Breaking News

ಮುಂಬೈನ 18ರ ಜಿಯಾ ರಾಯ್ ವಿಶ್ವದಾಖಲೆ: ‘ಟ್ರಿಪಲ್ ಕ್ರೌನ್’ ಪೂರ್ಣಗೊಳಿಸಿದ ಜಗತ್ತಿನ ಮೊದಲ ಮಹಿಳಾ ಪ್ಯಾರಾ-ಈಜುಗಾರ್ತಿ

ಮುಂಬೈ: ಮುಂಬೈನ ೧೮ ವರ್ಷದ ಪ್ಯಾರಾ-ಈಜುಗಾರ್ತಿ ಜಿಯಾ ರಾಯ್ (Jiya Rai) ಮುಕ್ತ ನೀರು ಈಜು ವಿಭಾಗದಲ್ಲಿ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ‘ಟ್ರಿಪಲ್ ಕ್ರೌನ್’ (Triple Crown of Open Water Swimming) ಸಾಧನೆಯನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಮಹಿಳಾ ಪ್ಯಾರಾ-ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (Autism Spectrum Disorder – ASD) ಸಮಸ್ಯೆಯಿಂದ ಬಳಲುತ್ತಿರುವ ಜಿಯಾ ರಾಯ್, ಆಗಸ್ಟ್ ೩೦ ರಂದು ನ್ಯೂಯಾರ್ಕ್ ನಗರದ ೪೮ ಕಿಲೋಮೀಟರ್ ಸುದೀರ್ಘ ‘೨೦ ಬ್ರಿಡ್ಜಸ್ ಸ್ವಿಮ್ ಅರೌಂಡ್ ಮ್ಯಾನ್‌ಹ್ಯಾಟನ್’ ಸಾಹಸವನ್ನು ೮ ಗಂಟೆ ೫೩ ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಮ್ಯಾನ್‌ಹ್ಯಾಟನ್ ಈಜು ಸ್ಪರ್ಧೆಯ ಸುಮಾರು ನೂರು ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಈ ಕಠಿಣ ಸಾಧನೆ ಮಾಡಿದ ಆಟಿಸಂ ಪೀಡಿತ ಮೊದಲ ಯುವತಿ ಹಾಗೂ ಮೊದಲ ಮಹಿಳಾ ಪ್ಯಾರಾ-ಈಜುಗಾರ್ತಿ ಜಿಯಾ ರಾಯ್.ಮುಕ್ತ ನೀರು ಈಜು ಕ್ಷೇತ್ರದಲ್ಲಿ ‘ಟ್ರಿಪಲ್ ಕ್ರೌನ್’ ಎಂದರೆ ವಿಶ್ವದ ಪ್ರಮುಖ ಮೂರು ಜಲಸಂಧಿಗಳನ್ನು ಈಜಿ ದಾಟುವುದಾಗಿದೆ. ಜಿಯಾ ರಾಯ್ ತಮ್ಮ ಈ ಐತಿಹಾಸಿಕ ಸಾಧನೆಯನ್ನು ಸಮಾಜದಲ್ಲಿ ಆಟಿಸಂ ಜಾಗೃತಿ ಮೂಡಿಸಲು (Autism Awareness) ವಿನಿಯೋಗಿಸಿದ್ದಾರೆ.

 

Leave a Reply

Your email address will not be published. Required fields are marked *