Breaking News

ಬೆಳಿಗ್ಗೆ ಇಳಿಕೆ ಕಂಡಿದ್ದ ಚಿನ್ನದ ದರ ಸಂಜೆ ವೇಳೆ ಮತ್ತೆ ಏರಿಕೆ

ದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಭೌಗೋಳಿಕ ಮತ್ತು ರಾಜಕೀಯ ಬಿಕ್ಕಟ್ಟುಗಳ ನೇರ ಪರಿಣಾಮ ಭಾರತೀಯ ಇಂಧನ ಹಾಗೂ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಿದೆ. ಜುಲೈ 14ರ ಮಂಗಳವಾರದಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಭಾರಿ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.

ಆದರೆ ಭಾರತದಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನ (99.9% ಶುದ್ಧತೆ) ಪ್ರತಿ ಗ್ರಾಂಗೆ 14,280 ರೂ. , 22 ಕ್ಯಾರೆಟ್ ಚಿನ್ನ (91.6% ಶುದ್ಧತೆ) ಪ್ರತಿ ಗ್ರಾಂಗೆ 13,090 ರೂ. ಮತ್ತು 18 ಕ್ಯಾರೆಟ್ ಚಿನ್ನ (75% ಶುದ್ಧತೆ) ಪ್ರತಿ ಗ್ರಾಂಗೆ 10,710 ರೂ. ಆಗಿದೆ. ಆದರೆ ಕೆಲವು ಭಾಗದಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ವ್ಯಾತ್ಯಾಸ ಕಂಡಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದರೂ, ನಾಳೆಗೆ ಈ ಮೌಲ್ಯ ಏರಿಕೆ ಆಗುವ ಸಾಧ್ಯತೆ ಇದೆ.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಬರೋಬ್ಬರಿ 650 ರೂಪಾಯಿಗಳಿಗಿಂತಲೂ ಹೆಚ್ಚು ಜಿಗಿತ ಕಂಡಿದ್ದು, ಒಟ್ಟಾರೆ ದರ 1.40 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದೆ.

ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ದರವೂ ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ಎಂಸಿಎಕ್ಸ್ ಬೆಳ್ಳಿ ದರವು ಪ್ರತಿ ಕೆಜಿಗೆ ಸುಮಾರು 700 ರೂಪಾಯಿಗಳಷ್ಟು ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ 2.18 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ದರದಲ್ಲಿ ವಹಿವಾಟು ಮುಂದುವರಿಸಿದೆ.

ಪಶ್ಚಿಮ ಏಷ್ಯಾ ಭಾಗದಲ್ಲಿ ಯುದ್ಧ ಹಾಗೂ ರಾಜತಾಂತ್ರಿಕ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಇರಾನಿನ ಹಡಗುಗಳ ಮೇಲೆ ಅಮೆರಿಕ (US) ಹೊಸ ದಿಗ್ಬಂಧನಗಳನ್ನು ವಿಧಿಸಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇದರ ಪರಿಣಾಮವಾಗಿ ಸುರಕ್ಷಿತ ಹೂಡಿಕೆಯಾಗಿರುವ ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ದಿಢೀರ್ ಹೆಚ್ಚಾಗಿದೆ.

ಮಂಗಳವಾರ ಪ್ರಕಟವಾಗಲಿರುವ ಅಮೆರಿಕದ ಸಿಪಿಐ (CPI) ಹಣದುಬ್ಬರ ದತ್ತಾಂಶದಲ್ಲಿ ಸ್ವಲ್ಪ ಹಣದುಬ್ಬರ ಇಳಿಕೆ ಮುನ್ಸೂಚನೆ ಸಿಕ್ಕಿರುವುದರಿಂದ ಡಾಲರ್ ಮೌಲ್ಯದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಇದು ಕೂಡ ಚಿನ್ನದ ಬೆಲೆ ಏರಿಕೆಗೆ ಪರೋಕ್ಷವಾಗಿ ಬೆಂಬಲ ನೀಡಿದೆ. ರಾತ್ರೋರಾತ್ರಿ ಪ್ರತಿ ಔನ್ಸ್‌ಗೆ $4,000 ಕ್ಕಿಂತ ಕೆಳಗೆ ಕುಸಿದಿದ್ದ ಸ್ಪಾಟ್ ಚಿನ್ನದ ಬೆಲೆ, ಇಂದು ಮತ್ತೆ ಚೇತರಿಸಿಕೊಂಡು 0.4% ರಷ್ಟು ಏರಿಕೆಯಾಗಿದೆ. ಪ್ರಸ್ತುತ ಇದು ಪ್ರತಿ ಔನ್ಸ್‌ಗೆ $4,016 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ: ದೇಶಾದ್ಯಂತ ಇಪಿಎಫ್ ನಿಷ್ಕ್ರಿಯ ಖಾತೆಗಳಲ್ಲಿ 9,330 ಕೋಟಿ ರೂ. ಬಾಕಿ: ಆರ್‌ಟಿಐ ಅರ್ಜಿಗೆ ಇಪಿಎಫ್‌ಒ ಮಾಹಿತಿ

ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಬೆಳ್ಳಿ ಕೂಡ ಸ್ವಲ್ಪ ಚೇತರಿಕೆ ಕಂಡಿದ್ದು, ಪ್ರತಿ ಔನ್ಸ್‌ಗೆ $58 ರ ಆಸುಪಾಸಿನಲ್ಲಿ ತನ್ನ ವಹಿವಾಟನ್ನು ಮುಂದುವರಿಸಿದೆ. ಹಣದುಬ್ಬರ ದತ್ತಾಂಶಗಳು ಸಂಪೂರ್ಣವಾಗಿ ಹೊರಬೀಳುವವರೆಗೂ ಮಾರುಕಟ್ಟೆಯಲ್ಲಿ ಇಂತಹದೇ ಒಂದು ಜಾಗರೂಕತೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *