IPL: ಸಾಯಿ ಸುದರ್ಶನ್ ಅಬ್ಬರ, ಗುಜರಾತ್ ಬೌಲರ್ಸ್ ಕಮಾಲ್; ಚೆನ್ನೈಗೆ ಸೋಲು

ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 89 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 66ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ತಂಡದ ಪರ ಸಾಯಿ ಸುದರ್ಶನ್ 53 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸ್ ನೆರವಿನಿಂದ 84 ರನ್ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶುಭ್ಮನ್ ಗಿಲ್ 64 ರನ್ ಗಳಿಸಿದರು. ಜೋಸ್ ಬಟ್ಲರ್ ಅಜೇಯ 57 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 7 ರನ್ ಗಳಿಸಿದರು. ರಾಹುಲ್ ತೆವಾಟಿಯಾ ರನ್ ಖಾತೆ ತೆರೆಯದೇ ರನ್ ಔಟ್ ಆದರು.

ಚೆನ್ನೈ ಪರ ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್ ಹಾಗೂ ಮುಖೇಶ್ ಚೌಧರಿ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: IPL: ಮುಂಬೈ ಮತ್ತು ಕೆಕೆಆರ್ ಪಂದ್ಯದ ಹೈಲೈಟ್ಸ್

230 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಚೆನ್ನೈ ತಂಡವು 13.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 140 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಶಿವಂ ದುಬೆ 47 ರನ್ ಗಳಿಸಿ ಹೋರಾಟ ನಡೆಸಿದರು.

ಮ್ಯಾಟ್ ಶಾರ್ಟ್ 24, ರುತುರಾಜ್ ಗಾಯಕ್ವಾಡ್ 16, ಕಾರ್ತಿಕ್ ಶರ್ಮಾ 19, ಡೆವಾಲ್ಡ್ ಬ್ರೆವಿಸ್ 8, ಅನ್ಶುಲ್ ಕಾಂಬೋಜ್ 19, ನೂರ್ ಅಹ್ಮದ್ 1 ಹಾಗೂ ಮುಖೇಶ್ ಚೌಧರಿ ಅಜೇಯ 2 ರನ್ ಗಳಿಸಿದರು. ಸಂಜು ಸ್ಯಾಮ್ಸನ್, ಉರ್ವಿಲ್ ಪಟೇಲ್ ಮತ್ತು ಸ್ಪೆನ್ಸರ್ ಜಾನ್ಸನ್ ಶೂನ್ಯಕ್ಕೆ ಔಟ್ ಆದರು.

ಗುಜರಾತ್ ಪರ ರಶೀದ್ ಖಾನ್, ಕಗಿಸೊ ರಬಾಡ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದು ಚೆನ್ನೈ ಬ್ಯಾಟಿಂಗ್ ಪಡೆಗೆ ಭಾರೀ ಹೊಡೆತ ನೀಡಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು