ಪುತ್ತೂರು: ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ’ವು ತನ್ನ ಆಡಳಿತ ಮಂಡಳಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಬ್ಬರು ಅನುಭವಿ ವೃತ್ತಿಪರ ನಿರ್ದೇಶಕರನ್ನು ನೇಮಕ ಮಾಡಿಕೊಂಡಿದೆ.
ಶ್ರೀಮತಿ ಪುಷ್ಪಲತಾ ಎನ್.: ಮಂಗಳೂರಿನ ಪಾಂಡೇಶ್ವರ ನಿವಾಸಿಯಾದ ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಬ್ಯಾಂಕಿಂಗ್ ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು ‘ಸರ್ಟಿಫೈಡ್ ಅಸೋಸಿಯೇಟ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್’ ಪದವಿಯನ್ನೂ ಹೊಂದಿದ್ದಾರೆ.

ಶ್ರೀ ಅನಂತಕೃಷ್ಣ ಬಿ.: ಸುಳ್ಯದ ಮಂಡೆಕೋಲು ಗ್ರಾಮದ ನಿವಾಸಿಯಾದ ಇವರು ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಸಹಕಾರಿ ಕ್ಷೇತ್ರದ ನಾಡಿಮಿಡಿತ ಅರಿತವರಾಗಿದ್ದಾರೆ.
ಸಂಘದ ಸಾಧನೆ ಮತ್ತು ಸೌಲಭ್ಯಗಳು:

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಘವು ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟು 19 ಶಾಖೆಗಳನ್ನು ಹೊಂದಿದೆ. ಶೀಘ್ರದಲ್ಲೇ ಮೂರು ಹೊಸ ಶಾಖೆಗಳು ಆರಂಭವಾಗಲಿವೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಸಂತ ನಾಯಕ್ ಎ. ತಿಳಿಸಿದ್ದಾರೆ.
ಇದನ್ನೂ ಓದಿ: ಸರಸ್ವತಿ ಸಹಕಾರಿ ಸಂಘದ ಮೆಗಾ ಪ್ಲಾನ್: 2026-27ರಲ್ಲಿ ರೂ. 1001 ಕೋಟಿ ವ್ಯವಹಾರದ ಗುರಿ; ಮೂರು ನೂತನ ಶಾಖೆಗಳ ಆರಂಭ
ವಿಶೇಷ ಆಕರ್ಷಣೆಗಳು:
ಠೇವಣಿ ಬಡ್ಡಿದರ: 400 ದಿನಗಳ ಠೇವಣಿಗೆ ಸಾಮಾನ್ಯ ಸದಸ್ಯರಿಗೆ 9.30% ಮತ್ತು ವಿಶೇಷ ಠೇವಣಿಗಳಿಗೆ 9.70% ರಷ್ಟು ಆಕರ್ಷಕ ಬಡ್ಡಿದರ ನೀಡಲಾಗುತ್ತಿದೆ.
ಇತರ ಸೇವೆಗಳು: ವಿವಿಧ ಸಾಲಗಳು, ವಿಮೆ (ಜೀವ, ಆರೋಗ್ಯ, ಸಾಮಾನ್ಯ), ಪಾನ್ ಕಾರ್ಡ್ ಸೇವೆ ಹಾಗೂ ಆಯ್ದ ಶಾಖೆಗಳಲ್ಲಿ ಸೇಫ್ ಲಾಕರ್ ಸೌಲಭ್ಯ ಲಭ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ಇಲ್ಲಿ ಕ್ಲಿಕ್ ಮಾಡಿ

