ಬೀಜಿಂಗ್: ವಿಮಾನದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಯ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಅವರ ಘನತೆಗೆ ಧಕ್ಕೆ ತಂದ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಆಹಾರ ಪದಾರ್ಥಗಳ ಟ್ರಾಲಿ ಆಕಸ್ಮಿಕವಾಗಿ ಕೈಗೆ ತಾಗಿದ್ದಕ್ಕೆ ಏರ್‌ಲೈನ್ಸ್ ಮಹಿಳಾ ಸಿಬ್ಬಂದಿಯನ್ನು (Flight Attendant) ಸತತವಾಗಿ ಮಂಡಿಯೂರಿ ಕ್ಷಮೆ ಕೇಳುವಂತೆ ಮಾಡಿದ ಪ್ರಯಾಣಿಕನ ವಿರುದ್ಧ ಚೀನಾ ಈಸ್ಟರ್ನ್ ಏರ್‌ಲೈನ್ಸ್ (China Eastern Airlines) ಗಂಭೀರ ಕ್ರಮ ಕೈಗೊಂಡಿದೆ.
ಆರೋಪಿ ಪ್ರಯಾಣಿಕನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಕಂಪನಿಯ ವಿಮಾನಗಳಲ್ಲಿ ಪ್ರಯಾಣಿಸದಂತೆ ಆತನ ಮೇಲೆ ಶಾಶ್ವತ ನಿಷೇಧ (Ban) ಹೇರಲಾಗಿದೆ.
ವರದಿಗಳ ಪ್ರಕಾರ, ಹೆಫೈ (Hefei) ನಗರದಿಂದ ಡಾಲಿಯನ್ (Dalian) ನಗರಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಪಾನೀಯಗಳನ್ನು ವಿತರಿಸುವಾಗ ಸಿಬ್ಬಂದಿಯ ಆಹಾರದ ಟ್ರಾಲಿ (Meal Trolley) ನಿದ್ರಿಸುತ್ತಿದ್ದ ಪ್ರಯಾಣಿಕನ ಮೊಣಕೈಗೆ ಸ್ಪರ್ಶಿಸಿದೆ. ಘಟನೆ ನಡೆದ ತಕ್ಷಣವೇ ಸಿಬ್ಬಂದಿ ಪ್ರಯಾಣಿಕನಲ್ಲಿ ಹಲವು ಬಾರಿ ಕ್ಷಮೆಯಾಚಿಸಿದ್ದರು. ಆದರೆ, ಪ್ರಯಾಣಿಕ ಆ ಕ್ಷಮೆಯನ್ನು ಸ್ವೀಕರಿಸಲು ನಿರಾಕರಿಸಿ ವಿಮಾನದಲ್ಲೇ ಆಕ್ರೋಶ ಹೊರಹಾಕಿದ್ದಾನೆ.
ಇಲ್ಲಿದೆ ನೋಡಿ ವಿಡಿಯೋ:
Passenger Permanently Banned by China Eastern After Flight Attendant Confrontation
A passenger who demanded an apology—and allegedly insisted a flight attendant let him “kick her back”—after a beverage cart accidentally bumped his arm has now been permanently banned from flying with China Eastern Airlines.
The incident occurred on September 28 aboard China Eastern flight MU6741 from Hefei to Dalian.
According to reports, a beverage service cart accidentally struck the elbow of a male passenger who was sleeping. The female flight attendant immediately apologized, but the passenger reportedly became enraged, loudly threatening her and demanding that she allow him to kick her in return.
Video shared afterward appeared to show the flight attendant kneeling in the aisle in front of the passenger. The confrontation ended only after other crew members intervened.
The passenger reportedly suffered no visible injuries and declined medical assistance after landing.
China Eastern said it collected evidence and determined that the passenger’s conduct disrupted aviation safety and order and violated the dignity of the flight attendant.
The airline reported the matter to authorities, permanently refused to carry the passenger on its flights, and provided psychological and legal support to the crew member.
#Aviation
#FlightAttendant #Airline #AviationSafety— FL360aero (@fl360aero) October 5, 2026
ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್‌ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ
ಪ್ರಯಾಣಿಕನ ತೀವ್ರ ಆಕ್ರೋಶ ಹಾಗೂ ಕಿರುಕುಳಕ್ಕೆ ಹೆದರಿದ ಸಿಬ್ಬಂದಿ, ನಿರಂತರವಾಗಿ ಮಂಡಿಯೂರಿ ಆತನ ಬಳಿ ಕ್ಷಮೆ ಕೋರಿದ್ದಾರೆ. ಈ ಸಂಪೂರ್ಣ ದೃಶ್ಯವನ್ನು ಇತರೆ ಪ್ರಯಾಣಿಕರು ವಿಡಿಯೋ ಮಾಡಿದ್ದು, ಸೆಪ್ಟೆಂಬರ್ 28 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಪ್ರಯಾಣಿಕನ ಈ ವಿಕೃತ ನಡವಳಿಕೆಯು ನಾಗರಿಕ ವಿಮಾನಯಾನದ ಶಿಸ್ತು-ನಿಯಮಗಳ ಉಲ್ಲಂಘನೆಯಾಗಿದ್ದು, ಸಿಬ್ಬಂದಿಯ ಕನಿಷ್ಠ ಮಾನವೀಯ ಘನತೆ ಹಾಗೂ ಆತ್ಮಾಭಿಮಾನಕ್ಕೆ ತೀವ್ರ ಧಕ್ಕೆ ತಂದಿದೆ. “ನಮ್ಮ ಉದ್ಯೋಗಿಗಳ ಗೌರವ ಹಾಗೂ ಸುರಕ್ಷತೆ ನಮಗೆ ಅತ್ಯಂತ ಪ್ರಮುಖ. ಇಂತಹ ಅಸಭ್ಯ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿರುವ ಚೀನಾ ಈಸ್ಟರ್ನ್ ಏರ್‌ಲೈನ್ಸ್, ಮಹಿಳಾ ಸಿಬ್ಬಂದಿಗೆ ಪೂರ್ಣ ಬೆಂಬಲ ನೀಡಿದ್ದು, ಅವರು ಈಗಾಗಲೇ ಕರ್ತವ್ಯಕ್ಕೆ ಮರಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

