ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯ ಹಿಂದೂ ಮಗುವಿಗೆ ಪಾಠದ ವಿಷಯಗಳ ಬದಲು ಧಾರ್ಮಿಕ ಪಠಣ ಮಾಡುವಂತೆ ಹೋಮ್ ವರ್ಕ್ (ಮನೆಕೆಲಸ) ಕೊಟ್ಟ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದು, ವಿವಾದ ತಾರಕಕ್ಕೇರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಕೃತ್ಯ ಎಸಗಿದ ಶಿಕ್ಷಕಿಯನ್ನು ಕೆಲಸದಿಂದ ಶಾಶ್ವತವಾಗಿ ವಜಾಗೊಳಿಸಿದೆ ಎಂದು ಎಎನ್‌ಐ (ANI) ವರದಿ ಮಾಡಿದೆ.
ಹೈದರಾಬಾದ್‌ನ ಸಯೀದಾಬಾದ್‌ನಲ್ಲಿರುವ ‘ಸಕ್ಸಸ್, ದಿ ಸ್ಕೂಲ್’ (Success The School) ಎಂಬ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ವಜಾಗೊಂಡಿರುವ ಶಿಕ್ಷಕಿಯನ್ನು ಶೇಖ್ ಆಯಿಷಾ ಪರ್ವಿನ್ ಎಂದು ಗುರುತಿಸಲಾಗಿದೆ. ಶಾಲೆ ಮುಗಿಯುವ ವೇಳೆ ಮಕ್ಕಳಿಗೆ ಅಂದಿನ ಪಾಠ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ ಹೋಮ್ ವರ್ಕ್ ನೀಡುವುದು ಸಾಮಾನ್ಯ ನಿಯಮ. ಆದರೆ ಶಿಕ್ಷಕಿ ಆಯಿಷಾ ಪರ್ವಿನ್ ಶಾಲೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಧಾರ್ಮಿಕ ವಿಷಯವನ್ನು ಹೇರಲು ಯತ್ನಿಸಿದ್ದಾಳೆ.
ಇಲ್ಲಿದೆ ನೋಡಿ ವಿಡಿಯೋ:
School Teacher Terminated In #Hyderabad After Alleged Religious Recitation Controversy
A controversy has erupted at #SuccessTheSchool in #Saidabad, Hyderabad, after the parents of a Class 2 Hindu student alleged that their child was asked to recite the Kalma and Surah Fateha.… pic.twitter.com/R4UNcp7Hhe
— BNN Channel (@Bavazir_network) July 16, 2026
ಮನೆಗೆ ಬಂದಾಗ ಬಯಲಾದ ಕೃತ್ಯ: ಎರಡನೇ ತರಗತಿಯ ಹಿಂದೂ ಮಗುವಿಗೆ ಇಸ್ಲಾಮಿಕ್ ಧಾರ್ಮಿಕ ಪ್ರಾರ್ಥನೆಗಳಾದ ‘ಕಲ್ಮಾ’ ಮತ್ತು ‘ಸೂರಾ ಫಾತಿಹಾ’ವನ್ನು ಪಠಿಸಿಕೊಂಡು ಬರುವಂತೆ ಶಿಕ್ಷಕಿ ಡೈರಿಯಲ್ಲಿ ಬರೆದುಕೊಟ್ಟಿದ್ದಳು. ಮಗು ಮನೆಗೆ ಮರಳಿದ ನಂತರ ಪೋಷಕರು ಹೋಮ್ ವರ್ಕ್ ಪರಿಶೀಲಿಸಿದಾಗ ಈ ವಿಷಯ ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಎಚ್ಚೆತ್ತ ಪೋಷಕರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಇತರೆ ಪೋಷಕರೂ ಶಾಲೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪಟ್ಟು ಹಿಡಿದರು.
ಇದನ್ನೂ ಓದಿ; “ನನ್ನ ಅಂತ್ಯ ಬಯಸುವ ಬಿಜೆಪಿ ಸರ್ವನಾಶ ನೋಡುವವರೆಗೂ ನಾನು ಸಾಯಲ್ಲ” ಎಂದ ಮಮತಾ ಬ್ಯಾನರ್ಜಿ
ಪೋಷಕರ ಪ್ರತಿಭಟನೆ ಹಾಗೂ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಾಲಾಡಳಿತ ಮಂಡಳಿಯು ಶಿಕ್ಷಕಿ ಶೇಖ್ ಆಯಿಷಾ ಪರ್ವಿನ್ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ. ಆಕೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೆಲಸದಿಂದ ವಜಾಗೊಳಿಸಿ ಆದೇಶ ಪತ್ರ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

