ಮನೆಗಳಲ್ಲಿ ಶರತ್ಕಾಲದ ತಂಗಾಳಿ ಹಾಗೂ ಹಿತಕರವಾದ ವಾತಾವರಣವಿರುವ ಈ ಸಮಯದಲ್ಲಿ ಏರ್ಕಂಡೀಷನರ್ (AC) ಖರೀದಿಸುವುದು ಕೆಲವರಿಗೆ ಅಸಮಂಜಸವೆನಿಸಬಹುದು. ಆದರೆ, ಬುದ್ಧಿವಂತ ಗ್ರಾಹಕರಿಗೆ ಇದುವೇ ಅತ್ಯುತ್ತಮ ಸಮಯವಾಗಿದೆ. ಬೇಸಿಗೆಯ ಪ್ರಖರ ಬಿಸಿಲು ದೂರಾದರು, ಮುಂದಿನ ಬೇಸಿಗೆಯ ಹೊಡೆತದಿಂದ ಮುಂಚಿತವಾಗಿ ಎಚ್ಚೆತ್ತುಕೊಂಡು ಬಜೆಟ್ ಸ್ನೇಹಿ ಬೆಲೆಯಲ್ಲಿ ಎಸಿ ಖರೀದಿಸಲು ಇದುವೇ ಸೂಕ್ತ ಕಾಲವಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ (Flipkart Big Billion Days) ಸೇಲ್ನಲ್ಲಿ ವಿವಿಧ ಬ್ರ್ಯಾಂಡ್ಗಳ ಎಸಿಗಳ ಮೇಲೆ ಶೇ. 52ರವರೆಗೆ ಭರ್ಜರಿ ರಿಯಾಯಿತಿ ಲಭ್ಯವಿFದೆ.
ಬೇಸಿಗೆಯ ಬೆಲೆ ಏರಿಕೆಗೆ ಬಿಗ್ ಬಿಲಿಯನ್ ಡೇಸ್ ಮೂಲಕ ಬ್ರೇಕ್:
ಭಾರತೀಯ ಹವಾಮಾನದಲ್ಲಿ ತೀವ್ರ ಉಷ್ಣಾಂಶ ಸಾಮಾನ್ಯವಾಗಿದ್ದು, ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತದೆ.
ಬೇಸಿಗೆಯಲ್ಲಿ ಹೆಚ್ಚಾಗುವ ಬೇಡಿಕೆ: ಬೇಸಿಗೆಯ ಉತ್ತುಂಗದಲ್ಲಿ ಎಸಿಗಳಿಗೆ ಭಾರೀ ಬೇಡಿಕೆ ಉಂಟಾಗಿ ಬೆಲೆಗಳು ಗಗನಕ್ಕೇರುತ್ತವೆ.
ಮುಂಚಿತ ಯೋಜನೆಯ ಲಾಭ: ಫ್ಲಿಪ್ಕಾರ್ಟ್ ಮಾರಾಟ ಮೇಳದ ಅದ್ಭುತ ಕೊಡುಗೆಗಳನ್ನು ಬಳಸಿಕೊಳ್ಳುವ ಮೂಲಕ, ಮುಂಚಿತವಾಗಿ ಎಸಿಗಳನ್ನು ಖರೀದಿಸಿ ದುಬಾರಿ ಬೆಲೆಯಿಂದ ಪಾರಾಗಬಹುದು ಹಾಗೂ ಆರ್ಥಿಕವಾಗಿ ಉಳಿತಾಯ ಮಾಡಬಹುದು.
ಇದನ್ನೂ ಓದಿ: ಭಾರತದಲ್ಲಿ ಲಾಂಚ್ ಆಯ್ತು ‘ರೆಡ್ಮಿ 17C 5G’ ಬಜೆಟ್ ಸ್ಮಾರ್ಟ್ಫೋನ್
ಭವಿಷ್ಯದ ಅಗತ್ಯತೆಗಳಿಗಾಗಿ ಈಗಿನಿಂದಲೇ ಯೋಜನೆ ರೂಪಿಸುವ ಪ್ರಾಮುಖ್ಯತೆಯನ್ನು ಮನಗಂಡಿರುವ ಫ್ಲಿಪ್ಕಾರ್ಟ್, ಅಕ್ಟೋಬರ್ ತಿಂಗಳಿನಲ್ಲಿ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಗ್ರಾಹಕರಿಗೆ ಈ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

