ಅಂಗನವಾಡಿ ಕೊಠಡಿಯಲ್ಲೇ 4 ವರ್ಷದ ಮಗುವಿಗೆ ಕಚ್ಚಿದ ಹಾವು

ಕೊಕ್ಕಡ: ಅಂಗನವಾಡಿ ಕೇಂದ್ರದ ತರಗತಿ ಕೊಠಡಿಯೊಳಗೆ ಇತರ ಮಕ್ಕಳೊಂದಿಗೆ ಆಟಿಕೆ ಸಾಮಗ್ರಿಗಳನ್ನು ಇಟ್ಟುಕೊಂಡು ಆಟವಾಡುತ್ತಿದ್ದ 4 ವರ್ಷದ ಪುಟ್ಟ ಬಾಲಕಿಗೆ ಹಾವು ಕಚ್ಚಿರುವ ಘಟನೆ ಕೊಕ್ಕಡ ಬಳಿಯ ಸೌತಡ್ಕದಲ್ಲಿ ಜುಲೈ 14ರಂದು (ಮಂಗಳವಾರ) ನಡೆದಿದೆ. ಹಾವು ಕಚ್ಚಿದ ಬಾಲಕಿಯನ್ನು ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಫಾತಿಮತ್ ಸಹದಿಯಾ (4) ಎಂದು ಗುರುತಿಸಲಾಗಿದೆ.

ಬಾಲಕಿ ಫಾತಿಮತ್ ಸಹದಿಯಾ ಎಂದಿನಂತೆ ಮಂಗಳವಾರ ಸೌತಡ್ಕದ ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಳು. ತರಗತಿ ಕೊಠಡಿಯೊಳಗೆ ಇಟ್ಟಿದ್ದ ಆಟಿಕೆಗಳ ಜೊತೆ ಮಗು ಆಟವಾಡುತ್ತಿದ್ದಾಗ, ಆಟಿಕೆ ಸಾಮಗ್ರಿಗಳ ಮಧ್ಯೆ ಸದ್ದಿಲ್ಲದೆ ಅಡಗಿ ಕುಳಿತಿದ್ದ ಹಾವು ದಿಢೀರನೆ ಬಾಲಕಿಯ ಕೈಗೆ ಕಚ್ಚಿದೆ.

ಹಾವು ಕಚ್ಚಿದ ತಕ್ಷಣ ಮಗು ಜೋರಾಗಿ ಕಿರುಚುತ್ತಾ ಅಳಲು ಪ್ರಾರಂಭಿಸಿದೆ. ಮಗುವಿನ ಅಳು ಕೇಳಿ ತಕ್ಷಣವೇ ಓಡಿ ಬಂದ ಅಂಗನವಾಡಿ ಸಹಾಯಕಿ, ಮಗುವನ್ನು ಗಮನಿಸಿ ಪೋಷಕರಿಗೆ ತುರ್ತು ಮಾಹಿತಿ ರವಾನಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಇರಲಿಲ್ಲ ಎಂದು ತಿಳಿದುಬಂದಿದೆ. ಅವರು ಬಿ.ಎಲ್.ಓ ಚುನಾವಣಾ ಕರ್ತವ್ಯದ ನಿಮಿತ್ತ ಹೊರಹೋಗಿದ್ದರಿಂದ, ಕೇಂದ್ರದಲ್ಲಿ ಕೇವಲ ಸಹಾಯಕಿ ಮಾತ್ರ ಮಕ್ಕಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಇದೇ ವೇಳೆ ಈ ದುರದೃಷ್ಟಕರ ಘಟನೆ ಸಂಭವಿಸಿದೆ.

ಇದನ್ನೂ ಓದಿ: ದಿಡುಪೆ ಫಾಲ್ಸ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಪ್ರವಾಸಿ ಯುವತಿ ಮತ್ತು ಸ್ನೇಹಿತನಿಗೆ ಅಡ್ಡಗಟ್ಟಿ ಜೀವ ಬೆದರಿಕೆ 

ಹಾವು ಕಚ್ಚಿ ಅಸ್ವಸ್ಥಗೊಂಡ ಬಾಲಕಿಯನ್ನು ಪೋಷಕರು ಮತ್ತು ಸ್ಥಳೀಯರು ತಕ್ಷಣವೇ ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ತುರ್ತು ಸಲಹೆಯ ಮೇರೆಗೆ ಮಗುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ತೀವ್ರ ನಿಗಾ ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ತುತ ಬಾಲಕಿ ಫಾತಿಮತ್ ಸಹದಿಯಾಗೆ ವೆನ್ಲಾಕ್ ಆಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಮಗುವಿನ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಅಂಗನವಾಡಿ ಕೊಠಡಿಯ ಒಳಗೇ ಹಾವು ನುಗ್ಗಿ ಮಗುವಿಗೆ ಕಚ್ಚಿರುವ ಘಟನೆ ಸ್ಥಳೀಯ ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *