ಖ್ಯಾತ ನಟ ಜೇಮ್ಸ್‌ ಹ್ಯಾಂಡಿ ಬರ್ಬರ ಹತ್ಯೆ; ಕೃತ್ಯ ಎಸಗಿದ ಬೆನ್ನಲ್ಲೇ ಪೊಲೀಸರಿಗೆ ಕರೆ ಮಾಡಿದ ಗೆಳತಿಯ ಮಗ

ಲಾಸ್ ಏಂಜಲೀಸ್ (ಅಮೆರಿಕ): ಹಾಲಿವುಡ್ ಸಿನಿಮಾ ರಂಗದ ಖ್ಯಾತ ಹಿರಿಯ ನಟ ಜೇಮ್ಸ್‌ ಹ್ಯಾಂಡಿ (81) ಅವರನ್ನು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿರುವ ಅವರ ನಿವಾಸದಲ್ಲೇ ಅತ್ಯಂತ ಬರ್ಬರಾವಾಗಿ ಕೊಲೆ ಮಾಡಲಾಗಿದೆ. ಈ ಘೋರ ಕೃತ್ಯವನ್ನು ಅವರ ಗೆಳತಿಯ ಮಗನೇ ಎಸಗಿದ್ದು, ಇಡೀ ಹಾಲಿವುಡ್ ಚಿತ್ರರಂಗ ಈ ಘಟನೆಯಿಂದ ತೀವ್ರ ದಿಗ್ಭ್ರಮೆಗೊಂಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಲಾಸ್‌ ಏಂಜಲೀಸ್‌ನಲ್ಲಿರುವ ಜೇಮ್ಸ್‌ ಹ್ಯಾಂಡಿ ಅವರ ನಿವಾಸದಲ್ಲೇ ಈ ರಕ್ತಪಾತ ನಡೆದಿದೆ. ಜೇಮ್ಸ್ ಅವರ ಗೆಳತಿಯ ಮಗ, ನಟನಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಹತ್ಯೆ ಮಾಡಿದ್ದಾನೆ. 81 ವರ್ಷದ ವೃದ್ಧ ನಟ ಜೇಮ್ಸ್ ಅವರು ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಜೇಮ್ಸ್‌ ಹ್ಯಾಂಡಿ ಅವರನ್ನ ಕೊಲೆ ಮಾಡಿದ ತಕ್ಷಣ ಆರೋಪಿಯು ಅಮೆರಿಕದ ತುರ್ತು ಸಹಾಯವಾಣಿ ಸಂಖ್ಯೆ ‘911’ಗೆ ಸ್ವತಃ ತಾನೇ ಕರೆ ಮಾಡಿದ್ದಾನೆ. ಪೊಲೀಸರೊಂದಿಗೆ ಮಾತನಾಡಿದ ಆತ, “ನಾನು ಈಗಷ್ಟೇ ಕೊಲೆಯಾದ ಆ ಪಾಪಿ ವ್ಯಕ್ತಿಯ ಮಗ, ನಾನು ಅವರನ್ನ ಈಗಷ್ಟೇ ಕೊಂದಿದ್ದೇನೆ” ಎಂದು ಅತ್ಯಂತ ತಣ್ಣಗೆ ಒಪ್ಪಿಕೊಂಡಿದ್ದಾನೆ. ಕರೆ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಲಾಸ್‌ ಏಂಜಲೀಸ್‌ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿನಿಮಾ ಸ್ಟೈಲ್ ಕಳ್ಳತನ: ಮನೆಯಿಂದ ಎಸ್ಕೇಪ್ ಆಗುವಾಗ ಗೇಟ್ ಸರಳಿನಲ್ಲಿ ಸಿಲುಕಿಕೊಂಡ ಕಳ್ಳ!

ಬರ್ಬರ ಹತ್ಯೆಯಾಗಿರುವ ನಟ ಜೇಮ್ಸ್‌ ಹ್ಯಾಂಡಿ ಅವರು ಹಾಲಿವುಡ್‌ನ ಅತ್ಯಂತ ಜನಪ್ರಿಯ ಚಿತ್ರಗಳಾದ ‘ಟಾಪ್‌ ಗನ್: ಮಾವರಿಕ್’ (Top Gun: Maverick), ‘ಜುಮಾಂಜಿ’ (Jumanji) ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜಾಗತಿಕವಾಗಿ ಮನ್ನಣೆ ಗಳಿಸಿದ್ದರು. ಇಂತಹ ಹಿರಿಯ ನಟನ ಅಂತ್ಯ ಈ ರೀತಿ ದುರಂತಮಯವಾಗಿ ಸಂಭವಿಸಿರುವುದು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು