ಅತಿ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಲಿದೆ ಭಾರತ: ಇಂಡಿಯನ್​​ ಆರ್ಮಿಗೆ ಸೇರಲಿದೆ 114 ರಫೇಲ್ ಫೈಟರ್ ಜೆಟ್‌ಗಳು

ಭಾರತ ಮತ್ತು ಫ್ರಾನ್ಸ್ ನಡುವೆ 114 ರಫೇಲ್ ಯುದ್ಧ ವಿಮಾನಗಳ (Rafale Fighter Jets) ಬೃಹತ್ ಒಪ್ಪಂದ ನಡೆದಿದೆ. ಈ ಮೂಲಕ ಭಾರತ ಬಹುದೊಡ್ಡ ದೊಡ್ಡ ಮೊತ್ತ ವಿಮಾನಗಳನ್ನು ಪಡೆಯಲಿದೆ. ಹಾಗೂ ಇದು ಭಾರತದ ರಕ್ಷಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಒಪ್ಪಂದಗಳಲ್ಲಿ ಒಂದಾಗಲಿದೆ.ಈ ಯೋಜನೆಯ ಒಟ್ಟು ಮೌಲ್ಯ ಸುಮಾರು ₹3.25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಒಟ್ಟು 114 ರಫೇಲ್ ವಿಮಾನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 18 ವಿಮಾನಗಳನ್ನು ನೇರವಾಗಿ ಫ್ರಾನ್ಸ್‌ನಿಂದ ಸಿದ್ಧ ಸ್ಥಿತಿಯಲ್ಲಿ (Fly-away condition) ಆಮದು ಮಾಡಿಕೊಳ್ಳಲಾಗುವುದು ಎಂದು ಎನ್​​​ಡಿಟಿವಿ ವರದಿ ಮಾಡಿದೆ.

ಉಳಿದ 96 ವಿಮಾನಗಳನ್ನು ಭಾರತದಲ್ಲಿಯೇ ದಸ್ಸಾಲ್ಟ್ ಏವಿಯೇಷನ್ (Dassault Aviation) ಮತ್ತು ಭಾರತೀಯ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಉತ್ಪಾದಿಸಲಾಗುವುದು. ಇದರಲ್ಲಿ ಶೇ. 30 ರಿಂದ 60 ರಷ್ಟು ಭಾರತೀಯ ಬಿಡಿಭಾಗಗಳನ್ನು ಬಳಸುವ ಗುರಿಯಿದೆ.ಭಾರತೀಯ ವಾಯುಪಡೆಯ (IAF) ಈ ಪ್ರಸ್ತಾವನೆಗೆ ಇತ್ತೀಚೆಗೆ (ಜನವರಿ 2026) ರಕ್ಷಣಾ ಖರೀದಿ ಮಂಡಳಿಯು (DPB) ಪ್ರಾಥಮಿಕ ಅನುಮೋದನೆ ನೀಡಿದೆ. ಫೆಬ್ರವರಿ 12, 2026 ರಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಇದಕ್ಕೆ ಅಂತಿಮ ಅನುಮೋದನೆ ಸಿಗುವ ಸಾಧ್ಯತೆಯಿದೆ.

Advertisement

ಇದನ್ನೂ ಓದಿ: ಸಲ್ಮಾನ್ ಖಾನ್ ಶ್ರೇಷ್ಠ, ಉತ್ತಮ ವ್ಯಕ್ತಿ ಎಂದು ಕೊಂಡಾಡಿದ RSS ಮುಖ್ಯಸ್ಥ ಮೋಹನ್ ಭಾಗ್ವತ್

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಫೆಬ್ರವರಿ 18, 2026 ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಬೃಹತ್ ಒಪ್ಪಂದಕ್ಕೆ ಅಂತಿಮ ಸಹಿ ಬೀಳುವ ನಿರೀಕ್ಷೆಯಿದೆ.ಈಗಾಗಲೇ ಭಾರತದ ಬಳಿ 36 ರಫೇಲ್ ವಿಮಾನಗಳಿವೆ. ಈ ಹೊಸ 114 ವಿಮಾನಗಳು ಸೇರಿದರೆ ಭಾರತದ ರಫೇಲ್ ಪಡೆ ಒಟ್ಟು 150 ಕ್ಕೆ ಏರಲಿದೆ (ನೌಕಾಪಡೆಯ 26 ವಿಮಾನಗಳನ್ನು ಹೊರತುಪಡಿಸಿ). ಇದು ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಭಾರತದ ವಾಯು ಪ್ರಾಬಲ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.

Advertisement

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು