ಚೆನ್ನೈ: ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ದೇಶೀಯವಾಗಿ ನಿರ್ಮಾಣಗೊಂಡ ಭಾರತದ ಮೊದಲ ‘ಕಾರ್ಗೋ ವಂದೇ ಭಾರತ್’ (Freight Vande Bharat EMU) ರೈಲು ಗಂಟೆಗೆ 145 ಕಿ.ಮೀ ವೇಗವನ್ನು ತಲುಪುವ ಮೂಲಕ ಯಶಸ್ವಿ ಪ್ರಾಯೋಗಿಕ ಸಂಚಾರವನ್ನು (Trial Run) ಪೂರ್ಣಗೊಳಿಸಿದೆ.
ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆ (RDSO) ನೇತೃತ್ವದಲ್ಲಿ ವೆಸ್ಟ್ ಸೆಂಟ್ರಲ್ ರೈಲ್ವೆಯ ಕೋಟಾ-ನಾಗ್ದಾ-ಸವಾಯಿ ಮಾಧೋಪುರ ಮಾರ್ಗದಲ್ಲಿ ಈ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಂಪೂರ್ಣ ಭಾರತೀಯ ತಂತ್ರಜ್ಞಾನದಲ್ಲಿ ಚೆನ್ನೈನ ಐಸಿಎಫ್‌ನಲ್ಲಿ ತಯಾರಾದ ಈ 16 ಕೋಚ್‌ಗಳ ಸರಕು ರೈಲು, ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ದ ಬಲಿಷ್ಠ ಹೊಸ ಸಂಕೇತವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ‘ಆರ್‌ಎಸ್‌ಎಸ್‌ಗೆ ಸೇರಿ, ದೇಶಪ್ರೇಮ ಕಲಿಯಿರಿ’: ಪ್ರಿಯಾಂಕಾ ಗಾಂಧಿ ಬೆವರಿಳಿಸಿದ ಅನುರಾಗ್ ಠಾಕೂರ್
ಇಲ್ಲಿದೆ ನೋಡಿ ವಿಡಿಯೋ:
ಭಾರತೀಯ ರೈಲ್ವೆಯ ಇತಿಹಾಸದಲ್ಲಿ ದಾಖಲಾದ ಸುವರ್ಣ ಅಧ್ಯಾಯ!
ಚೆನ್ನೈನಲ್ಲಿ ತಯಾರಾದ ‘ಕಾರ್ಗೋ ವಂದೇ ಭಾರತ್’ ರೈಲು ಗಂಟೆಗೆ 145 ಕಿ.ಮೀ ವೇಗದಲ್ಲಿ ನಡೆಸಿದ ಯಶಸ್ವಿ ಪ್ರಾಯೋಗಿಕ ಸಂಚಾರವು, ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ಹೊಸ ಸಂಕೇತವಾಗಿ ಹೊರಹೊಮ್ಮಿದೆ.
ಈ ಐತಿಹಾಸಿಕ ಉಪಕ್ರಮವು, ಭಾರತೀಯ ರೈಲ್ವೆಯ ಸರಕು ಸಾಗಣೆ ಸಾಮರ್ಥ್ಯ ಮತ್ತು… pic.twitter.com/QmQv94WsEt
— V. Somanna (@VSOMANNA_BJP) July 30, 2026
ಒಟ್ಟು 16 ಬೋಗಿಗಳನ್ನು ಹೊಂದಿರುವ ಈ ರೈಲು ಸುಮಾರು 397 ಟನ್ ಸರಕನ್ನು ಒಂದೇ ಬಾರಿಗೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಾಳಾಗುವಂತಹ ಆಹಾರ ಪದಾರ್ಥಗಳಿಗಾಗಿ ಕೋಲ್ಡ್ ಸ್ಟೋರೇಜ್ (Refrigerated) ಸೌಲಭ್ಯ, ಸುಲಭವಾಗಿ ಸರಕು ಲೋಡ್ ಮಾಡಲು ಸ್ವಯಂಚಾಲಿತ ರೋಲರ್ ಫ್ಲೋರಿಂಗ್ ಹಾಗೂ ಸುರಕ್ಷತೆಗಾಗಿ ‘ಕವಚ್’ ಅಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

