ಪಿಯುಸಿ ರಿಸಲ್ಟ್ ಎಫೆಕ್ಟ್: ನಿರೀಕ್ಷಿತ ಅಂಕ ಬರದ್ದಕ್ಕೆ ಮನನೊಂದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಒಂದು ಕರುಣಾಜನಕ ಘಟನೆ ನಡೆದಿದೆ. ತಾನು ನಿರೀಕ್ಷಿಸಿದಷ್ಟು ಅಂಕಗಳು ಬರಲಿಲ್ಲ ಎಂಬ ಅತೀವ ಬೇಸರದಿಂದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಬ್ಬಳ್ಳಿ ನಗರದ ನಿವಾಸಿಯಾದ ವಿದ್ಯಾರ್ಥಿನಿ (ಹೆಸರು ಗೌಪ್ಯವಾಗಿರಿಸಲಾಗಿದೆ) ಶೈಕ್ಷಣಿಕವಾಗಿ ಮುಂದಿದ್ದಳು. ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆಕೆ ಉತ್ತೀರ್ಣಳಾಗಿದ್ದರೂ, ತಾನು ಗುರಿ ಇಟ್ಟುಕೊಂಡಿದ್ದ ಅಂಕಗಳು ಸಿಗದಿದ್ದಕ್ಕೆ ತೀವ್ರವಾಗಿ ನೊಂದಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನನೊಂದು ಆಕೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

ಮನೆಯಲ್ಲಿ ಸಂತೋಷವಾಗಿರಬೇಕಿದ್ದ ಮಗಳು ಈಗ ಹೆಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಹತ್ತಿರದ ಸಂಬಂಧಿಕರು ಮತ್ತು ಗೆಳೆಯರು ಈ ವಿಷಯ ಕೇಳಿ ಕಂಗಾಲಾಗಿದ್ದಾರೆ. ಅಂಕ ಕಡಿಮೆ ಬಂದರೂ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿತ್ತು, ಆದರೆ ಜೀವ ಕಳೆದುಕೊಂಡರೆ ಮರಳಿ ತರಲು ಸಾಧ್ಯವಿಲ್ಲ ಎಂದು ನೆರೆಹೊರೆಯವರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದ: ಕಾಂಗ್ರೆಸ್‌ನಲ್ಲಿ ‘ರಿಪೋರ್ಟ್’ ಪಾಲಿಟಿಕ್ಸ್: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ ರಾಜೀನಾಮೆ! ಸಚಿವ ಜಮೀರ್​​ ಗೇಟ್ ಪಾಸ್ ಗ್ಯಾರಂಟಿ?

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಫಲಿತಾಂಶದ ಒತ್ತಡದಿಂದ ವಿದ್ಯಾರ್ಥಿಗಳು ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು