ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ರಾಜ್ಯವು ಶೈಕ್ಷಣಿಕ ಇತಿಹಾಸದಲ್ಲೇ ದಾಖಲೆ ಮಟ್ಟದ ಶೇ. 94.1ರಷ್ಟು ಉತ್ತೀರ್ಣತಾ ಪ್ರಮಾಣವನ್ನು ಸಾಧಿಸಿದೆ.
ಪರೀಕ್ಷೆ ಬರೆದಿದ್ದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬರೋಬ್ಬರಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಜಂಟಿಯಾಗಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ಶೇ. 98.40 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ (ಶೇ. 85.06) ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದು, ಶೇ. 96.53ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ (ಗಂಡುಮಕ್ಕಳು ಶೇ. 91.7).
625ಕ್ಕೆ 625 ಅಂಕ ಪಡೆದ ಆ ‘ಸಪ್ತ’ ಸಾಧಕರು:
ಧನುಷ್ – ಬೆಂಗಳೂರು ಉತ್ತರ

ಭರತ್ – ದಾವಣಗೆರೆ (ಕಣವೆಬಿಳಚಿ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಕಾನ್ವೆಂಟ್)
ಬೃಂದಾ – ಚಿಕ್ಕಮಗಳೂರು
ಪ್ರೀತಂ ಜಿ. ಪೂಜಾರಿ – ಉಡುಪಿ (ಕುಂದಾಪುರ ತಾಲೂಕಿನ ಶಂಕರ್ ನಾರಾಯಣ ಪ್ರೌಢಶಾಲೆ)
ಪ್ರಾರ್ಥನಾ ಬಿರಾದಾರ – ಬೆಳಗಾವಿ (ಅಥಣಿ ತಾಲೂಕಿನ ಕಟಗೇರಿ ಸರ್ಕಾರಿ ಶಾಲೆ)
ಸೌಜನ್ಯಾ – ವಿಜಯಪುರ (ಮುದ್ದೇಬಿಹಾಳದ ಆಕ್ಸ್‌ಫರ್ಡ್ ಪಾಟೀಲ್ಸ್ ಶಾಲೆ)
ಸುಖದೇವ್ – ರಾಯಚೂರು
ಆಂಬುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಪರೀಕ್ಷೆ ಬರೆದಿದ್ದ ಕೆಜಿಎಫ್‌ನ ಕುಸುಮಾ, 625ಕ್ಕೆ 374 ಅಂಕಗಳನ್ನು ಪಡೆಯುವ ಮೂಲಕ ‘ಪ್ರಥಮ ದರ್ಜೆ’ಯಲ್ಲಿ ತೇರ್ಗಡೆಯಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

