ಮುಂಬೈ: ಬಾಲಿವುಡ್‌ನ ಡ್ರಾಮಾ ಕ್ವೀನ್, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ (Rakhi Sawant) ಮತ್ತೊಮ್ಮೆ ತಮ್ಮ ವೈಯಕ್ತಿಕ ಬದುಕಿನ ಕಹಿ ಘಟನೆಗಳನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ತಮ್ಮ ಮಾಜಿ ಪತಿ ಆದಿಲ್ ಖಾನ್ ದುರಾನಿ ತನ್ನನ್ನು ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಸಂಪೂರ್ಣವಾಗಿ ಲೂಠಿ ಮಾಡಿದ್ದಾನೆ ಮತ್ತು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಉಳಿಸಿದ್ದ ಹಣವನ್ನೆಲ್ಲಾ ದೋಚಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನನ್ನ ಕಷ್ಟದ ದುಡಿಮೆಯನ್ನೆಲ್ಲಾ ಹಾಳು ಮಾಡಿದ!:
ತಮ್ಮ ನೋವನ್ನು ಹಂಚಿಕೊಂಡಿರುವ ರಾಖಿ ಸಾವಂತ್, “ನನ್ನನ್ನು ಮದುವೆಯಾಗಲು ಬಂದವನು ನನ್ನ ಇಡೀ ಜೀವನವನ್ನೇ ಲೂಠಿ ಮಾಡಿದ. ನಾನು ನನ್ನ ಭವಿಷ್ಯಕ್ಕಾಗಿ ಎಷ್ಟು ಹಣವನ್ನು ಉಳಿತಾಯ (Save) ಮಾಡಿದ್ದೇನೋ, ಅದನ್ನೆಲ್ಲಾ ಆತ ದೋಚಿಕೊಂಡಿದ್ದಾನೆ. ನನ್ನ ಹಣವನ್ನೆಲ್ಲಾ ಆತ ಸಂಪೂರ್ಣವಾಗಿ ಹಾಳು ಮಾಡಿ ಕೈ ತೊಳೆದುಕೊಂಡಿದ್ದಾನೆ” ಎಂದು ಮಾಜಿ ಪತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ತಮ್ಮ ಹಳೆಯ ಗೆಳೆಯ ಹಾಗೂ ಎಕ್ಸ್ (Ex) ಕೂಡ ತನ್ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂ ಹುಡುಗನನ್ನು ಮದುವೆಯಾಗಲು ತಾಯಿ ಹೇಳುತ್ತಿದ್ದಳು!:
ತಮ್ಮ ಕೌಟುಂಬಿಕ ವಿಚಾರಗಳ ಬಗ್ಗೆ ಮಾತನಾಡಿದ ರಾಖಿ, “ಯಾವುದಾದರೂ ಮುಸ್ಲಿಂ ಹುಡುಗನನ್ನು ನೋಡಿ ಮದುವೆಯಾಗು ಎಂದು ನನ್ನ ತಾಯಿ ಸಾಯುವ ಮುನ್ನ ಹೇಳುತ್ತಿದ್ದರು. ಆದರೆ ನಾನು ಮದುವೆಯಾದರೆ ನಿಮ್ಮ ಕಥೆ ಏನು? ನಾನು ರೆಸ್ಟೋರೆಂಟ್‌ಗೆ ಅಥವಾ ಇನ್ಯಾವುದೋ ಸಾರ್ವಜನಿಕ ಜಾಗಕ್ಕೆ ಹೋಗಿ ಯಾರನ್ನಾದರೂ ಸಿಕ್ಕ ಸಿಕ್ಕವರನ್ನು ಮದುವೆಯಾಗು ಅಂತ ಕೇಳಲು ಸಾಧ್ಯವೇ?” ಎಂದು ತಾಯಿಯೊಂದಿಗೆ ನಡೆಸಿದ್ದ ಸಂಭಾಷಣೆಯನ್ನು ನೆನೆದಿದ್ದಾರೆ.
ಇದನ್ನೂ ಓದಿ: ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ನಟ ರವಿ ಮೋಹನ್;ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡಲ್ಲ, ನನ್ನ ಜೀವಕ್ಕೆ ಅವರೇ ಹೊಣೆ!
ನಾನು ಅತ್ತರೂ ಜನರು ನಗುತ್ತಾರೆ ಎಂಬ ಅಳಲು:
ಸದಾ ಕ್ಯಾಮೆರಾಗಳ ಮುಂದೆ ಜೋರಾಗಿ ಮಾತನಾಡುವ ಹಾಗೂ ವಿಭಿನ್ನವಾಗಿ ವರ್ತಿಸುವ ರಾಖಿ, ಸಾರ್ವಜನಿಕರು ತಮ್ಮನ್ನು ನೋಡುವ ದೃಷ್ಟಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಸಿಕ್ಕಾಪಟ್ಟೆ ಮಾತನಾಡುತ್ತೇನೆ ಎಂಬ ಕಾರಣಕ್ಕೆ, ನನ್ನ ಜೀವನದಲ್ಲಿ ನಿಜವಾಗಿಯೂ ಕಷ್ಟ ಬಂದು ನಾನು ಅತ್ತರೂ ಕೂಡ ಜನರು ನನ್ನ ಮಾತನ್ನು ಗಂಭೀರವಾಗಿ ತಗೆದುಕೊಳ್ಳುವುದಿಲ್ಲ (Take Seriously). ನಾನು ನಿಜವಾಗಿ ಅತ್ತರೂ ಜನರು ಅದನ್ನು ನೋಡಿ ಕೇವಲ ಮನರಂಜನೆ ಅಂದುಕೊಂಡು ನಗುತ್ತಾರೆ” ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


