ಮುಂಡೂರು ಗ್ರಾಮದಲ್ಲಿ ಉಚಿತ ಬೇಸಿಗೆ ಶಿಬಿರ – 2026

ಪುತ್ತೂರು : ನಿವೃತ್ತ ಮುಖ್ಯ ಶಿಕ್ಷಕರಾದ ದಿವಂಗತ ಬಾಲಚಂದ್ರ ರಾವ್ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ವೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಂಡೂರು ಇವರ ಆಶ್ರಯದಲ್ಲಿ, ಹಿರಿಯ ವಿದ್ಯಾರ್ಥಿ ಸಂಘ ಮುಂಡೂರು ಸಹಕಾರದೊಂದಿಗೆ ಉಚಿತ ಬೇಸಿಗೆ ಶಿಬಿರ 2026 ಅನ್ನು ಆಯೋಜಿಸಲಾಗಿದೆ.

ಈ ಶಿಬಿರವು ಏಪ್ರಿಲ್ 11, 2026ರಿಂದ ಏಪ್ರಿಲ್ 17, 2026ರವರೆಗೆ ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ 7:30 ಗಂಟೆಯವರೆಗೆ ನಡೆಯಲಿದೆ. ಶಿಬಿರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮುಂಡೂರು ಇದರ ಸಭಾಭವನದಲ್ಲಿ ನಡೆಯಲಿದೆ.

Advertisement

ಇದನ್ನೂ ಓದಿ ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ: ಮಗಳು ಕಾಲೇಜಿಗೆ ಟಾಪರ್, ಅಮ್ಮನೂ ಪಿಯುಸಿ ಪಾಸು!

ಶಿಬಿರದ ಮುಖ್ಯ ಉದ್ದೇಶ “ಇಂದಿನ ಪ್ರಜ್ಞಾವಂತ ಮಕ್ಕಳೇ ಮುಂದಿನ ಆರೋಗ್ಯಕರ ಸಮಾಜಕ್ಕೆ ದಾರಿ” ಎಂಬ ಸಂದೇಶವನ್ನು ಮಕ್ಕಳಲ್ಲಿ ಬಿತ್ತುವದೇ ಆಗಿದೆ. 6ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ.

Advertisement

ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಆರೋಗ್ಯ ಮಾಹಿತಿ, ಕರಕುಶಲ ಚಟುವಟಿಕೆಗಳು ಮತ್ತು ವ್ಯಕ್ತಿತ್ವ ವಿಕಸನ ಕುರಿತ ತರಬೇತಿಗಳನ್ನು ನೀಡಲಾಗುತ್ತದೆ. ಶಿಬಿರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳ ಸಂಪರ್ಕಿಸಬಹುದು:

Advertisement

📞 99642 76623 | 96329 70240

ಮುಂಡೂರು ಹಾಗೂ ಸುತ್ತಮುತ್ತಲಿನ ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ

ರಾಜ್ಯದ ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು