ಮಂಗಳೂರು: “ಕಾಂಗ್ರೆಸ್ ಆಫೀಸ್‌ನಲ್ಲಿ ವಂದೇ ಮಾತರಂ ಗೀತೆ ಹಾಡುವಾಗ ಸೋನಿಯಾ ಗಾಂಧಿ ಮೈಗೆ ದೆವ್ವ ಬಂದಂತೆ ಆಡಿದ್ದಾರೆ” ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಅತ್ಯಂತ ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂದೇ ಮಾತರಂ ವಿವಾದ ಹಾಗೂ ಎಸ್‌ಐಆರ್ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದರು.
ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಂದೇ ಮಾತರಂ ಗೀತೆ ಗೊಂದಲದ ಕುರಿತು ಮಾತನಾಡಿದ ಸಂಸದರು. “ಕಾಂಗ್ರೆಸ್ ಕಚೇರಿಯಲ್ಲಿ ಪೂರ್ತಿ ವಂದೇ ಮಾತರಂ ಗೀತೆ ಹಾಡುವುದು ಸೋನಿಯಾ ಗಾಂಧಿಯವರಿಗೆ ಮೊದಲೇ ಗೊತ್ತಿತ್ತು. ಅದೊಂದು ಬೇಕಂತಲೇ ಯೋಜಿಸಿದ ‘ಹೈಡ್ರಾಮಾ’ ಆಗಿತ್ತು. ಒಂದು ನಿರ್ದಿಷ್ಟ ವರ್ಗದ ಜನರನ್ನು ಒಲೈಸಲು ಮತ್ತು ಅವರ ಎದುರು ತಾವೇನೋ ತಡೆದಂತೆ ತೋರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಈ ರೀತಿ ನಾಟಕವಾಡಿದ್ದಾರೆ,” ಎಂದು ಸಂಸದ ಚೌಟ ಆರೋಪಿಸಿದರು.
ಇದನ್ನೂ ಓದಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
“ಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಎಫ್‌ಐಆರ್ ದಾಖಲಿಸಿ!”: ಎಸ್‌ಐಆರ್ ಕದನ
ಎಸ್‌ಐಆರ್ (SIR) ವಿಚಾರದಲ್ಲಿ ಚುನಾವಣಾ ಕಚೇರಿ ಎದುರು ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ನಡೆಗೆ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿರುವ ಉಪಮುಖ್ಯಮಂತ್ರಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತಕ್ಷಣವೇ FIR ದಾಖಲಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಧರಣಿ ಮಾಡುವುದು ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು. ಫಾರ್ಮ್ ನಂ. 7ರ ಮುಖಾಂತರ ಸಾಮೂಹಿಕವಾಗಿ ಮತದಾರರ ಹೆಸರು ಡಿಲೀಟ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಧೈರ್ಯವಿದ್ದರೆ ಎಲೆಕ್ಷನ್ ಕಮಿಷನ್ ಎದುರು ಮತ ಕಳೆದುಕೊಂಡ ಒಬ್ಬರನ್ನಾದರೂ ತಂದು ಕೂರಿಸಲಿ ನೋಡೋಣ, ಎಂದು ನೇರ ಸವಾಲೆಸೆದರು. ಬಿಎಲ್‌ಒ-2ಗಳು (BLO 2) ನೀಡಿದ ಮಾಹಿತಿಯನ್ನು ಅಧಿಕಾರಿಗಳು ಮನೆಮನೆಗೆ ತೆರಳಿ ಸ್ವತಃ ಪರಿಶೀಲಿಸುತ್ತಾರೆ. ಬಿಎಲ್‌ಒಗಳಿಗೆ ಮತದಾರರ ಹೆಸರು ಡಿಲೀಟ್ ಮಾಡುವ ಅಧಿಕಾರವೇ ಇಲ್ಲ. ಹೀಗಿರುವಾಗ ರಾಹುಲ್ ಗಾಂಧಿ ದೇಶದ ಜನರಿಗೆ ಸತತವಾಗಿ ಸುಳ್ಳು ಹೇಳುತ್ತಾ ದೇಶಕ್ಕೆ ದ್ರೋಹ ಎಸಗುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

