ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 65ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ತಂಡದ ಪರ ಕಾರ್ಬಿನ್ ಬಾಷ್ 32 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು.
ಹಾರ್ದಿಕ್ ಪಾಂಡ್ಯ 26, ತಿಲಕ್ ವರ್ಮಾ 20, ರೋಹಿತ್ ಶರ್ಮಾ 15, ಸೂರ್ಯಕುಮಾರ್ ಯಾದವ್ 15, ವಿಲ್ ಜ್ಯಾಕ್ಸ್ 14 ಹಾಗೂ ದೀಪಕ್ ಚಹಾರ್ 10 ರನ್ ಗಳಿಸಿದರು. ರಯಾನ್ ರಿಕಲ್ಟನ್ 6 ರನ್‌ಗೆ ಔಟಾದರೆ, ನಮನ್ ಧೀರ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು.
ಇದನ್ನೂ ಓದಿ: IPL: ಮತ್ತೆ ಸೂರ್ಯವಂಶಿ ವೈಭವದ ಆಟ, ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ಜಯ
ಕೋಲ್ಕತ್ತಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕ್ಯಾಮರಾನ್ ಗ್ರೀನ್, ಕಾರ್ತಿಕ್ ತ್ಯಾಗಿ ಹಾಗೂ ಸೌರಭ್ ದುಬೆ ತಲಾ 2 ವಿಕೆಟ್ ಪಡೆದರು. ಸುನಿಲ್ ನರೈನ್ 1 ವಿಕೆಟ್ ಕಬಳಿಸಿದರು.
148 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಮನೀಶ್ ಪಾಂಡೆ 45 ರನ್ ಹಾಗೂ ರೋವ್‌ಮನ್ ಪೊವೆಲ್ 40 ರನ್‌ಗಳ ಜವಾಬ್ದಾರಿಯುತ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನೂ ಅಜಿಂಕ್ಯ ರಹಾನೆ 21, ರಿಂಕು ಸಿಂಗ್ 9, ಫಿನ್ ಅಲ್ಲೆನ್ 8, ಅನುಕೂಲ್ ರಾಯ್ 4 ಹಾಗೂ ಕ್ಯಾಮರಾನ್ ಗ್ರೀನ್ 4 ರನ್ ಗಳಿಸಿದರು.
ಮುಂಬೈ ಪರ ಕಾರ್ಬಿನ್ ಬಾಷ್ 3 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ, ದೀಪಕ್ ಚಹಾರ್ ಹಾಗೂ ಅಲ್ಲಾ ಗಜನ್‌ಫರ್ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


