ಕೋಲ್ಕತ್ತಾ: ಭಾರತೀಯ ಸಾರಿಗೆ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಮುಂದಿನ ೧೦ ವರ್ಷಗಳಲ್ಲಿ ಪ್ರತಿ ವರ್ಷ ಸರಾಸರಿ ೧೦ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಪ್ರಸ್ತುತ ೧೬೬ ಇರುವ ದೇಶದ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆಯು 2036 ರ ವೇಳೆಗೆ 266ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಪ್ರಕಟಿಸಿದ್ದಾರೆ.
ಅಂತರರಾಷ್ಟ್ರೀಯ ಏರ್ಪೋರ್ಟ್
ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ದೇಶದ 3ನೇ ‘ಹಬ್ ಅಂಡ್ ಸ್ಪೋಕ್’ (Hub & Spoke) ಕಾರ್ಯಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು, ಉಡಾನ್ (UDAN) ಯೋಜನೆ ಹಾಗೂ 10 ವರ್ಷಗಳ ಮುನ್ನೋಟ: 2024 ರಲ್ಲಿ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಕಳೆದ 12 ವರ್ಷಗಳಲ್ಲಿ ಪ್ರತಿ 40 ದಿನಗಳಿಗೊಮ್ಮೆ ಒಂದು ಹೊಸ ವಿಮಾನ ನಿಲ್ದಾಣ ಹೊಸ ಟರ್ಮಿನಲ್ ನಿರ್ಮಿಸುವ ಮೂಲಕ ಈ ಸಂಖ್ಯೆಯನ್ನು 166 ಕ್ಕೆ ಏರಿಸಲಾಗಿದೆ.
ಪ್ರಾದೇಶಿಕ ಸಂಪರ್ಕ ಯೋಜನೆಯಾದ ‘ಮಾರ್ಪಡಿಸಿದ ಉಡಾನ್’ (Modified UDAN) ಯೋಜನೆಗೆ 2026 ರ ಮಾರ್ಚ್ನಲ್ಲಿ ಕೇಂದ್ರ ಸಂಪುಟವು 10೦ ವರ್ಷಗಳ ಅವಧಿಗೆ 28,840 ಕೋಟಿ ರೂ. ಮೀಸಲಿಟ್ಟಿದೆ. ಮುಂದಿನ 10 ವರ್ಷಗಳಲ್ಲಿ ಒಟ್ಟು 100 ನೂತನ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸುಮಾರು 30 ಸಾವಿರ ಕೋಟಿ ವೆಚ್ಚ ಮಾಡಲಾಗುವುದು.
ಇದನ್ನೂ ಓದಿ: ಭಾರತದಲ್ಲಿ ಎವರೆಸ್ಟ್, ಲಾಲ್ಜಿ ಗೋಧೂ ಹಿಂಗುಗಳ ಮಾರಾಟಕ್ಕೆ FSSAI ತಾತ್ಕಾಲಿಕ ನಿಷೇಧ
ಅಹಮದಾಬಾದ್ನಿಂದ ‘ಹಬ್ ಅಂಡ್ ಸ್ಪೋಕ್’ ಮಾದರಿ ಆರಂಭ:
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಆರಂಭಿಸಲಾದ ‘ಹಬ್ ಅಂಡ್ ಸ್ಪೋಕ್’ ಮಾದರಿಯು ಸಣ್ಣ ನಗರಗಳ ಪ್ರಯಾಣಿಕರನ್ನು ಅಂತಾರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಸುಲಭವಾಗಿ ತಲುಪಿಸಲು ನೆರವಾಗಲಿದೆ.ಭಾರತವನ್ನು ಜಾಗತಿಕ ವಿಮಾನಯಾನ ಕೇಂದ್ರವನ್ನಾಗಿ (Global Aviation Hub) ಪರಿವರ್ತಿಸುವುದು.
2ನೇ ಹಾಗೂ 3ನೇ ಹಂತದ (Tier-2 & Tier-3) ನಗರಗಳು, ಹಿಮಾಲಯ ಪ್ರದೇಶಗಳು, ಲಕ್ಷದ್ವೀಪ ಮತ್ತು ಅಂಡಮಾನ್ನಂತಹ ದ್ವೀಪ ಪ್ರದೇಶಗಳಿಂದಲೂ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಮಾನ ಸಂಪರ್ಕಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಬೇಡಿಕೆಗಳಿಗೆ ಸ್ಪಂದಿಸಿ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

