Breaking News

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ: ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೇಶವ ಭಂಡಾರಿ ಕೈಪ ಆಯ್ಕೆ

ಪುತ್ತೂರು: ಕೋಡಿಂಬಾಡಿ ಗ್ರಾಮದ ಪ್ರಸಿದ್ಧ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಭಂಡಾರಿ ಕೈಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳ್ಳಿಪ್ಪಾಡಿ ಕೈಪ ದಿವಂಗತ ಮಾಂಕು ಭಂಡಾರಿ ಹಾಗೂ ಪೂವಕ್ಕ ದಂಪತಿಯ ಪುತ್ರರಾಗಿರುವ ಕೇಶವ ಭಂಡಾರಿ ಅವರು ಕೃಷಿ ಕ್ಷೇತ್ರದ ಜತೆಗೆ ನಾಡಿನ ಸಾಂಸ್ಕೃತಿಕ ಹೆಮ್ಮೆಯಾದ ಕಂಬಳ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಂಬಳದ ಕೋಣಗಳ ಯಜಮಾನರಾಗಿರುವ ಇವರ ಕೋಣಗಳು ಹಲವು ಪ್ರತಿಷ್ಠಿತ ಕಂಬಳ ಕೂಟಗಳಲ್ಲಿ ಬಹುಮಾನಗಳನ್ನು ಪಡೆದು ಸಮೆದಿವೆ.

ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರು, ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಸಮಿತಿಯ ಸಕ್ರಿಯ ಸದಸ್ಯರು. ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷರು, ಭಂಡಾರಿ ತರವಾಡು ಮನೆ ಮಂಚಿ ಇದರ ಅಧ್ಯಕ್ಷರು.

ಇದನ್ನೂ ಓದಿ: ಕಾವೇರಿ ನೀರು ವಿವಾದ: ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ; ರಾಜ್ಯದ ಹಿತಕ್ಕೆ ರಾಜಿ ಇಲ್ಲ ಎಂದ ಡಿಕೆ ಶಿವಕುಮಾರ್

ಪುತ್ತೂರು ರಬ್ಬರ್ ಬೆಳೆಗಾರರ ಮಾರಾಟ ಕೇಂದ್ರದ ನಿರ್ದೇಶಕರು, ಕೋಡಿಂಬಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಬೆಳ್ಳಿಪ್ಪಾಡಿ ಕಜೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಸದಸ್ಯರು. ಕೃಷಿ, ಹೈನುಗಾರಿಕೆ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಇವರು, ಪತ್ನಿ ಉಮಾವತಿ ಹಾಗೂ ಪುತ್ರರಾದ ಜೀವರಾಜ್ ಮತ್ತು ಭರತ್ ಅವರೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದು, ಯುವ ಜನತೆಗೆ ಮಾರ್ಗದರ್ಶಕರಾಗಿದ್ದಾರೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *