ನವದೆಹಲಿ : ಭಾರತೀಯ ದೂರದರ್ಶನದ ಪ್ರಸಿದ್ಧ ನಟಿ ಸುಧಾ ಚಂದ್ರನ್ ಧಾರಾವಾಹಿಗಳಲ್ಲಿ ಎಲ್ಲರ ಮನೆಮಾತಾದವರು. ವಿಶೇಷವಾಗಿ ಖಳನಾಯಕಿ ಪಾತ್ರಗಳಲ್ಲಿ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ದೊರೆಯುತ್ತದೆ. ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲೂ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ನೃತ್ಯಗಾರ್ತಿಯಾಗಿ, ನಟಿಯಾಗಿ ಮಾತ್ರವಲ್ಲದೆ, ಅನೇಕ ಯುವ ಕಲಾವಿದರಿಗೆ ಪ್ರೇರಣೆಯಾಗಿರುವ ವ್ಯಕ್ತಿತ್ವವೂ ಹೌದು. ಇದೀಗ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮಗಳಲ್ಲಿ ಇದೊಂದು ಭಜನಾ ಕಾರ್ಯಕ್ರಮವಾಗಿದ್ದು, ಸುಧಾ ಚಂದ್ರನ್ ರವರು ಭಾವಾವೇಶಕ್ಕೆ ಒಳಗಾಗಿ ವಿಚಿತ್ರವಾಗಿ ವರ್ತಿಸಿರುವುದು ಹಾಗೂ ಎಲ್ಲರು ಅವರನ್ನು ಸಮಾಧಾನ ಮಾಡುತ್ತಿರುವುದು ವೀಡಿಯೋ ಮುಖಾಂತರ ಎಲ್ಲೆಡೆ ಹರಿದಾಡುತ್ತಿರುವುದು ಸುದ್ದಿಯಾಗಿದೆ.
ಹೌದು… ಭಾನುವಾರ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಒಂದು ವೀಡಿಯೊ ವೈರಲ್ ಆಗಿದ್ದು, ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಈ ವೀಡಿಯೊದಲ್ಲಿ, ಸುಧಾ ಚಂದ್ರನ್ ಅವರು ಮಾತಾ ಕಿ ಚೌಕಿಯಲ್ಲಿ ಇರುವಾಗ ನಡೆದ ಘಟನೆಯಾಗಿದ್ದು, ವೀಡಿಯೊದಲ್ಲಿ ಸುಧಾ ಅವರ ಸುತ್ತ ಇತರ ಭಕ್ತರು ಸೇರಿದ್ದು, ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ ಆಳವಾದ ಧ್ಯಾನಾವಸ್ಥೆಯಲ್ಲಿದ್ದ ಸುಧಾ ಅವರು ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದರು. ಆ ದಿನದ ಹಲವು ವೀಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಅವರ ಆರೋಗ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.

View this post on Instagram
ಸುಧಾ ಚಂದ್ರನ್ ಅವರ ವೃತ್ತಿಜೀವನ ;
ಸುಧಾ ಚಂದ್ರನ್ ಅವರು ‘ನಾಗಿಣಿ’, ‘ಕ್ಯುಂಕಿ ಸಾಸ್ ಭೀ ಕಭೀ ಬಹು ಥೀ’, ‘ಕಸ್ತೂರಿ’, ‘ಕಹೀನ್ ಕಿಸ್ಸೀ ರೋಜ್’ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರು ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಕೇವಲ 3ನೇ ವಯಸ್ಸಿನಲ್ಲಿ ನೃತ್ಯ ಕಲಿಯಲು ಆರಂಭಿಸಿದ ಸುಧಾ, ಒಂದು ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರವೂ ಹಿಂಜರಿಯದೇ, ಕೃತಕ ಕಾಲಿನ ಸಹಾಯದಿಂದ ಭರತನಾಟ್ಯ ನೃತ್ಯಗಾರ್ತಿಯಾಗಿ ಮತ್ತು ನಟಿಯಾಗಿ ಅದ್ಭುತ ಪುನರಾಗಮನ ಮಾಡಿದ್ದಾರೆ. ತಮ್ಮ ಜೀವನ ಕಥೆಯನ್ನು ಆಧರಿಸಿದ ‘ಮಯೂರಿ’ ಚಿತ್ರದಲ್ಲಿ ಅವರು ಅಭಿನಯಿಸಿದ್ದು, ನಂತರ ಅದರ ಹಿಂದಿ ಆವೃತ್ತಿಯಾದ ‘ನಾಚೆ ಮಯೂರಿ’ಯಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಮರಾಠಿ ಭಾಷೆಗಳಲ್ಲೂ ಅವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : Viral Video: ಪೊಲೀಸರನ್ನು ಹೆದರಿಸಲು ಸತ್ತ ಹಾವನ್ನು ತಂದ ಕುಡುಕನ ಅವಾಂತರ
ಸುಧಾ ಚಂದ್ರನ್ ಅವರ ಕುಟುಂಬ ;
ಮುಂಬೈನಲ್ಲಿ ನೆಲೆಸಿರುವ ತಮಿಳು ಕುಟುಂಬದಿಂದ ಬಂದಿರುವ ಸುಧಾ ಚಂದ್ರನ್ ಅವರ ತಂದೆ ಕೆ.ಡಿ. ಚಂದ್ರನ್ (ನಟ) ಹಾಗೂ ತಾಯಿ ತಂಗಂ. ಅವರಿಗೆ ಜಯಾ, ರಾಜಿ ಮತ್ತು ವಿಜಯ್ ಎಂಬ ಸಹೋದರ-ಸಹೋದರಿಯರು ಇದ್ದಾರೆ. ವರದಿಗಳ ಪ್ರಕಾರ, ಕುಟುಂಬದ ವಿರೋಧದ ನಡುವೆಯೇ ಅವರು 1994ರಲ್ಲಿ ಪಂಜಾಬಿ ಸಹಾಯಕ ನಿರ್ದೇಶಕ ರವಿ ಡಾಂಗ್ ಅವರನ್ನು ವಿವಾಹವಾದರು. ದಂಪತಿಗೆ ಮಕ್ಕಳು ಇಲ್ಲ; ತಮ್ಮ ವೃತ್ತಿಜೀವನದ ಮೇಲೆಯೇ ಹೆಚ್ಚು ಗಮನ ಹರಿಸುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com


