Breaking News

Viral Video: ಪೊಲೀಸರನ್ನು ಹೆದರಿಸಲು ಸತ್ತ ಹಾವನ್ನು ತಂದ ಕುಡುಕನ ಅವಾಂತರ

Drunk man brings dead snake to scare police in Hyderabad video goes viral

ಟ್ರಾಫಿಕ್‌ ಪೊಲೀಸರ ಕೆಲಸವೇ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡುವುದು ಮತ್ತು ರೂಲ್ಸ್‌ ಬ್ರೇಕರ್‌ಗಳಿಗೆ ದಂಡದ ಬಿಸಿ ಮುಟ್ಟಿಸುವುದು. ಅದೇ ರೀತಿ ಶನಿವಾರದಂದು ಹೈದರಾಬಾದ್‌ನಲ್ಲೂ ಟ್ರಾಫಿಕ್‌ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆಟೋ ಚಾಲಕನೊಬ್ಬ ಸತ್ತು ಹೋದ ಹಾವನ್ನು ಕೈಗೆ ಸುತ್ತಿಕೊಂಡು ಬಂದು ಪೊಲೀಸರನ್ನೇ ಹೆದರಿಸಲು ಯತ್ನಿಸಿದ ಘಟನೆ ನಡೆದಿದೆ ಮಾರಾಯ್ರೆ.

ಹಳೆ ನಗರದ ಚಂದ್ರಾಯನಗುಟ್ಟ ಪ್ರದೇಶದಲ್ಲಿ ಆಟೋ ಚಾಲಕ ಮದ್ಯದ ಅಮಲಿನಲ್ಲಿದ್ದನೆಂದು ಅನುಮಾನಿಸಿದ ಸಂಚಾರ ಪೊಲೀಸರು ಅವನನ್ನು ತಡೆದಿದ್ದಾರೆ. ಉಸಿರಾಟದ ಪರೀಕ್ಷೆ ವೇಳೆ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. 150 ರೀಡಿಂಗ್‌ನೊಂದಿಗೆ, ಕಾನೂನು ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿರುವುದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಆಟೋವನ್ನು ಜಪ್ತಿ ಮಾಡಿದ್ದರು.

Advertisement

ಇದನ್ನೂ ಓದಿ: ಈಕೆ ವಿಶ್ವದ ಸುಂದರ ಮುಖ ಹೊಂದಿರುವ ಯುವತಿ, ಪುರುಷರಲ್ಲಿ ಯಾರು ಗೊತ್ತೇ?

ಅಲ್ಲದೆ, ಆಟೋದಲ್ಲಿರುವ ತನ್ನ ವಸ್ತುಗಳನ್ನೆಲ್ಲಾ ತೆಗೆಯುವಂತೆ ಪೊಲೀಸರು ಸೂಚಿಸಿದಾಗ ಆಟೋ ಚಾಲಕನು ಸತ್ತು ಹೋಗಿರುವ ಹಾವನ್ನು ಹೊರ ತೆಗೆದು ಬೆದರಿಸಲು ಪ್ರಾರಂಭಿಸಿದ್ದಾನೆ. ಪ್ರಕರಣ ದಾಖಲಿಸದಂತೆ ಮತ್ತು ತನ್ನ ಆಟೋವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾನೆ.

ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕೈಯಲ್ಲಿ ಹಾವನ್ನು ಹಿಡಿದುಕೊಂಡು ಪೊಲೀಸರ ಹತ್ತಿರ ಕೊಂಡುಹೋಗಿ ಬೆದರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಹಾವು ಜೀವಂತವಿದೆಯೋ ಇಲ್ಲವೋ ಎಂಬ ಅರಿವೇ ಇಲ್ಲದ ಪೊಲೀಸರು ಜೀವಂತ ಹಾವೆಂದು ಭಾವಿಸಿ ಗಾಬರಿಯಿಂದ ಕುಡುಕನನ್ನು ದೂರಕ್ಕೆ ತಳ್ಳುವುದನ್ನು ನೋಡಬಹುದು. ಅಷ್ಟಕ್ಕೂ ಸುಮ್ಮನಾಗದ ಆತ ಆ ಹಾವನ್ನು ತನ್ನ ಕೈಗೆ ಸುತ್ತಿಕೊಳ್ಳುವುದನ್ನೂ ನೋಡಬಹುದು. ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ಮುಂದಾದಾಗ ಇದರ ಲಾಭ ಪಡೆದ ಆಟೋ ಚಾಲಕ ಹಾವಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ದೈನಂದಿನ ಜೀವನದಲ್ಲಿ ಹಸುವಿನ ಮೂತ್ರ ಬಳಕೆ! ಇದು ಭಾರತದಲ್ಲಿ ಅಲ್ಲ

ಪಹಾದಿಶರೀಫ್ ನಿವಾಸಿ ಸೈಯದ್ ಇರ್ಫಾನ್ (23 ವರ್ಷ) ಅವಾಂತರ ಸೃಷ್ಟಿಸಿದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಜನವರಿ 3 ರಂದು ರಾತ್ರಿ 9:30 ರ ಸುಮಾರಿಗೆ MBNR X ರಸ್ತೆಯಲ್ಲಿ ನಡೆದಿದೆ. ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾನೆ. ತಪಾಸಣೆ ವೇಳೆ ಹಾವು ತೋರಿಸುವ ಮೂಲಕ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ.

ಘಟನೆಯ ನಂತರ, ಸೈಯದ್ ಇರ್ಫಾನ್ ನಂತರ ತಮ್ಮ ವರ್ತನೆ ಮತ್ತು ಉಂಟಾದ ತೊಂದರೆಗೆ ಕ್ಷಮೆಯಾಚಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಕೃತ್ಯದ ಗಂಭೀರತೆಯನ್ನು ಪರಿಗಣಿಸಿ, ಚಂದ್ರಾಯಣಗುಟ್ಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು