ಅಮರಾವತಿ: ಭಾರತೀಯ ರಕ್ಷಣಾ ಪಡೆಗಳ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ಬೃಹತ್ ಗೂಢಚಾರಿಕೆ ಮತ್ತು ಹನಿಟ್ರ್ಯಾಪ್ ಜಾಲವನ್ನು ಆಂಧ್ರಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಯಶಸ್ವಿಯಾಗಿ ಭೇದಿಸಿದೆ. ‘ಆಪರೇಷನ್ ಫೈರ್ವಾಲ್-2026’ ಎಂಬ ಹೆಸರಿನಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಏಜೆಂಟ್ಗಳೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದ್ದು, 13 ನೌಕಾಪಡೆ ಸಿಬ್ಬಂದಿ ಸೇರಿದಂತೆ ಒಟ್ಟು 18 ಶಂಕಿತರ ವಿರುದ್ಧ ತನಿಖೆ ಚುರುಕುಗೊಂಡಿದೆ.
ಭಾರತೀಯ ನೌಕಾಪಡೆಯ ಯುದ್ಧನೌಕೆಗಳು, ಜಲಸಂಧಿ, ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧತಂತ್ರದ ತಾಣಗಳ ರಹಸ್ಯ ಮಾಹಿತಿಯನ್ನು ಕದಿಯಲು ಪಾಕಿಸ್ತಾನಿ ಗೂಢಚಾರ ಸಂಸ್ಥೆಗಳು (PIOs) ಹೆಣೆದಿದ್ದ ಕರಾಳ ತಂತ್ರದ ಪೂರ್ಣ ವಿವರ ಇಲ್ಲಿದೆ:
ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಸುಂದರಿಯರ ಪ್ರೊಫೈಲ್: ಪಾಕ್ ‘ಹನಿಟ್ರ್ಯಾಪ್’ ತಂತ್ರ!
ಆಂಧ್ರ ಸಿಐ ಸೆಲ್ ಅಧಿಕಾರಿಗಳು ಬಹಿರಂಗಪಡಿಸಿರುವಂತೆ, ಪಾಕಿಸ್ತಾನಿ ಮಹಿಳಾ ಇಂಟೆಲಿಜೆನ್ಸ್ ಆಪರೇಟಿವ್ಗಳು (PIOs) ನಕಲಿ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳನ್ನು ಬಳಸಿ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.
ಆರಂಭದಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸೈನಿಕರನ್ನು ಸಂಪರ್ಕಿಸಿ, ಆಪ್ತರಾದ ನಂತರ ವಾಟ್ಸಾಪ್ (WhatsApp) ಮೂಲಕ ವಾಯ್ಸ್ ಹಾಗೂ ವಿಡಿಯೋ ಕರೆಗಳನ್ನು ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದರು.
ಜೋಷಿತಾ ಪಲ್ ಎಂಬ ನಕಲಿ ಐಡಿಯಲ್ಲಿದ್ದ ಪಾಕ್ ಏಜೆಂಟ್, ತಾನು ಮುಂಬೈನ ಹಡಗು ನಿರ್ಮಾಣ ಸಂಸ್ಥೆಯ ಉದ್ಯೋಗಿ ಎಂದು ಪರಿಚಯಿಸಿಕೊಂಡು, ಭಾರತೀಯ ಯುದ್ಧನೌಕೆಗಳು ಹಾಗೂ ಕಮಾಂಡಿಂಗ್ ಆಫೀಸರ್ಗಳ ರಹಸ್ಯ ವಿವರಗಳನ್ನು ಪಡೆಯಲು ಯತ್ನಿಸಿದ್ದಳು.
ಇದನ್ನೂ ಓದಿ: ವಿಧಾನಸೌಧದಲ್ಲಿ ‘ಉರ್ದು ಹಬ್ಬ’ ಆಚರಣೆಗೆ ಸರ್ಕಾರದ ನಿರ್ಧಾರ: ವೋಟ್ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಆಕ್ರೋಶ
ಅನ್ವಿ ಮೆಹ್ತಾ ಎಂಬ ಮತ್ತೊಬ್ಬ ಏಜೆಂಟ್, ದೆಹಲಿಯ ಮನಶಾಸ್ತ್ರಜ್ಞೆ (Psychologist) ಎಂದು ನಂಬಿಸಿ, ವಿಡಿಯೋ ಕರೆಗಳ ಮೂಲಕ ನೌಕಾನೆಲೆಯ ಸಂವೇದನಾಶೀಲ ಪ್ರದೇಶಗಳನ್ನು ತೋರಿಸುವಂತೆ ನೌಕಾಪಡೆ ಸಿಬ್ಬಂದಿಯನ್ನು ಉಸಿರುಗಟ್ಟಿಸುವ ಯತ್ನ ನಡೆಸಿದ್ದಳು.
ಒಟಿಪಿ ಕದ್ದು ಕ್ರಿಪ್ಟೋಕರೆನ್ಸಿ ಮೂಲಕ ಹಣದ ಆಮಿಷ!
ಪಾಕಿಸ್ತಾನದ ಈ ಗೂಢಚಾರರು ಭಾರತೀಯ ಸಿಬ್ಬಂದಿಯಿಂದ ವಾಟ್ಸಾಪ್ ಒಟಿಪಿ (OTP) ಪಡೆದು, ಆ ಒಟಿಪಿಗಳನ್ನು ಬಳಸಿ ಪಾಕಿಸ್ತಾನದಲ್ಲೇ ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸುತ್ತಿದ್ದರು! ನಂತರ ಈ ವಾಟ್ಸಾಪ್ ಖಾತೆಗಳ ಮೂಲಕವೇ ಇತರ ರಕ್ಷಣಾ ಸಿಬ್ಬಂದಿಯನ್ನು ಹನಿಟ್ರ್ಯಾಪ್ ಮಾಡಲು ಹಾಗೂ ರಹಸ್ಯ ಮಾಹಿತಿ ಕದಿಯಲು ಬಳಸಿಕೊಳ್ಳುತ್ತಿದ್ದರು.
ಮಾಹಿತಿ ಒದಗಿಸಿದ ರಕ್ಷಣಾ ಸಿಬ್ಬಂದಿಗೆ ಕ್ರಿಪ್ಟೋಕರೆನ್ಸಿ (Cryptocurrency) ಮತ್ತು ಇತರ ಮಧ್ಯವರ್ತಿಗಳ ಮುಖಾಂತರ ಪಾಕಿಸ್ತಾನದಿಂದ ನೇರವಾಗಿ ಹಣಕಾಸಿನ ನೆರವು ನೀಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬಯಲಾಗಿದೆ.
ಅಕ್ಟೋಬರ್ 1 ರಂದು ಪ್ರಾರಂಬವಾದ ‘ಆಪರೇಷನ್ ಫೈರ್ವಾಲ್-2026’ ನಡಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 13 ನೌಕಾಪಡೆ ಸಿಬ್ಬಂದಿ ಸೇರಿದಂತೆ 18 ಶಂಕಿತರ ಪಾತ್ರದ ಕುರಿತು ತೀವ್ರ ವಿಚಾರಣೆ ಜಾರಿಯಲ್ಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

