ಕ್ರಿಕೆಟ್ ಜಗತ್ತಿನಲ್ಲಿ ಯಾವುದೇ ತಂಡವನ್ನು ದುರ್ಬಲ ಎಂದು ಕಡೆಗಣಿಸಬಾರದು ಎಂಬುದಕ್ಕೆ ಇಂದು ನಡೆದ ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ರೋಮಾಂಚನಕಾರಿ ಪಂದ್ಯವೇ ಸಾಕ್ಷಿಯಾಗಿದೆ. ವಿಶ್ವ ಕ್ರಿಕೆಟ್ನ ಸಾಮ್ರಾಟರಾಗಿ ಮೆರೆಯುತ್ತಿರುವ ಬಲಿಷ್ಠ ಟೀಂ ಇಂಡಿಯಾಕ್ಕೆ, ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಐರ್ಲೆಂಡ್ ತಂಡವು ಮೈದಾನದಲ್ಲೇ ಸರಿಯಾದ ಪಾಠ ಕಲಿಸಿದೆ. ಕೆಚ್ಚೆದೆಯ ಪ್ರದರ್ಶನ ನೀಡಿದ ಐರ್ಲೆಂಡ್, ಭಾರತದ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ಮರಣೀಯ ಜಯ ದಾಖಲಿಸಿ ಇತಿಹಾಸ ಸೃಷ್ಟಿಸಿದೆ.
ಇತ್ತೀಚಿನ ಐಪಿಎಲ್ (IPL) ಜನಪ್ರಿಯತೆಯ ಅಮಲಿನಲ್ಲಿ ತೇಲುತ್ತಿದ್ದ ಟೀಂ ಇಂಡಿಯಾ ಆಟಗಾರರು, ಐರ್ಲೆಂಡ್ ಆಟಗಾರರ ಸಂಘಟಿತ ಹಾಗೂ ಶಿಸ್ತಿನ ಆಟದ ಎದುರು ಅಕ್ಷರಶಃ ಮಂಕಾದರು. ಮೈದಾನದಲ್ಲಿ ಭಾರತದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿತ್ತು. ಜನಪ್ರಿಯತೆಯ ಮಧ್ಯೆ ಆಟಗಾರರು ಜವಾಬ್ದಾರಿಯನ್ನೇ ಮರೆತಂತೆ ವರ್ತಿಸಿದ್ದು, ಪಂದ್ಯದ ನಿರ್ಣಾಯಕ ಹಂತದಲ್ಲಿ ಬರೊಬ್ಬರಿ 3 ಪ್ರಮುಖ ಕ್ಯಾಚ್ಗಳನ್ನು ಕೈಚೆಲ್ಲಿದರು.

ಇದನ್ನೂ ಓದಿ: ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ!: ಯುವತಿಯ ಸ್ಫೋಟಕ ಹೇಳಿಕೆ
ಭಾರತದ ಆಟಗಾರರು ಸುಲಭದ ಕ್ಯಾಚ್ಗಳನ್ನೇ ಬಿಟ್ಟು ತಪ್ಪು ಮಾಡುತ್ತಿದ್ದರೆ, ಇತ್ತ ಐರ್ಲೆಂಡ್ ಆಟಗಾರರು ನಂಬಲಾಗದ ಹಾಗೂ ಅಸಾಧ್ಯವಾದ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಫೀಲ್ಡಿಂಗ್ ಹೇಗೆ ಮಾಡಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಭಾರತ ನೀಡಿದ ಈ ಲೈಫ್ಗಳನ್ನು ಸರಿಯಾಗಿ ಬಳಸಿಕೊಂಡ ಐರ್ಲೆಂಡ್ ಬ್ಯಾಟರ್ಗಳು ಭಾರತದ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಕಳಪೆ ಫೀಲ್ಡಿಂಗ್ ಮತ್ತು ಜವಾಬ್ದಾರಿಯಿಲ್ಲದ ಆಟಕ್ಕೆ ಭಾರತ ಭಾರಿ ಬೆಲೆ ತೆರಬೇಕಾಗಿ ಬಂದಿದ್ದು, ಅಂತಿಮವಾಗಿ ಹೀನಾಯ ಸೋಲಿನ ಮುಖಭಂಗ ಅನುಭವಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

