ಭೀಕರ ವಿಮಾನ ಅಪಘಾತ: ಹೆದ್ದಾರಿಯಲ್ಲಿ ಬಿದ್ದ ಹೆಣಗಳ ರಾಶಿ, ರಸ್ತೆಯುದ್ದಕ್ಕೂ ಹರಡಿಕೊಂಡ ನೋಟುಗಳು!

ಲಾ ಪಾಜ್ (ಬೊಲಿವಿಯಾ): ಹೊಸದಾಗಿ ಮುದ್ರಿತವಾದ ನೋಟುಗಳನ್ನು ಸಾಗಿಸುತ್ತಿದ್ದ ಬೊಲಿವಿಯನ್ ವಾಯುಪಡೆಗೆ ಸೇರಿದ ಸೇನಾ ಸರಕು ವಿಮಾನವೊಂದು (Cargo Plane) ಜನನಿಬಿಡ ಹೆದ್ದಾರಿಯಲ್ಲಿ ಪತನಗೊಂಡಿದೆ. ಈ ಭೀಕರ ದುರಂತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಬೊಲಿವಿಯಾದ ಎಲ್ ಆಲ್ಟೋ (El Alto) ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

ಇದು ವಾಯುಪಡೆಗೆ ಸೇರಿದ ಹರ್ಕ್ಯುಲಸ್ ಸಿ-130 (Hercules C-130) ವಿಮಾನವಾಗಿದ್ದು, ಬೊಲಿವಿಯಾದ ಕೇಂದ್ರ ಬ್ಯಾಂಕ್‌ಗೆ ಸೇರಿದ ಲಕ್ಷಾಂತರ ಮೌಲ್ಯದ ನೋಟುಗಳನ್ನು ಹೊತ್ತು ಸಾಗುತ್ತಿತ್ತು.ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನವು ನೇರವಾಗಿ ಹೆದ್ದಾರಿಯ ಮೇಲೆ ಅಪ್ಪಳಿಸಿದೆ. ಈ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ವಾಹನಗಳ ಮೇಲೆ ವಿಮಾನ ಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ದೇಶದ ಶಾಸಕ

ವಿಮಾನ ಪತನಗೊಂಡ ರಭಸಕ್ಕೆ ಅದರಲ್ಲಿದ್ದ ನೋಟುಗಳ ಕಂತೆಗಳು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ಭೀಕರತೆಯನ್ನು ಮರೆತು ಅಲ್ಲಿದ್ದ ಜನರು ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು ಮತ್ತು ಜನರನ್ನು ಚದುರಿಸಲು ಅಶ್ರುವಾಯು ಬಳಸಲಾಯಿತು ಎಂದು ವರದಿ ತಿಳಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು