IPL: ಕಾನೋಲಿ ಶತಕ ವ್ಯರ್ಥ, ಪಂಜಾಬ್ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಜಯ

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 47ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 34 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ಹೈದರಾಬಾದ್, ನಿಗದಿತ 20 ಓವರ್‌ಗಳಲ್ಲಿ 4ವಿಕೆಟ್ ಕಳೆದುಕೊಂಡು ಭಾರೀ 235 ರನ್‌ಗಳ ಮೊತ್ತ ಕಲೆಹಾಕಿತು. ತಂಡದ ಪರ ಹೆನ್ರಿಚ್ ಕ್ಲಾಸೆನ್ ಆಕರ್ಷಕ 69 ರನ್‌ಗಳನ್ನು ಸಿಡಿಸಿದರೆ, ಇಶಾನ್ ಕಿಶನ್ 55 ರನ್‌ಗಳೊಂದಿಗೆ ಉತ್ತಮ ಬೆಂಬಲ ನೀಡಿದರು.

ಅಭಿಷೇಕ್ ಶರ್ಮಾ 35, ಟ್ರಾವಿಸ್ ಹೆಡ್ 38 ಮತ್ತು ನಿತೀಶ್ ಕುಮಾರ್ ರೆಡ್ಡಿ ಅಜೇಯ 29 ರನ್‌ಗಳ ಮೂಲಕ ತಂಡವನ್ನು ದೊಡ್ಡ ಮೊತ್ತಕ್ಕೆ ಕೊಂಡೊಯ್ದರು. ಪಂಜಾಬ್ ಪರ ಲಾಕಿ ಫರ್ಗುಸನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಬೆಂಗಳೂರು ಫ್ಯಾನ್ಸ್‌ಗೆ ಬಿಸಿಸಿಐ ಶಾಕ್: ಚಿನ್ನಸ್ವಾಮಿ ಬದಲು ಅಹಮದಾಬಾದ್‌ನಲ್ಲಿ ಐಪಿಎಲ್ 2026 ಫೈನಲ್!

236 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ತ್ವರಿತವಾಗಿ ಔಟ್ ಆಗುವುದರಿಂದ ತಂಡ ಒತ್ತಡಕ್ಕೆ ಸಿಲುಕಿತು. ಆದರೆ ಕೂಪರ್ ಕಾನೋಲಿ ಏಕಾಂಗಿಯಾಗಿ ಹೋರಾಟ ನಡೆಸಿ ಕೇವಲ 59 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ಅಜೇಯ 107 ರನ್‌ಗಳ ಶತಕ ಸಿಡಿಸಿದರು. ಆದರೂ ಅವರ ಶ್ರಮ ವ್ಯರ್ಥವಾಯಿತು.

ಇತರೆ ಬ್ಯಾಟ್ಸ್‌ಮನ್‌ಗಳಲ್ಲಿ ಪ್ರಿಯಾನ್ಶ್ ಆರ್ಯ 1, ಪ್ರಭ್ಸಿಮ್ರನ್ ಸಿಂಗ್ 3, ಶ್ರೇಯಸ್ ಅಯ್ಯರ್ 5, ಮಾರ್ಕಸ್ ಸ್ಟೋಯಿನಿಸ್ 28, ಸೂರ್ಯಾನ್ಶ್ ಶೆಡ್ಗೆ 25, ಶಶಾಂಕ್ ಸಿಂಗ್ 4 ಮತ್ತು ಮಾರ್ಕೋ ಯಾನ್ಸನ್ 19 ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್‌ಗಳಿಗಷ್ಟೇ ಸೀಮಿತವಾಯಿತು.

ಹೈದರಾಬಾದ್ ಪರ ಪ್ಯಾಟ್ ಕಮ್ಮಿನ್ಸ್ ಮತ್ತು ಶಿವಂಗ್ ಕುಮಾರ್ ತಲಾ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ, ಎಶಾನ್ ಮಲಿಂಗ ಮತ್ತು ಸಕಿಬ್ ಹುಸೈನ್ ತಲಾ ಒಂದು ವಿಕೆಟ್ ಕಬಳಿಸಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ‌ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು