ಬೆಂಗಳೂರು: ಕೆಜಿಎಫ್ 2 ಸಿನಿಮಾದ ಬೃಹತ್ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ (Toxic: A Fairy Tale For Grown Ups) ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರಪ್ರತಿಕ್ರಿಯೆ ಹಾಗೂ ಟೀಕೆಗಳನ್ನು ಎದುರಿಸುತ್ತಿದೆ.
ಸಿನಿಮಾದ ಕಥಾಹಂದರ ಹಾಗೂ ಚಿತ್ರಕಥೆಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟ ಯಶ್ ಬೆಂಬಲಕ್ಕೆ ನಿಂತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most…
— Kichcha Sudeepa (@KicchaSudeep) August 28, 2026
ಕೆಜಿಎಫ್ ನಂತರ ಯಶ್ ಅವರು ಅತ್ಯಂತ ಸುರಕ್ಷಿತವಾದ ಕಮರ್ಷಿಯಲ್ ಫಾರ್ಮುಲಾ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಆ ಹಾದಿ ತುಳಿಯದೆ ವಿಭಿನ್ನ ಹಾಗೂ ಪ್ರಯೋಗಾತ್ಮಕ ಹಾದಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಯಶ್ ‘ಟಾಕ್ಸಿಕ್’ ಧಮಾಕ: ಮೊದಲ ದಿನವೇ 140 ಕೋಟಿ ರೂ. ಜಾಗತಿಕ ಗಳಿಕೆ
ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್, “ನಾನು ಇದನ್ನು ಯಶ್ಗೆ ಹೇಳಲು ಬಯಸುತ್ತೇನೆ… @TheNameIsYash, ನಿಮ್ಮ ಹಿಂದಿನ ಬ್ಲಾಕ್ಬಸ್ಟರ್ ಸಿನಿಮಾದ ನಂತರ ಅದೇ ಹಳೆಯ, ಎಲ್ಲರೂ ನಿರೀಕ್ಷಿಸುವ ಕಮರ್ಷಿಯಲ್ ಫಾರ್ಮುಲಾ ಹಾದಿಯನ್ನು ತುಳಿಯದೆ, ತೀರ ವಿಭಿನ್ನವಾದದ್ದನ್ನು (Out of the box) ಮಾಡಲು ಪ್ರಯತ್ನಿಸಿದ್ದೀರಾ. ಇಂತಹ ಪ್ರಯೋಗ ಮಾಡಲು ಬೇರೆಯದೇ ಆದ ಮನಸ್ಥಿತಿ, ಬಲವಾದ ನಂಬಿಕೆ ಮತ್ತು ಮುಖ್ಯವಾಗಿ ಧೈರ್ಯ ಬೇಕಾಗುತ್ತದೆ.” ಎಂದು ಹೇಳಿದ್ದಾರೆ.

