಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ವಾಯುಪಡೆಯ ಮಾಜಿ ಏರ್ ಮಾರ್ಷಲ್ ಎ.ಕೆ. ಭಾರತಿ ಅವರು ಈ ಹಿಂದೆ “ನಾವು ಕಿರಣಾ ಹಿಲ್ಸ್ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿಲ್ಲ” ಎಂದು ನೀಡಿ ಹೇಳಿಕೆಯನ್ನು ಸಿಡಿಎಸ್ ಅನಿಲ್ ಚೌಹಾಣ್ ಉಲ್ಲೇಖಿಸಿ ಬೆಂಬಲಿಸಿದರು.
ಆಪರೇಷನ್ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಸ್ಕರ್ದು (Skardu) ಮೇಲೆಯೂ ದಾಳಿ ನಡೆಸಲು ಭಾರತೀಯ ವಾಯುಪಡೆಗೆ (IAF) ಅನುಮತಿ ಸಿಕ್ಕಿತ್ತು. ಆದರೆ ಸ್ಕರ್ದು ಪ್ರದೇಶದಲ್ಲಿ ಹವಾಮಾನ ತೀವ್ರವಾಗಿ ಹಾಲಾಡಿದ್ದರಿಂದ ಕೊನೆ ಕ್ಷಣದಲ್ಲಿ ಆ ದಾಳಿಯನ್ನು ರದ್ದುಗೊಳಿಸಲಾಯಿತು. ಸ್ಕರ್ದು ಬದಲಾಗಿ ಗುರಿಯನ್ನು ಬದಲಾಯಿಸಿ ಪಾಕಿಸ್ತಾನದ ‘ಭೋಲಾರಿ’ (Bholari) ವೈಮಾನಿಕ ನೆಲೆಯ ಹ್ಯಾಂಗರ್ ಮೇಲೆ ಗಾಂಧಿನಗರದ ದಕ್ಷಿಣ ಪಶ್ಚಿಮ ಏರ್ ಕಮಾಂಡ್ ಯಶಸ್ವಿ ದಾಳಿ ನಡೆಸಿತು. ಮೇ 10ರ ಈ ವಾಯುದಾಳಿಯ ಚಿತ್ರಗಳು ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದ್ದವು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

