ಎಟಿಎಂಗೆ ಹಾಕಿದ 3.40 ಕೋಟಿ ರೂ. ಹಣ ಮಾಯ! ಸಿಬ್ಬಂದಿಗಳ ಕೈಚಳಕ ಹೇಗಿತ್ತು ನೋಡಿ

ಹಾಸನದಲ್ಲಿ ಎಟಿಎಂಗಳಿಗೆ ಹಣ ತುಂಬುವ ಖಾಸಗಿ ಸಂಸ್ಥೆಯ ಇಬ್ಬರು ಸಿಬ್ಬಂದಿಗಳು ಸುಮಾರು 3.40 ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 3,40,28,000 ರೂ. ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿಯಲ್ಲಿದ್ದ ನಂದೀಶ್ ಬಿ.ಎಲ್ ಮತ್ತು ಮಧುಕುಮಾರ್ ಎಂ.ಪಿ ಎಂಬ ಸಿಬ್ಬಂದಿಗಳು.

ಹಾಸನ ನಗರದ ಸುಮಾರು 18 ಎಟಿಎಂಗಳಿಗೆ (11 ಕೆನರಾ ಬ್ಯಾಂಕ್, 3 ಎಸ್‌ಬಿಐ ಮತ್ತು 1 ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳು ಸೇರಿದಂತೆ) ಹಣ ಜಮಾ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಾಸ್ತವದಲ್ಲಿ ಹಣವನ್ನು ಜಮಾ ಮಾಡದೆ ಲಪಟಾಯಿಸಿದ್ದಾರೆ.ಫೆಬ್ರವರಿ 18 ಮತ್ತು 19 ರಂದು ಸಂಸ್ಥೆಯ ಮಾಸಿಕ ಆಡಿಟ್ (ಲೆಕ್ಕಪರಿಶೋಧನೆ) ನಡೆಸಿದಾಗ ಈ ಭಾರೀ ಅವ್ಯವಹಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪುತ್ತೂರು: ಹಾರಾಡಿ ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ; ಸ್ಥಳದಲ್ಲೇ ಸಾವು

ಸಿಎಂಎಸ್ (CMS) ಸಂಸ್ಥೆಯ ಹಾಸನ ಶಾಖೆಯ ವ್ಯವಸ್ಥಾಪಕ ರಾಜು ಅವರು ನೀಡಿದ ದೂರಿನ ಆಧಾರದ ಮೇಲೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹಾಸನದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಆತಂಕ ಮೂಡಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು