ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಸುಳ್ಯ :ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕಿ ಹಾಗೂ ಬಿಜೆಪಿ ನಾಯಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಅದೃಷ್ಟವಶಾತ್ ಶಾಸಕಿ ಹಾಗೂ ಕಾರು ಚಾಲಕ ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಡನ್ ಬ್ರೇಕ್‌ನಿಂದ ಎದುರಾಯ್ತು ಕಂಟಕ:ಮಂಗಳವಾರ ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂಚರಿಸುತ್ತಿದ್ದ ವೇಳೆ ಈ ರಸ್ತೆ ಅಪಘಾತ ಸಂಭವಿಸಿದೆ.

ಸುಳ್ಯ ತಾಲೂಕಿನ ಕರಿಕ್ಕಳ – ನಿಂತಿಕಲ್ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.ಅಪಘಾತಕ್ಕೆ ಕಾರಣ: ಶಾಸಕರ ಕಾರಿನ ಮುಂದೆ ತೆರಳುತ್ತಿದ್ದ ವಾಹನದ ಚಾಲಕ ಏಕಾಏಕಿ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಸಿಗದೆ ಶಾಸಕರ ಕಾರು ಮುಂಭಾಗದಲ್ಲಿದ್ದ ವಾಹನಕ್ಕೆ ಹಿಂದಿನಿಂದ ಸಮ್ಮುಖ ಡಿಕ್ಕಿಯಾಗಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ?: ಮೊಬೈಲ್ ಬೆಲೆ ಇಳಿಕೆಗೆ ಕೇಂದ್ರಕ್ಕೆ ಐಸಿಇಎ ಮಹತ್ವದ ಮನವಿ

ಅಪಘಾತದ ರಭಸಕ್ಕೆ ಶಾಸಕರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಮುಂಭಾಗ ತೀವ್ರ ಜಖಂಗೊಂಡಿದೆ.ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಆಪ್ತರು ಓಡಿಬಂದಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಅವರ ಚಾಲಕ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಾಸಕರ ಕ್ಷೇಮ ವಿಚಾರಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *