‘ರೆಬೆಲ್ ಸ್ಟಾರ್’ ಅಂಬರೀಶ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಬಹುಮಾನ!: ಮರಣೋತ್ತರ ಗೌರವಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾಯ್ತು ಪ್ರಸ್ತಾವನೆ

ಬೆಂಗಳೂರು: ಕನ್ನಡ ಚಿತ್ರರಂಗದ ‘ಸುವರ್ಣಯುಗ’ದ ಅಪ್ರತಿಮ ನಾಯಕ, ‘ಮಂಡ್ಯದ ಗಂಡು’ ಎಂದೇ ಕೋಟ್ಯಂತರ ಕನ್ನಡಿಗರ ಹೃದಯ ಸಿಂಹಾಸನದಲ್ಲಿದ್ದ ಅಭಿನಯ ಚಕ್ರವರ್ತಿ ಡಾ. ಎಂ.ಎಚ್. ಅಂಬರೀಶ್ (Dr. Ambareesh) ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ‘ಕರ್ನಾಟಕ ರತ್ನ’ (Karnataka Ratna – Posthumously) ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಂಬರೀಶ್ ಅವರ ಲಕ್ಷಾಂತರ ಅಭಿಮಾನಿಗಳ ಆಶಯ ಹಾಗೂ ನಾಡಿನ ಜನಾಭಿಪ್ರಾಯವನ್ನು ಪುರಸ್ಕರಿಸಿ, ಮುಂಬರುವ ರಾಜ್ಯದ ಪ್ರಮುಖ ಹಬ್ಬದ (ಕನ್ನಡ ರಾಜ್ಯೋತ್ಸವ/ದಸರಾ) ಸಂದರ್ಭದಲ್ಲಿ ಈ ಮರಣೋತ್ತರ ಪುರಸ್ಕಾರ ನೀಡಿ ಗೌರವಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಈ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಎಕ್ಸ್​ ಪೋಸ್ಟ್​​ ಹಂಚಿಕೊಂಡಿದ್ದಾರೆ.

ಚಿತ್ರರಂಗದ ರೆಬೆಲ್ ಸ್ಟಾರ್ ಆಗಿ ಬೆಳ್ಳಿತೆರೆಯ ಮೇಲೆ ಮಿಂಚಿದ್ದ ಡಾ. ಅಂಬರೀಶ್, ಬೆಳ್ಳಿತೆರೆಯಿಂದ ಆಚೆಗೂ ಬಡವರ, ರೈತರ ಹಾಗೂ ಜನಸಾಮಾನ್ಯರ ಕಷ್ಟ-ಸುಖಗಳಿಗೆ ತಕ್ಷಣವೇ ಸ್ಪಂದಿಸುವ ‘ಕರ್ಣ’ನಂತೆ ಕನ್ನಡಿಗರ ಮನಸ್ಸಿನಲ್ಲಿ ಎಂದೆಂದಿಗೂ ಅಮರರಾಗಿದ್ದಾರೆ. ಸಹಸ್ರಮುಖಿ ಕೊಡುಗೆ: ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ ಹಾಗೂ ರಾಜಕೀಯ ರಂಗದಲ್ಲಿ ಅಂಬರೀಶ್ ಅವರು ನೀಡಿದ ಕೊಡುಗೆ ಬೆಲೆಕಟ್ಟಲಾರದ್ದು.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿ ಸುದ್ದಿ?: ಮೊಬೈಲ್ ಬೆಲೆ ಇಳಿಕೆಗೆ ಕೇಂದ್ರಕ್ಕೆ ಐಸಿಇಎ ಮಹತ್ವದ ಮನವಿ

ಇಲ್ಲಿದೆ ನೋಡಿ ಎಕ್ಸ್​​​​ ಪೋಸ್ಟ್ವ:

ಅಂಬರೀಶ್ ಅವರ ಅಪಾರ ಜನಪ್ರಿಯತೆ ಮತ್ತು ಕನ್ನಡಿಗರ ಮೇಲಿದ್ದ ಅವರ ಪ್ರೀತಿಯನ್ನು ಸ್ಮರಿಸಿ, ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯವಾಗಿದೆ. ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸುವ ಈ ಪ್ರಸ್ತಾವನೆಯು ಅಂಬರೀಶ್ ಅಭಿಮಾನಿಗಳಲ್ಲಿ ಹಾಗೂ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಆಶಾವಾದ ಮತ್ತು ಸಂತಸದ ಅಲೆಯನ್ನು ಎಬ್ಬಿಸಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *