ಚೆನ್ನೈ: ಹೊಸ ಪಕ್ಷ ‘ಟಿವಿಕೆ’ (TVK) ಸ್ಥಾಪಿಸಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ನಟ ಜೋಸೆಫ್ ವಿಜಯ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವಿಘ್ನ ಎದುರಾಗಿದೆ.
ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚನೆಗೆ ಅಗತ್ಯವಿರುವ 118 ಸ್ಥಾನಗಳ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಲು ವಿಜಯ್ ಮುಂದಾಗಿದ್ದರು. ಮೇ 7ರಂದು (ನಾಳೆ) ಪ್ರಮಾಣವಚನ ಸ್ವೀಕರಿಸಲು ಸಕಲ ಸಿದ್ಧತೆಗಳೂ ನಡೆದಿದ್ದವು.
ಇದನ್ನೂ ಓದಿ: ಮೇ 9ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಪದಗ್ರಹಣ; ಕೋಲ್ಕತ್ತಾದಲ್ಲಿ ಸಜ್ಜಾದ ಭವ್ಯ ವೇದಿಕೆ!
ಆದರೆ, ಮೂಲಗಳ ಪ್ರಕಾರ ವಿಜಯ್ ಅವರು ಸಲ್ಲಿಸಿರುವ ಬೆಂಬಲಿತ ಶಾಸಕರ ಪಟ್ಟಿ ಮತ್ತು ಬಹುಮತದ ಲೆಕ್ಕಾಚಾರದ ಕುರಿತು ತಮಿಳುನಾಡು ರಾಜ್ಯಪಾಲರು ಸದ್ಯಕ್ಕೆ ತೃಪ್ತರಾಗಿಲ್ಲ ಎಂದು ತಿಳಿದುಬಂದಿದೆ. ಸಂಖ್ಯಾಬಲದ ಸ್ಪಷ್ಟತೆ ಇಲ್ಲದ ಕಾರಣ ರಾಜ್ಯಪಾಲರು ಪ್ರಮಾಣವಚನಕ್ಕೆ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಾಳೆ ನಡೆಯಬೇಕಿದ್ದ ಪದಗ್ರಹಣ ಸಮಾರಂಭ ಅನುಮಾನಕ್ಕೆ ದೂಡಲ್ಪಟ್ಟಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

