ಇಬ್ಬರು ಯುವಕರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆ ಮಾಡಿ ಠಾಣೆಗೆ ಅಳುತ್ತಾ ಬಂದ ಪತಿ

Husband who murdered his wife surrenders to Maharajpur police station in Kanpur

ಕಾನ್ಪುರ: ಇಲ್ಲಿನ ಮಹಾರಾಜಪುರ ಠಾಣಾ ಪೊಲೀಸರು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಕಣ್ಣೀರು ಸುರಿಸುತ್ತಾ ನೇರವಾಗಿ ಠಾಣಾ ಇನ್‌ಸ್ಪೆಕ್ಟರ್‌ ಬಳಿ ಬಂದ ವ್ಯಕ್ತಿಯೊಬ್ಬ, “ಸರ್..‌ ನಾನು ನನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ, ಆಕೆಯ ಮೃತ ದೇಹವನ್ನು ಕಂಬಳಿಯಲ್ಲಿ ಸುತ್ತಿ ಮನೆಯಲ್ಲಿಟ್ಟಿದ್ದೇನೆ ಎಂದು ಹೇಳಿದಾಗ ಪೊಲೀಸರು ದಿಗ್ಭ್ರಮೆಗೊಂಡರು.

ತನ್ನ ಪತ್ನಿಯನ್ನು ಕೊಲೆ ಮಾಡಿ ಠಾಣೆಗೆ ಶರಣಾದ ಆರೋಪಿಯನ್ನು ಫತೇಪುರ ಜಿಲ್ಲೆಯ ಮೋಹನಪುರ ಗ್ರಾಮದ 22 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ, ನಾಲ್ಕು ಗಂಟೆಗಳ ಕಾಲ ನಗರದಲ್ಲಿ ಅಲೆದಾಡಿದ್ದು, ಅಂತಿಮವಾಗಿ ಶರಣಾಗುವ ಮೊದಲು ಓಡಿಹೋಗುವ ಬಗ್ಗೆಯೂ ಯೋಚಿಸಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಪತ್ನಿ ಶ್ವೇತಾಳ ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಚಿನ್‌ ಮತ್ತು ಶ್ವೇತ ಪರಸ್ಪರ ಪ್ರೀತಿಸುತ್ತಿದ್ದು, ಪೋಷಕರ ವಿರೋಧದ ನಡುವೆ ನ್ಯಾಯಾಲಯದ ಮೂಲಕ ಮದುವೆಯಾಗಿದ್ದರು. ಆರಂಭದಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಚಿನ್‌ ಸೂರತ್‌ಗೆ ತೆರಳಿದ್ದನು. ತಿಂಗಳ ನಂತರ, ಕಾನ್ಪುರಕ್ಕೆ ತೆರಳಿದ ದಂಪತಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದರು. ಜೀವನದ ಬಂಡಿ ಎಳೆಯಲು ಸಚಿನ್ ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದನು.

ಇದನ್ನೂ ಓದಿ: ನಗ್ನ ಫೋಟೊ ವೈರಲ್ ಮಾಡುವುದಾಗಿ ಬೆದರಿಸಿ ಅತ್ಯಾಚಾರ, ಆರೋಪಿಗೆ ಶಿಕ್ಷೆ

ಆರಂಭದಲ್ಲಿ ದಂಪತಿ ಸಂತೋಷದ ಜೀವನ ನಡೆಸುತ್ತಿದ್ದರು. ಆದರೆ ಸಚಿನ್‌ನ ತಲೆಯಲ್ಲಿ ತನ್ನ ಪತ್ನಿಯ ನಡತೆಯ ಬಗ್ಗೆ ಅನುಮಾನದ ಹುತ್ತ ಬೆಳೆಯಲು ಪ್ರಾರಂಭವಾಯಿತು. ಶ್ವೇತಾಳ ಬ್ಯಾಂಕ್‌ ಖಾತೆಗೆ ಅಗಾಗ್ಗೆ ಹಣ ಜಮಾ ಆಗುತ್ತಿತ್ತು. ಇದನ್ನು ಸಚಿನ್‌ ಪ್ರಶ್ನಿಸಿದಾಗ, “ನನ್ನ ಅಜ್ಜಿ ಹಣ ಹಾಕುತ್ತಿದ್ದಾರೆ” ಎಂದು ಶ್ವೇತ ಹೇಳುತ್ತಿದ್ದಳು. ಆದರೆ, ಒಂದು ದಿನ ಅನುಮಾನವನ್ನು ಇತ್ಯರ್ಥಗೊಳಿಸಲು ಸದ್ದಿಲ್ಲದೆ, ಯೋಜನೆಯನ್ನು ರೂಪಿಸುತ್ತಾನೆ.

ಶುಕ್ರವಾರದಂದು ಶ್ವೇತಾಳಿಗೆ ಕರೆ ಮಾಡಿದ ಸಚಿನ್‌, ತಾನು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿದ್ದೇನೆ ಮತ್ತು ರಾತ್ರಿ ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿದನು. ಸ್ವಲ್ಪ ಹೊತ್ತಿನ ಬಳಿಕ ಸಚಿನ್‌ ಮನೆಗೆ ಹಿಂದಿರುಗಿ ನೋಡಿದಾಗ ಶ್ವೇತ, ನೆರೆಹೊರೆಯ ಇಬ್ಬರು ಯುವಕರೊಂದಿಗೆ ಸಿಕ್ಕಿಬಿದ್ದಿದ್ದಾಳೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದವು. ಈ ವೇಳೆ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ದಂಪತಿಯನ್ನು ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಮೀರಾ-ಭಯಂದರ್ ನಗರದಲ್ಲಿ ಕಾರಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಆದರೆ, ಮನೆಗೆ ಹಿಂತಿರುಗಿದ ನಂತರವೂ ಇಬ್ಬರ ನಡುವಿನ ಜಗಳ ಕಡಿಮೆಯಾಗದೆ ಮತ್ತಷ್ಟು ಹೆಚ್ಚಾಯಿತು. ಶ್ವೇತಾ ತನ್ನನ್ನು ಕೊಂದರೂ ಇತರ ಪುರುಷರೊಂದಿಗೆ ಇರುತ್ತೇನೆ ಎಂದು ಗದರಿದಳು. ಈ ವೇಳೆ ತಾಳ್ಮೆ ಕಳೆದುಕೊಂಡ ಸಚಿನ್‌ ಕೋಪದ ಭರದಲ್ಲಿ ಶ್ವೇತಾಳ ಕತ್ತು ಹಿಸುಕಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.

ಕೊಲೆಯ ನಂತರ, ಸಚಿನ್ ಕ್ಲಾಕ್ ಟವರ್ (ಘಂಟಾಘರ್) ಪ್ರದೇಶಕ್ಕೆ ಓಡಿಹೋಗಿ ಅಲ್ಲಿ ಹಲವಾರು ಗಂಟೆಗಳ ಕಾಲ ಕುಳಿತಿದ್ದ. ಬಳಿಕ ಅಳುತ್ತಾ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. “ನಾವು ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದೆವು. ಹೀಗಾಗಿ ಅವಳಿಗೆ ಯಾರೂ ಇಲ್ಲ, ನನಗೂ ಯಾರೂ ಇಲ್ಲ. ಹೀಗಾಗಿ ನಾನು ಠಾಣೆಗೆ ಶರಣಾಗಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com)

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು