ಜೂನ್ 04ರ ಇಂದಿನ ದಿನವು ದ್ವಾದಶ ರಾಶಿಗಳ ಜಾತಕದವರ ಜೀವನದಲ್ಲಿ ವೈವಿಧ್ಯಮಯ ಬದಲಾವಣೆಗಳನ್ನು ತರಲಿದೆ. ಕೆಲವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಕ್ಕರೆ, ಇನ್ನು ಕೆಲವರಿಗೆ ಕೌಟುಂಬಿಕ ಹಾಗೂ ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯವಿದೆ. ಇಂದಿನ ರಾಶಿ ಭವಿಷ್ಯದ ಸಂಪೂರ್ಣ ವಿವರ ಇಲ್ಲಿದೆ:
ಮೇಷ ರಾಶಿ: ವೈವಾಹಿಕ ಜೀವನದಲ್ಲಿದ್ದ ಅಡೆತಡೆಗಳು ಕೊನೆಗೊಳ್ಳಲಿವೆ. ನಿಮ್ಮ ಮೇಲಿದ್ದ ಕಳಂಕವನ್ನು ತೊಳೆಯುವ ಪ್ರಯತ್ನ ಯಶಸ್ವಿಯಾಗಲಿದೆ. ಕೆಲಸದಲ್ಲಿ ತಕ್ಷಣದ ಒತ್ತಡ ಉಂಟಾದರೂ ನಿಭಾಯಿಸಬಹುದು. ಅನಾವಶ್ಯಕ ಮಾತುಗಳನ್ನು ಆಡಬೇಡಿ ಹಾಗೂ ಅನಿರೀಕ್ಷಿತ ಅಶುಭವಾರ್ತೆ ಕೇಳುವ ಸಂಭವವಿದೆ.
ವೃಷಭ ರಾಶಿ: ಎಲ್ಲ ವಿಷಯಗಳಲ್ಲೂ ಸ್ಪಷ್ಟತೆಯಿಂದ ನಡೆದುಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚುವರಿ ಲಾಭ ಸಿಗಲಿದ್ದು, ಹೊಸ ವಸ್ತುಗಳ ಖರೀದಿ ಮಾಡುವಿರಿ. ಉದ್ಯೋಗದ ಕನಸು ನನಸಾಗುವ ಹಾದಿಯಲ್ಲಿದೆ.
ಮಿಥುನ ರಾಶಿ: ಸಾಲ ಕೊಟ್ಟವರಿಂದ ಕಟು ಮಾತುಗಳನ್ನು ಕೇಳಬೇಕಾದೀತು. ಪ್ರತಿಯೊಂದು ಕೆಲಸಕ್ಕೂ ಪ್ರಾಮಾಣಿಕ ಪ್ರಯತ್ನ ಅಗತ್ಯ. ಲಘು ಆರೋಗ್ಯ ಸಮಸ್ಯೆ ಕಾಡಬಹುದು ಹಾಗೂ ಮನೆಯಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಹೋದರರೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿ: ಕರ್ಮ ಹಾಗೂ ಕರ್ತವ್ಯದ ನಡುವೆ ಸಮತೋಲನ ಕಾಯ್ದುಕೊಳ್ಳಿ. ಕೆಲಸದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸುಳ್ಳು ವಾರ್ತೆಗಳಿಗೆ ಮಾರುಹೋಗಬೇಡಿ. ದೂರದ ಸಂಬಂಧಿಕರಿಂದ ಶುಭವಾರ್ತೆ ಕೇಳುವಿರಿ. ಹಣಕಾಸಿನಲ್ಲಿ ತಾತ್ಕಾಲಿಕ ಒತ್ತಡ ಇರಲಿದೆ.
ಸಿಂಹ ರಾಶಿ: ಹಳೆಯ ಸಮಸ್ಯೆಗಳು ಮತ್ತೆ ಎದುರಾಗಬಹುದು, ಧೈರ್ಯದಿಂದ ನಿಭಾಯಿಸಿ. ಮಾತಿನ ಸೌಮ್ಯತೆ ನಿಮಗೆ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಇತರರಿಗೆ ಸಹಾಯ ಮಾಡುವಿರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಸವಾಲುಗಳು ಎದುರಾಗಬಹುದು.
ಕನ್ಯಾ ರಾಶಿ: ಮಾತಿನ ಚಪಲಕ್ಕೆ ಅಸಂಬದ್ಧವಾಗಿ ಮಾತನಾಡಿ ಸಮಸ್ಯೆ ತಂದುಕೊಳ್ಳಬೇಡಿ. ಕೌಟುಂಬಿಕ ಮನಸ್ತಾಪಗಳು ಆಸ್ತಿ ವಿಭಜನೆಯವರೆಗೆ ಹೋಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಮೆಚ್ಚುಗೆ ಸಿಗಲಿದೆ. ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ದೂರ ಪ್ರಯಾಣ ಬೇಡ.
ತುಲಾ ರಾಶಿ: ಊಹಿಸಲೂ ಸಾಧ್ಯವಿಲ್ಲದ ವಿಷಯವೊಂದು ನಿಮ್ಮ ಮುಂದೆ ಬರಲಿದೆ. ನಡವಳಿಕೆಯಲ್ಲಿ ಶಿಸ್ತು ಮತ್ತು ಮಾತಿನಲ್ಲಿ ಮಿತ ಇರಲಿ. ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವ ಭೀತಿ ಇದೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳಿಂದ ಧನಸಹಾಯ ಅಥವಾ ಬೆಂಬಲ ಸಿಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಆಲಸ್ಯ ದೂರವಾಗಿ ಕೆಲಸದಲ್ಲಿ ನಿಖರತೆ ಬರಲಿದೆ. ಇಂದಿನ ಆದಾಯ ಹೆಚ್ಚಾಗಲಿದ್ದು, ಆರ್ಥಿಕ ಚಿಂತೆಗಳು ದೂರಾಗಲಿವೆ. ಪ್ರಬಲ ಶತ್ರುಗಳನ್ನು ಮೆಟ್ಟಿನಿಲ್ಲುವ ಧೈರ್ಯ ನಿಮ್ಮದಾಗಲಿದೆ. ಹೂಡಿಕೆ ಕುರಿತು ಸ್ನೇಹಿತರೊಂದಿಗೆ ಚರ್ಚಿಸುವಿರಿ.
ಧನು ರಾಶಿ: ಸಮಯದ ಸದುಪಯೋಗ ಮಾಡಿಕೊಳ್ಳುವುದನ್ನು ಕಲಿಯಿರಿ. ಕಠಿಣ ಕೆಲಸಗಳನ್ನು ಮೊದಲೇ ಮುಗಿಸಿಕೊಳ್ಳಿ, ದಿನದ ಅಂತ್ಯದಲ್ಲಿ ಆರೋಗ್ಯ ವ್ಯತ್ಯಾಸವಾಗಬಹುದು. ನೂತನ ವಸ್ತ್ರ ಮತ್ತು ಆಭರಣಗಳ ಖರೀದಿಗೆ ಧನವ್ಯಯವಾಗಲಿದೆ. ಸಂಗಾತಿಯ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು.
ಮಕರ ರಾಶಿ: ಅವಕಾಶಗಳು ತಾನಾಗಿಯೇ ಬರುತ್ತವೆ ಎಂದು ಕಾಯದೆ, ನೀವೇ ಪ್ರಯತ್ನಿಸಿ. ಲೆಕ್ಕಾಚಾರಗಳು ಉಲ್ಟಾ ಆಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಅಸಮಾಧಾನವನ್ನು ದೂರ ಮಾಡಲು ಶ್ರಮಿಸಿ. ಆರ್ಥಿಕ ಯೋಜನೆಗಳಿಗೆ ಹೊಸ ರೂಪ ನೀಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕುಂಭ ರಾಶಿ: ಇಂದು ನಿಮ್ಮ ಆಂತರಿಕ ಸಾಮರ್ಥ್ಯ ಜಗತ್ತಿಗೆ ತಿಳಿಯಲಿದೆ, ಆದರೆ ಅಹಂಕಾರ ಬೇಡ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವಿರಿ. ಯತ್ನಿಸಿದ ಕೆಲಸಗಳಲ್ಲಿ ಭಾರಿ ಪ್ರಯೋಜನ ಸಿಗಲಿದೆ. ವೈಯಕ್ತಿಕ ವಹಿವಾಟುಗಳಲ್ಲಿ ಸಂಪೂರ್ಣ ಸ್ಪಷ್ಟತೆ ಕಾಯ್ದುಕೊಳ್ಳಿ.
ಮೀನ ರಾಶಿ: ಇಂದಿನ ದಿನ ಸವಾಲುಗಳಿಂದ ಕೂಡಿದ್ದು, ಸಹನೆಯೇ ನಿಮ್ಮ ಆಯುಧವಾಗಲಿ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ತಾತ್ಕಾಲಿಕವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನು ತಂದುಕೊಡಲಿವೆ.


