ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರ ಶಾಕ್!; 5 ತಿಂಗಳಲ್ಲಿ 21,000 ಕೇಸ್ ದಾಖಲು, 96 ಲಕ್ಷ ರೂ. ಗೂ ಅಧಿಕ ದಂಡ ವಸೂಲಿ

ಮಂಗಳೂರು: ಕರಾವಳಿಯ ನಗರಿ ಮಂಗಳೂರಿನಲ್ಲಿ ಭಾರತೀಯ ಮೋಟಾರು ವಾಹನ (IMV) ಕಾಯ್ದೆಯ ನಿಬಂಧನೆಗಳನ್ನು ಗಾಳಿಗೆ ತೂರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೊಲೀಸರು (Traffic Police) ನಗರದಾದ್ಯಂತ ವಿಶೇಷ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಸಂಚಾರ ಪೊಲೀಸರು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ನಿಯಮ ಉಲ್ಲಂಘಿಸುವವರ ವಿರುದ್ಧ ಹಮ್ಮಿಕೊಳ್ಳಲಾದ ಈ ವಿಶೇಷ ತಪಾಸಣಾ ಡ್ರೈವ್‌ನಲ್ಲಿ, 2026ರ ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಒಟ್ಟು 21,039 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ನಿಯಮ ಮುರಿದ ಸವಾರರಿಂದ ಬರೊಬ್ಬರಿ 96,19,500 (ಹತ್ತಿರಹತ್ತಿರ 96 ಲಕ್ಷ ರೂಪಾಯಿ) ಭಾರಿ ಮೊತ್ತದ ದಂಡವನ್ನು ವಸೂಲಿ ಮಾಡಲಾಗಿದೆ.

Advertisement

ಇದನ್ನೂ ಓದಿ:Traffic : ಟ್ರಾಫಿಕ್ ದಟ್ಟಣೆಯಲ್ಲಿ ವಿಶ್ವಕ್ಕೆ ಬೆಂಗಳೂರಿಗೆ 2ನೇ ಸ್ಥಾನ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಾದ ಎನ್‌ಎಚ್-66, ಎನ್‌ಎಚ್-75, ಎನ್‌ಎಚ್-169 ಮತ್ತು ಎನ್‌ಎಚ್-73 ಹಾದುಹೋಗುತ್ತವೆ. ಈ ಪ್ರಮುಖ ರಸ್ತೆಗಳಲ್ಲಿ ಸವಾರರು ಅತಿ ವೇಗವಾಗಿ ಚಲಿಸುವುದು, ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆ ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಗೌರವಿಸದೇ ಇರುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಅಪಘಾತಗಳು ಸಾರ್ವಜನಿಕರ ಜೀವಹಾನಿ ಮತ್ತು ತೀವ್ರ ಗಾಯಗಳಿಗೆ ಕಾರಣವಾಗುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನೂ ಹೆಚ್ಚಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *