ಅಹಮದಾಬಾದ್: ಅರಬ್ಬಿ ಸಮುದ್ರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ICG) ಮತ್ತು ಗುಜರಾತ್ ಭಯೋತ್ಪಾದನಾ ವಿರೋಧಿ ದಳ (ATS) ಜಂಟಿಯಾಗಿ ನಡೆಸಿದ ಅತ್ಯಂತ ನಿಖರ ಹಾಗೂ ಸಾಹಸಿಕ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ. ಲಕ್ಷದ್ವೀಪದ ಪಶ್ಚಿಮಕ್ಕೆ ಅರಬ್ಬಿ ಸಮುದ್ರದ ಆಳದಲ್ಲಿ ನಡೆದ ಈ ಹೈ-ಸೀಸ್ ಶೋಧ ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ ಇರಾನಿ ದೋಣಿಯನ್ನು (Iranian Dhow) ತಡೆದು ಪರಿಶೀಲಿಸಲಾಗಿದೆ.
ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರಾವಳಿ ಕಾವಲು ಪಡೆಯ ಹಡಗುಗಳು ಹಾಗೂ ಗಸ್ತು ವಿಮಾನಗಳು ನಿಖರವಾದ ವೈಮಾನಿಕ ಮತ್ತು ಸಮುದ್ರ ಕಾವಲು ನಡೆಸಿದ್ದವು. ಸೆಪ್ಟೆಂಬರ್ 25, 2026 ರಂದು ಸುಳಿವು ಸಿಗುತ್ತಿದ್ದಂತೆ ಇರಾನಿ ದೋಣಿಯನ್ನು ಸುದೀರ್ಘವಾಗಿ ಬೆನ್ನಟ್ಟಿ ಸೀಜ್ ಮಾಡಲಾಗಿದೆ. ದೋಣಿಯ ಪರಿಶೀಲನೆ ವೇಳೆ ಸುಮಾರು 526 ಕೆಜಿ ಅತ್ಯುನ್ನತ ದರ್ಜೆಯ ಹೆರಾಯಿನ್ ಹಾಗೂ ಮೆಥಾಂಫೆಟಮೈನ್ ಮಾದಕ ದ್ರವ್ಯ ಪತ್ತೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದರ ಅಂದಾಜು ಮೌಲ್ಯ 3,000 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಕಳ್ಳರ ಪ್ಲಾನ್ ಉಲ್ಟಾ: ಎಟಿಎಂ ಒಡೆಯುತ್ತಿದ್ದ ಖದೀಮರನ್ನು 5 ನಿಮಿಷದಲ್ಲಿ ಲಾಕ್ ಮಾಡಿದ ಪೊಲೀಸರು
ಇಲ್ಲಿದೆ ನೋಡಿ ವಿಡಿಯೋ:
#WATCH | The Indian Coast Guard, operating in coordination with the Anti-Terrorism Squad (ATS), Gujarat, successfully thwarted a major maritime narcotics-smuggling attempt in the Arabian Sea, west of Lakshadweep. Acting on actionable intelligence, the Indian Coast Guard assets… pic.twitter.com/bMLZFuZUJN
— ANI (@ANI) September 30, 2026
ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಇರಾನಿ ದೋಣಿ, ವಶಪಡಿಸಿಕೊಂಡ ಡ್ರಗ್ಸ್ ಹಾಗೂ ಬಂಧಿತ ಐವರು ಆರೋಪಿಗಳನ್ನು ಸಶಸ್ತ್ರ ಭದ್ರತೆಯೊಂದಿಗೆ ಮುಂಬೈ ಬಂದರಿಗೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿವಿಧ ತನಿಖಾ ಸಂಸ್ಥೆಗಳ ಜಂಟಿ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

