ಕುದ್ರೋಳಿ ಕೇತ್ರದಿಂದ ಅದ್ಧೂರಿ ಶೋಭಾಯಾತ್ರೆ; ನಿಯಮಗಳು ಹಾಗೂ ಟೈಮ್‌ಲೈನ್ ಬಿಡುಗಡೆ

ಮಂಗಳೂರು: ಕರಾವಳಿಯ ಕಣ್ಣುಕೋರೈಸುವ ‘ಮಂಗಳೂರು ದಸರಾ’ (ಕುದ್ರೋಳಿ ದಸರಾ) ಮಹೋತ್ಸವದ ವೈಭವದ ಶೋಭಾಯಾತ್ರೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ ಹಾಗೂ ಸಮಯ ನಿಗದಿಯಾಗಿದೆ. ಕೇಂದ್ರದ ಮಾಜಿ ಹಣಕಾಸು ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ, ಅಕ್ಟೋಬರ್ 21ರಂದು ನಡೆಯಲಿರುವ ಈ ಬೃಹತ್ ಜಲಕಂಠೇಶ್ವರ ಹಾಗೂ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಗಾಗಿ ಕ್ಷೇತ್ರ ಸಮಿತಿಯು ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳು ಹಾಗೂ ಪ್ರಮುಖ ಟೈಮ್‌ಲೈನ್ (ಆಗಮನದ ಸಮಯ) ಬಿಡುಗಡೆ ಮಾಡಿದೆ.

ಸಮಯ ಹಾಗೂ ಮೆರವಣಿಗೆಯ ನಿಯಮಗಳು:

  • ಸರಿಯಾಗಿ ಸಂಜೆ 4ಕ್ಕೆ ಚಾಲನೆ: ಶೋಭಾಯಾತ್ರೆಯು ನಿಗದಿತ ಸಮಯದಂತೆ ಸರಿಯಾಗಿ ಸಂಜೆ 4:00 ಗಂಟೆಗೆ ಕುದ್ರೋಳಿ ಮಂದಿರದ ಅಂಗಳದಿಂದ ಆರಂಭವಾಗಲಿದೆ.

  • ಶಿಸ್ತಿನ ಕ್ರಮಕ್ಕೆ ಸೂಚನೆ: ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲಾ ಸ್ತಬ್ಧಚಿತ್ರಗಳು (Tableaux) ಹಾಗೂ ವೇಷಭೂಷಣ ಕಲಾತಂಡಗಳು ತಮಗೆ ನೀಡಲಾಗಿರುವ ಅನುಕ್ರಮ ಸಂಖ್ಯೆಯ ಪ್ರಕಾರ ನಿಗದಿತ ಸ್ಥಳಗಳಲ್ಲಿ ಮುಂಚಿತವಾಗಿಯೇ ಸಿದ್ಧವಾಗಿರಬೇಕು. ಮೆರವಣಿಗೆಯುದ್ದಕ್ಕೂ ಶಿಸ್ತು ಕಾಪಾಡಲು ಪ್ರತಿಯೊಂದು ಸ್ತಬ್ಧಚಿತ್ರಗಳ ನಡುವೆ ಗರಿಷ್ಠ 20 ಮೀಟರ್ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಸೂಚಿಸಲಾಗಿದೆ.

  • ಸಹಕಾರಕ್ಕೆ ಮನವಿ: ಮೆರವಣಿಗೆಯ ಹಾದಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು, ಕ್ಷೇತ್ರ ಸಿಬ್ಬಂದಿ ಹಾಗೂ ಮೆರವಣಿಗೆ ಮೇಲ್ವಿಚಾರಕರ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. “ನಮ್ಮ ದಸರಾ – ನಮ್ಮ ಹೆಮ್ಮೆ” ಎಂಬ ಭಾವನೆಯೊಂದಿಗೆ ಸಂಭ್ರಮದ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹಾಗೂ ಭಾಗವಹಿಸುವವರು ಸಹಕರಿಸಬೇಕಾಗಿ ಕ್ಷೇತ್ರ ಸಮಿತಿ ವಿನಂತಿಸಿದೆ.

ಇದನ್ನೂ ಓದಿ: ಮಂಗಳೂರು ಶಾರದೆ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಶಾರದಾ ಮಾತೆಯ ಶೋಭಾಯಾತ್ರೆಯ ಮಾರ್ಗ ಹಾಗೂ ಟೈಮ್‌ಲೈನ್:

ಕ್ಷೇತ್ರ ಸಮಿತಿಯು ಶಾರದಾ ಮಾತೆಯ ಮೆರವಣಿಗೆಯ ಪ್ರಮುಖ ಸ್ಥಳಗಳನ್ನು ತಲುಪುವ ಸಮಯದ ಯೋಜನೆಯನ್ನು ಪ್ರಕಟಿಸಿದೆ:

  • ರಾತ್ರಿ 9:00 ಗಂಟೆ: ನಾರಾಯಣ ಗುರು ವೃತ್ತ (Ladyhill / Narayana Guru Circle)

  • ರಾತ್ರಿ 10:00 ಗಂಟೆ: ಸೈಬೀನ್ ಕಾಂಪ್ಲೆಕ್ಸ್ (Saibeen Complex)

  • ರಾತ್ರಿ 11:00 ಗಂಟೆ: ಪಿ.ವಿ.ಎಸ್ ಜಂಕ್ಷನ್ (PVS Junction)

  • ಮಧ್ಯರಾತ್ರಿ 12:00 ಗಂಟೆ: ಹಂಪನಕಟ್ಟೆ (Hampankatta)

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ