ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 57 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಮಹತ್ವದ ಮಾಹಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆ ಹಾಗೂ ಪ್ರಮುಖ ಹೆದ್ದಾರಿಗಳ ಮೇಲ್ದರ್ಜೆಗೇರಿಸುವಿಕೆಗೆ ಕೇಂದ್ರ ಸರ್ಕಾರವು ಬೃಹತ್ ಕೊಡುಗೆ ನೀಡಿದೆ. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಯೋಜನೆಯಡಿ ಒಟ್ಟು 57 ಕೋಟಿ ರೂಪಾಯಿ ವೆಚ್ಚದ 14 ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಬೃಹತ್ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 82.94 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಆಧುನಿಕರಣಗೊಳಿಸಲಾಗುವುದು. ಮಂಗಳೂರು, ಉಳ್ಳಾಲ, ಮೂಡುಬಿದಿರೆ, ಪುತ್ತೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯ ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳು ಈ ಅನುದಾನದ ಮೂಲಕ ಹೊಸ ರೂಪ ಪಡೆಯಲಿವೆ.

ಇದನ್ನೂ ಓದಿ:ಪುತ್ತೂರು: ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ವ್ಯವಸ್ಥೆ ಮಂಜೂರಾಗುವ ಸಾಧ್ಯತೆ

ತಾಲೂಕುವಾರು ಪ್ರಮುಖ ಕಾಮಗಾರಿಗಳ ವಿವರ

ಕಾಮಗಾರಿ ಮತ್ತು ರಸ್ತೆ ವಿವರ,ಒಟ್ಟು ಉದ್ದ (ಕಿ.ಮೀ),ಮಂಜೂರಾದ ಅನುದಾನ

ಮೂಡುಬಿದಿರೆ-ಬೆಳ್ತಂಗಡಿ-ಬಂಟ್ವಾಳ ಕ್ರಾಸ್: ಹೊಸಂಗಡಿ ಪುಚ್ಚಮೊಗರು ಸೇತುವೆಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ,8.90 ಕಿ.ಮೀ,₹6.00 ಕೋಟಿ

ಬಜಪೆ-ಕೈಕಂಬ ಮತ್ತು ಪೊಳಲಿ ದ್ವಾರ-ಅಡ್ಡೂರು: ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ ಅಭಿವೃದ್ಧಿ,10.50 ಕಿ.ಮೀ,₹6.00 ಕೋಟಿ

ಪುಂಜಾಲಕಟ್ಟೆ-ಮೂರ್ಜೆ-ಕುದ್ಕೋಲಿ: ಪಾಂಗಲ್ಪಾಡಿಯಿಂದ ಕುದ್ಕೋಲಿವರೆಗಿನ ರಾಜ್ಯ ಹೆದ್ದಾರಿ,10.07 ಕಿ.ಮೀ,₹6.00 ಕೋಟಿ

ಸುಬ್ರಹ್ಮಣ್ಯ-ಮಂಜೇಶ್ವರ: ರಾಜ್ಯ ಹೆದ್ದಾರಿಯ ಆಯ್ದ ಭಾಗಗಳ ಅಭಿವೃದ್ಧಿ,10.10 ಕಿ.ಮೀ,₹6.00 ಕೋಟಿ

ವೇಣೂರು-ಅಂಡಿಂಜೆ-ನಾರಾವಿ: ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ,10.00 ಕಿ.ಮೀ,₹6.00 ಕೋಟಿ

ಮೂಡುಬಿದಿರೆ ಹೆದ್ದಾರಿ ನವೀಕರಣ: ಎಕ್ಸಲೆಂಟ್ ಕಾಲೇಜಿನಿಂದ ಪೊಲೀಸ್ ಸ್ಟೇಷನ್ ರಸ್ತೆವರೆಗೆ,5.00 ಕಿ.ಮೀ,₹5.00 ಕೋಟಿ

ಸೋಮಂತಡ್ಕ-ಹೆಡ್ಯ: NH-275 ರಿಂದ SH-276 ಸಂಪರ್ಕಿಸುವ ಹೆದ್ದಾರಿ ಅಭಿವೃದ್ಧಿ,5.50 ಕಿ.ಮೀ,₹5.00 ಕೋಟಿ

ಬಂಟ್ವಾಳ ಅನಂತಾಡಿ-ಕೊಡಪದವು: ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ,3.00 ಕಿ.ಮೀ,₹5.00 ಕೋಟಿ

“ಉಳ್ಳಾಲ ವ್ಯಾಪ್ತಿ: ಚಂಬುಗುಡ್ಡೆಯಿಂದ ಮಚಲಿ ಹೋಟೆಲ್, ಇನ್ಫೋಸಿಸ್ ರಸ್ತೆ ಹಾಗೂ ಸಜಿಪನಾಡು-ಬೋಳ್ಯಾರ್ ರಸ್ತೆ”,6.54 ಕಿ.ಮೀ (ಒಟ್ಟು),₹6.00 ಕೋಟಿ (ಒಟ್ಟು)

ಉಪ್ಪಿನಂಗಡಿ-ಕೊಯ್ಲಾ, ಹಂತ್ಯಾರು-ಬೆಟ್ಟಂಪಾಡಿ ಮತ್ತು ಕೆಪುಲು-ಪಾದಿಲ್ ರಸ್ತೆ”,8.15 ಕಿ.ಮೀ (ಒಟ್ಟು),₹6.00 ಕೋಟಿ (ಒಟ್ಟು)

“ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ಬೃಹತ್ ಯೋಜನೆಗೆ ಅನುದಾನ ಮಂಜೂರು ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಈ ರಸ್ತೆಗಳ ಸುಧಾರಣೆಯಿಂದ ಜಿಲ್ಲೆಯ ಸಂಚಾರ ವ್ಯವಸ್ಥೆ ಸುಗಮಗೊಳ್ಳುವುದಲ್ಲದೆ ಆರ್ಥಿಕ, ಶೈಕ್ಷಣಿಕ ಮತ್ತು ಕರಾವಳಿಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಭಾರಿ ವೇಗ ಸಿಗಲಿದೆ” ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ವಿವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು