ಕೈರೋ: ಈಜಿಪ್ಟ್‌ನ ಗಿಜಾ (Giza) ಪ್ರದೇಶದಲ್ಲಿ ಭೀಕರ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಕಟ್ಟಡದ 2ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದ 4 ವರ್ಷದ ಮಗುವನ್ನು ಸ್ಥಳೀಯ ಅಂಗಡಿಯೊಬ್ಬರ ಮಾಲೀಕ ಕ್ಷಣಾರ್ಧದಲ್ಲಿ ತಡೆದು ಹಿಡಿದುಕೊಳ್ಳುವ ಮೂಲಕ ಪುಟ್ಟ ಮಗುವಿನ ಪ್ರಾಣ ಉಳಿಸಿದ್ದಾರೆ. ಈ ರೋಮಾಂಚಕಾರಿ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಿಸಿದ ವ್ಯಕ್ತಿಯ ಸಾಹಸಕ್ಕೆ ನೆಟ್ಟಿಗರು ಸಾಹಸಸಿಂಹ ಎಂದಿದ್ದಾರೆ.
ಆಗಿದ್ದೇನು?: ಬಟ್ಟೆ ಒಣಗಿಸುವ ವೈರ್‌ನಲ್ಲಿ ಸಿಲುಕಿ ತಡೆಹಿಡಿದ ಮಳೆ!
ವರದಿಗಳ ಪ್ರಕಾರ, ಮಗುವಿನ ಪೋಷಕರು ಹೊರಗಿದ್ದಾಗ ಮಗು 2ನೇ ಮಹಡಿಯ ಬಾಲ್ಕನಿ ಬಳಿ ಆಟವಾಡುತ್ತಾ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಮಗು ಮೇಲಿಂದ ಕೆಳಗೆ ಬೀಳುವಾಗ ಬಾಲ್ಕನಿಗೆ ಕಟ್ಟಲಾಗಿದ್ದ ಬಟ್ಟೆ ಒಣಗಿಸುವ ಲೈನ್ (Washing Line) ಒಂದರಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿನ ಬೀಳುವ ವೇಗ (Descent) ಕ್ಷಣಕಾಲ ಕಡಿಮೆಯಾಯಿತು.
ಇಲ್ಲಿದೆ ನೋಡಿ ವಿಡಿಯೋ:
A young Egyptian sprinted to catch a child falling from a second-floor balcony in Giza, Egypt.
The child hit a washing line on the way down, giving his rescuer a split second to catch him before he hit the ground, preventing serious injury. https://t.co/HkO9Nc0EeP— Chicken (@Decapolis_11) October 5, 2026
ಈ ವೇಳೆ ಕೆಳಗೆ ನಿಂತಿದ್ದ ಅಹ್ಮದ್ ರಜಬ್ (Ahmed Ragab) ಎಂಬ ಅಂಗಡಿಯ ಮಾಲೀಕರಿಗೆ ಜನರ ಕಿರುಚಾಟ ಕೇಳಿಸಿದೆ. ಮೇಲಕ್ಕೆ ನೋಡಿದಾಗ ಮಗು ಬೀಳುತ್ತಿರುವುದನ್ನು ಕಂಡು, ತಕ್ಷಣ ಓಡಿಬಂದು ಮಗು ನೆಲಕ್ಕೆ ಅಪ್ಪಳಿಸುವ ಕೆಲವೇ ಮಿಲಿ-ಸೆಕೆಂಡುಗಳ ಮುನ್ನ ತಮ್ಮ ಕೈಗಳಲ್ಲಿ ಮಗುವನ್ನು ಸುರಕ್ಷಿತವಾಗಿ ಹಿಡಿದುಕೊಂಡಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ
ತಮ್ಮ ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಅಹ್ಮದ್ ರಜಬ್, “ನನಗೆ ಯೋಚಿಸಲು ಅಥವಾ ಅಪಾಯದ ಬಗ್ಗೆ ಅಂದಾಜಿಸಲು ಸಮಯವೇ ಇರಲಿಲ್ಲ. ಮಗುವನ್ನು ರಕ್ಷಿಸುವುದು ಒಂದೇ ನನ್ನ ಗುರಿಯಾಗಿತ್ತು” ಎಂದಿದ್ದಾರೆ. ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಚಮತ್ಕಾರಿಕ ರಕ್ಷಣೆಯ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

